ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಾಸ್ತು ಲೋಕ

ನೀವು ಮಣ್ಣಿನ ಪಾತ್ರೆ, ಮಡಕೆ ಬಳಸುತ್ತೀರಾ? ಹಾಗಾದ್ರೆ ತಪ್ಪದೇ ಈ ವಾಸ್ತು ನಿಯಮ ಪಾಲಿಸಲೇ ಬೇಕು

ಮಣ್ಣಿನ ಮಡಕೆಯನ್ನು ಯಾವ ದಿಕ್ಕಿನಲ್ಲಿಡಬೇಕು ಗೊತ್ತೆ?

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಸರಿಯಾದ ಸ್ಥಳದಲ್ಲಿ ಮಾಡುವುದು ಮುಖ್ಯ. ನೀರಿನ ಪಾತ್ರೆಯನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ಪ್ರವೇಶಿಸುವ ಸಾಧ್ಯತೆ ಇದೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ಪಾತ್ರೆಗಳು ಮಂಗಳ ಗ್ರಹದ ಸಂಕೇತವಾಗಿದ್ದು, ಸಂತೋಷ, ಭಾಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ ಎಂಬ ನಂಬಿಕೆ ಇದೆ.

Vastu Tips: ಹೊಸ ವರ್ಷಕ್ಕೆ ಮನೆಯ ಕ್ಯಾಲೆಂಡರ್‌ ಬದಲಾಯಿಸಿದ್ರಾ? ಈ ದಿಕ್ಕಿನಲ್ಲೇ ಅಳವಡಿಸಿ

ಮನೆಯ ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ತೂಗು ಹಾಕಬೇಕು ಗೊತ್ತೆ?

ವಾಸ್ತು ಶಾಸ್ತ್ರದ ಪ್ರಕಾರ ಆಯಾ ವಸ್ತುಗಳನ್ನು ಸರಿಯಾದ ಸ್ಥಾನದಲ್ಲಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿ, ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ ಮತ್ತು ಕುಟುಂಬದ ಸದಸ್ಯರು ತಮ್ಮ ಜೀವನದಲ್ಲಿ ಸುಧಾರಣೆ ಕಾಣುತ್ತಾರೆ. ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬಹುತೇಕ ಜನರು ತಮ್ಮ ಮನೆಯಲ್ಲಿ ಹಳೆಯ ಕ್ಯಾಲೆಂಡರ್ ತೆಗೆದು, ಹೊಸ ಕ್ಯಾಲೆಂಡರ್‌ನ್ನು ಅಳವಡಿಸುವುದು ವಾಡಿಕೆ. ಕ್ಯಾಲೆಂಡರ್‌ ಅಳವಡಿಸುವಾಗಲೂ ವಾಸ್ತು ಶಾಸ್ತ್ರ ಸೂಚಿಸುವ ದಿಕ್ಕಕ್ಕೇ ಪರಿಗಣಿಸಬೇಕು.

Vastu Tips: ದಾಸವಾಳದಲ್ಲಿದೆ ವೈವಾಹಿಕ ಜೀವನದ ಖುಷಿಯನ್ನು ಹೆಚ್ಚಿಸುವ ಶಕ್ತಿ; ವಾಸ್ತು ಪ್ರಕಾರ ಹೀಗೆ ಬಳಸಿ

ಮನೆಯಲ್ಲಿ ಈ ಗಿಡ ಇದ್ದರೆ ಸಂಪತ್ತು, ವೈವಾಹಿಕ ಆನಂದ ಅಧಿಕ!

ವಾಸ್ತು ಶಾಸ್ತ್ರದಲ್ಲಿ ದಾಸವಾಳದ ಹೂವಿನ ಕುರಿತಾಗಿ ತಿಳಿಸಿರುವ ಈ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿದರೆ ಆರ್ಥಿಕ ಸ್ಥಿತಿ ಮಾತ್ರವಲ್ಲದೆ ಜೀವನದ ದಿಕ್ಕೇ ಬದಲಾಗುವ ಸಾಧ್ಯತೆ ಇದೆ. ಹಣದ ಕೊರತೆ, ಜೀವನದಲ್ಲಿ ಆಗುತ್ತಿರುವ ಹಿನ್ನಡೆ, ಅಡೆತಡೆಗಳಿಂದ ಮುಕ್ತಿ ಪಡೆಯಲು ದಾಸವಾಳ ಹೂವು ಸಹಕಾರಿಯಾಗಿದ್ದು, ಮನೆಯ ಸಮೃದ್ಧಿ ಹೆಚ್ಚಾಗಲು ಅನುಸರಿಸಬೇಕಾದ ಪರಿಹಾರಗಳನ್ನು ಇಲ್ಲಿ ತಿಳಿದುಕೊಳ್ಳೋಣ.

Vastu Tips: ಮನೆಯ ಆರ್ಥಿಕ ಸಮಸ್ಯೆಗೆ ಕರ್ಪೂರದಲ್ಲಿದೆ ಪರಿಹಾರ: ವಾಸ್ತು ಸಲಹೆ ಪ್ರಕಾರ ಹೀಗೆ ಬಳಸಿ

ವಾಸ್ತು ದೋಷ ನಿವಾರಣೆಗೆ ಕರ್ಪೂರ ಹೀಗೆ ಬಳಸಿ

ವಾಸ್ತುಶಾಸ್ತ್ರದಲ್ಲಿ ಕರ್ಪೂರಕ್ಕೆ ವಿಶೇಷ ಮಹತ್ವ ಇದ್ದು, ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಲು ಇದು ಸಹಕಾರಿಯಾಗುತ್ತದೆ. ಒಂದೇ ಕರ್ಪೂರದಿಂದ ಅನೇಕ ವಾಸ್ತು ದೋಷಗಳನ್ನು ಶಮನಗೊಳಿಸಿ, ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಹೆಚ್ಚಿಸಬಹುದು. ಇದರೊಂದಿಗೆ, ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದಕ್ಕಿದೆ ಎಂದು ನಂಬಲಾಗುತ್ತದೆ. ಹಾಗಾದರೆ, ಕರ್ಪೂರದ ಸಹಾಯದಿಂದ ಮನೆಯ ವಾಸ್ತು ದೋಷಗಳನ್ನು ಹೇಗೆ ನಿವಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

Vastu Tips: ಮೊಬೈಲ್ ಹಿಂದಿನ ಕವರ್‌ನಲ್ಲಿ ಹಣ ಇಡುತ್ತೀರಾ? ಈ ಬಗ್ಗೆ ವಾಸ್ತು ಹೇಳೋದು ಏನು ಗೊತ್ತಾ?

ತಪ್ಪಿಯೂ ಹಣವನ್ನು ಈ ಜಾಗದಲ್ಲಿ ಇಡಬೇಡಿ

ಹಣ ಎಂದರೆ ಸಾಕ್ಷಾತ್ ಲಕ್ಷ್ಮೀ ದೇವಿಯ ಸ್ವರೂಪ ಎಂದೇ ಪರಿಸಗಣಿಸಲಾಗುತ್ತದೆ. ಆದ್ದರಿಂದ ಹಣವನ್ನು ಅತ್ಯಂತ ಗೌರವದಿಂದ ಕಾಣಬೇಕು. ಹಣಕ್ಕೆ ಅವಮಾನ ಮಾಡುವ ಮನೆಯಲ್ಲಿ ಲಕ್ಷ್ಮೀ ದೇವಿ ನಿಲ್ಲುವುದಿಲ್ಲ, ಅಲ್ಲದೇ ಆ ಮನೆಗೆ ದಾರಿದ್ರ್ಯ ಅಂಟುಕೊಳ್ಳುತ್ತದೆ. ತಾಯಿ ಲಕ್ಷ್ಮೀಯ ಸ್ವರೂಪವಾದ ಹಣವನ್ನು ಇಡುವ ಸ್ಥಳದ ಬಗ್ಗೆಯೂ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ.

Vastu Tips: ಈ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟುಕೊಂಡ್ರೆ ದುಡ್ಡಿನ ಹೊಳೆ ಹರಿಯೋದು ಪಕ್ಕಾ!

ಅದೃಷ್ಟ ತರಲಿದೆ ಉತ್ತರ ದಿಕ್ಕಿನಲ್ಲಿ ಇಡುವ ಈ ವಸ್ತುಗಳು

ಉತ್ತರ ದಿಕ್ಕಿನಲ್ಲಿ ವಾಸ್ತು ಸಲಹೆ ಪ್ರಕಾರ ಕೆಲವೊಂದು ವಸ್ತುಗಳನ್ನು ಇಡುವುದರಿಂದ ಕುಬೇರ ದೇವನ ಅನುಗ್ರಹ ದೊರೆತು ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಯೂರುತ್ತಾಳೆ. ಮನೆಯಲ್ಲಿ ಶುಭಫಲಗಳು, ಐಶ್ವರ್ಯ ಹಾಗೂ ಸಮೃದ್ಧಿಯ ವೃದ್ಧಿಯಾಗುತ್ತದೆ. ಅಲ್ಲದೇ ದಿಕ್ಕು ಸಂಪತ್ತಿನ ಅಧಿಪತಿಯಾದ ಕುಬೇರನಿಗೆ ಸಂಬಂಧಿಸಿದ್ದಾಗಿರುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಅಲ್ಲದೇ ಉತ್ತರ ದಿಕ್ಕಿನಲ್ಲಿ ವಾಸ್ತುಸಮ್ಮತ ವಸ್ತುಗಳನ್ನು ಇಟ್ಟರೆ, ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿಯ ವಾತಾವರಣ ನಿರ್ಮಾಣವಾಗುತ್ತದೆ

ಭೂಮಿಗೆ ಏಲಿಯನ್ಸ್ ಆಗಮನ, ಭೀಕರ ಭೂಕಂಪ; ಬಾಬಾ ವಂಗಾ 2026ರ ಭವಿಷ್ಯದಲ್ಲಿ ಹೇಳಿದ್ದೇನು?

ಮಾರುಕಟ್ಟೆ ಕುಸಿತ, ಭೂಕಂಪ: ಬಾಬಾ ವಂಗಾ ಭವಿಷ್ಯವಾಣಿ

ಅನ್ಯಲೋಕದವರು ಭೂಮಿಯನ್ನು ಸಂಪರ್ಕಿಸುತ್ತಾರೆ, ಮಾರುಕಟ್ಟೆಯಲ್ಲಿ ಕುಸಿತ ಮುಂದುವರಿಯುತ್ತದೆ, ಏಷ್ಯಾ ಅದರಲ್ಲೂ ವಿಶೇಷವಾಗಿ ಚೀನಾ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತದೆ..ಇವೆಲ್ಲವೂ 2026ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು. ಇದು ನಿಜವಾಗುವ ಲಕ್ಷಣಗಳು ಗೋಚರವಾಗಿದ್ದರೂ ಸ್ಪಷ್ಟತೆಗೆ ಕಾಯಬೇಕಿದೆ. 2026ಕ್ಕೆ ಬಾಬಾ ವಂಗಾ ನುಡಿದಿರುವ ಹಲವು ಭವಿಷ್ಯವಾಣಿಗಳ ಕುರಿತು ಮಾಹಿತಿ ಇಲ್ಲಿವೆ.

Vastu Tips: ಅಡುಗೆಮನೆಯಲ್ಲಿ ಯಾವ ದಿಕ್ಕಿಗೆ ಪಾತ್ರೆಗಳನ್ನು ಇಟ್ಟರೆ  ಒಳ್ಳೆಯದು ಗೊತ್ತಾ? ಇಲ್ಲಿದೆ ಕಿಚನ್‌ ವಾಸ್ತು ಟಿಪ್ಸ್

ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಈ ದಿಕ್ಕಿನಲ್ಲಿಡಿ

ವಾಸ್ತು ನಿಯಮಗಳ ಪ್ರಕಾರ ಅಡುಗೆ ಮನೆಯನ್ನು ಮನೆಗಳಲ್ಲಿ ಅಡುಗೆ ಮನೆ ತುಂಬಾ ಸ್ವಚ್ಛವಾಗಿ, ಎಲ್ಲಾ ಪಾತ್ರೆಗಳು ಸರಿಯಾದ ಜಾಗದಲ್ಲಿ ವ್ಯವಸ್ಥಿತವಾಗಿ ಇರುತ್ತವೆ. ಆದರೆ ಇನ್ನು ಕೆಲ ಮನೆಗಳಲ್ಲಿ ಅಡುಗೆ ಮನೆ ಅಸ್ತವ್ಯಸ್ತವಾಗಿದ್ದು, ಪಾತ್ರೆಗಳು ಎಲ್ಲೆಂದರಲ್ಲಿ ಹರಡಿಕೊಂಡಿರುತ್ತವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇದು ದಾರಿದ್ರ್ಯದ ಸಂಕೇತವಾಗಿದ್ದು, ಮನೆಯ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

Vastu tips: ಮಲಗುವ ಕೋಣೆಯಲ್ಲಿ ಈ ಒಂದು ಮೂರ್ತಿ ಇಟ್ಟರೆ ದಾಂಪತ್ಯ ಜೀವನ ಸುಖಕರವಾಗುತ್ತದೆ

ಮನೆಯ ಅಬಿವೃದ್ಧಿ ಹೆಚ್ಚಿಸುತ್ತದೆ ಈ ವಸ್ತುಗಳು

ವಾಸ್ತು ಪ್ರಬಲನಾಗಲು ಮನೆಯ ವಾಸ್ತು ಸರಿ ಇರಬೇಕು. ಮನೆಯ ಯಾವ ಯಾವ ದಿಕ್ಕಿನಲ್ಲಿ ಏನೇನಿದ್ದರೆ ಮನೆಯ ವಾಸ್ತು ಬಲವಾಗಿರುತ್ತದೆ...? ವಾಸ್ತು ಸಲಹೆ ಪ್ರಕಾರ ಮನೆಯಲ್ಲಿ ಯಾವ ವಸ್ತುಗಳನ್ನು ಇಟ್ಟರೆ ಅಭಿವೃದ್ಧಿ ಆಗುತ್ತದೆ? ಎಂಬುದನ್ನು ತಿಳಿದುಕೊಳ್ಳೋಣ.

ವಾಸ್ತು ಪ್ರಕಾರ ತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಈ ಗಿಡಗಳನ್ನು ನೆಡಬೇಡಿ

ದಕ್ಷಿಣ ದಿಕ್ಕಿನಲ್ಲಿ ಈ ಗಿಡ ನೆಟ್ಟರೆ ಸಮಸ್ಯೆ ತಪ್ಪಿದ್ದಲ್ಲ

Vastu Tips: ವಾಸ್ತು ನಿಯಮಗಳನ್ನು ಕಡೆಗಣಿಸಿ ಗಿಡಗಳನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ, ಅದೇ ಸಸ್ಯಗಳು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಎಚ್ಚರಿಸುತ್ತದೆ. ವಿಶೇಷವಾಗಿ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಲವು ಗಿಡಗಳನ್ನು ಅಶುಭ ಎಂದು ಹೇಳಲಾಗುತ್ತದೆ. ವಾಸ್ತು ಸಲಹೆಗಳ ಪ್ರಕಾರ ಯಾವ ಗಿಡಗಳನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು? ಅದರ ಪರಿಣಾಮಗಳೇನು? ಇಲ್ಲಿದೆ ವಿವರ.

Vastu Tips: ತಪ್ಪಿಯೂ ಮನೆಯ ಈ ಭಾಗದಲ್ಲಿ ಟಿವಿ ಇಡಬೇಡಿ

ತಪ್ಪಿಯೂ ನಿಮ್ಮ ಮನೆಯ ಈ ಭಾಗದಲ್ಲಿ ಟಿವಿ ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ವಿದ್ಯುತ್ ಉಳಿತಾಯವಾಗುವುದರ ಜತೆಗೆ ಮನೆಯ ಸಮೃದ್ಧಿ, ಸಂತೋಷ ಹಾಗೂ ಕುಟುಂಬ ಸದಸ್ಯರ ಆರೋಗ್ಯದಲ್ಲಿಯೂ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನಲಾಗುತ್ತದೆ. ಹಾಗಾದರೆ ವಾಸ್ತು ಸಲಹೆಗಳ ಪ್ರಕಾರ ಟಿವಿ ಮತ್ತು ಫ್ರಿಡ್ಜ್‌ಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ಅದರ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.

Vastu Tips: ನಿಮ್ಮ ಮನೆಯ ಕಿಟಕಿ-ಬಾಗಿಲು ಈ ದಿಕ್ಕಿನಲ್ಲಿದೆಯೇ? ಹಾಗಾದರೆ ಕಂಟಕ ತಪ್ಪಿದ್ದಲ್ಲ!

ತಪ್ಪಿಯೂ ಒಂದೇ ದಿಕ್ಕಿನಲ್ಲಿ ಮೂರು ಬಾಗಿಲು ಮಾಡಬೇಡಿ

ಮನೆಯ ಕಿಟಕಿ ಮತ್ತು ಬಾಗಿಲುಗಳಿಂದ ಹೇಗೆ ಒಳಗೆ ಸಕಾರಾತ್ಮಕ ಶಕ್ತಿಗಳು ಬರುತ್ತವೆಯೋ ಹಾಗೆಯೇ ನಕಾರಾತ್ಮಕ ಶಕ್ತಿಗಳೂ ಕೂಡ ಚಲಿಸುತ್ತವೆ. ಮನೆಯಲ್ಲಿರುವ ಕಿಟಕಿ ಮತ್ತು ಬಾಗಿಲುಗಳು ವಾಸ್ತು ಪ್ರಕಾರ ಇದ್ದಲ್ಲಿ ಮಾತ್ರ ನಕಾರಾತ್ಮಕ ಶಕ್ತಿಗಳಿಂದ ದೂರ ಉಳಿಯಬಹುದಾಗಿದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಕಿಟಕಿ ಮತ್ತು ಬಾಗಿಲುಗಳು ಯಾವ ದಿಕ್ಕಿಗೆ ಇರಬೇಕು? ವಾಸ್ತು ಪ್ರಕಾರ ಕಿಟಕಿ, ಬಾಗಿಲು ಇಡುವುದರ ಆಗುವ ಪ್ರಯೋಜನಗಳೇನು ತಿಳಿಯೋಣ ಬನ್ನಿ.

Vastu Tips: ಮನೆಯಲ್ಲಿರುವ ಈ ವಸ್ತುಗಳು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ

ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಈ ವಸ್ತುಗಳು

ಮನೆಯೊಳಗೆ ಇಡುವ ಕೆಲವು ವಸ್ತುಗಳ ಕಾರಣಕ್ಕೂ ಜೀವನದಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆರೋಗ್ಯ, ಉದ್ಯೋಗ ಮತ್ತು ಹಣಕಾಸು ವ್ಯವಹಾರಗಳು ಸುಗಮವಾಗಿರಲು ಮನೆಯಲ್ಲಿರುವ ವಸ್ತುಗಳು ಹಾಗೂ ಅವುಗಳ ದಿಕ್ಕು ಅತ್ಯಂತ ಮುಖ್ಯ. ಆ ವಸ್ತುಗಳ ಸ್ಥಾನದಲ್ಲಿ ಸಣ್ಣ ಬದಲಾವಣೆಯಾದರೂ ಋಣಾತ್ಮಕ ಶಕ್ತಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾದ್ರೆ ವಾಸ್ತು ಸಲಹೆ ಪ್ರಕಾರ ಯಾವ ವಸ್ತುಗಳು ವಾಸ್ತು ದೋಷವನ್ನು ಉಂಟು ಮಾಡುತ್ತದೆ..? ಮನೆಯಲ್ಲಿ ಯಾವ ವಸ್ತುಗಳನ್ನು ಹಿಡಬಾರದು...? ಎಂಬುದನ್ನು ನೋಡೋಣ..

Vastu Tips: ಕುಬೇರ ದಿಕ್ಕು ಅಥವಾ ಅಗ್ನಿ ಮೂಲೆ- ಅಡುಗೆ ಮನೆ ಎಲ್ಲಿದ್ದರೆ ಒಳ್ಳೆಯದು? ಇಲ್ಲಿದೆ ಉತ್ತರ

ನಿಮ್ಮ ಅಡುಗೆ ಮನೆಯ ಸಿಂಕ್ ಈ ದಿಕ್ಕಿನಲ್ಲಿದ್ದರೆ ಉತ್ತಮ!

ಅಡುಗೆ ಮನೆಯಲ್ಲಿ ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಇಟ್ಟರೂ ವಾಸ್ತು ದೋಷ ಎದುರಾಗಲಿದ್ದು, ಮನೆಯಲ್ಲಿ ಕಲಹ ಅಸಮಾಧಾನದ ವಾತಾವರಣ ನಿರ್ಮಾಣವಾಗುತ್ತದೆ. ಅಡುಗೆ ಮನೆಯಲ್ಲಿ ವಾಸ್ತು ಸಲಹೆಯ ಪ್ರಕಾರ ಯಾವ ವಸ್ತುಗಳನ್ನು ಇಡಬಾರದು..? ಸಿಂಕ್ ಎಲ್ಲಿರಬೇಕು..? ಅಡುಗೆ ಮನೆ ಕುಬೇರ ಅಥವಾ ಅಗ್ನಿ ಮೂಲೆಯಲ್ಲಿರಬೇಕಾ..? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Vastu Tips: ಮನೆಯಲ್ಲಿ ಈ ವಸ್ತುಗಳು ಖಾಲಿಯಾದ್ರೆ ಆರ್ಥಿಕ ಸಂಕಷ್ಟ ಪಕ್ಕಾ!

ತಪ್ಪಿಯೂ ನಿಮ್ಮ ಮನೆಯ ಸ್ನಾನದ ಕೋಣೆಯಲ್ಲಿ ಕಪ್ಪು ಬಕೆಟ್ ಇಡಬೇಡಿ

ವಾಸ್ತುಶಾಸ್ತ್ರದ ಕೆಲವು ಸರಳ ನಿಯಮಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಿಸಿಕೊಳ್ಳಬಹುದು. ವಿಶೇಷವಾಗಿ ಮನೆಯಲ್ಲಿ ಕೆಲವೊಂದು ವಸ್ತುಗಳು ಯಾವತ್ತೂ ಖಾಲಿಯಾಗಬಾರದು ಎಂದು ಶಾಸ್ತ್ರಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಆ ವಸ್ತುಗಳು ಖಾಲಿಯಾಗಿದ್ದರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು...? ಇದರ ಬಗ್ಗೆ ವಾಸ್ತು ಸಲಹೆಗಳು ಏನು- ಎಂಬುದನ್ನು ತಿಳಿದುಕೊಳ್ಳೋಣ.

Vastu Tips: ಮನೆಯಲ್ಲಿ ಸುಗಂಧರಾಜ ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ, ಅದೃಷ್ಟ  ನಿಮ್ಮನ್ನು ಹುಡುಕಿಕೊಂಡು ಬರುತ್ತದೆ!

ಮನೆಯ ವಾಸ್ತು ದೋಷ ನಿವಾರಿಸುತ್ತದೆ ಈ ಸಸ್ಯ

ಸುಗಂಧರಾಜ ಸಸ್ಯವನ್ನು ಮನೆಯಲ್ಲಿ ಬೆಳೆಸುವುದರಿಂದ ಸುತ್ತಮುತ್ತಲಿನ ವಾತಾವರಣ ಸದಾ ಸುಗಂಧ ಭರಿತವಾಗಿರುತ್ತದೆ. ಅಷ್ಟೇ ಅಲ್ಲ, ವಾಸ್ತು ದೃಷ್ಟಿಯಿಂದಲೂ ಈ ಗಿಡವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.ಹಾಗಾದ್ರೆ ಬನ್ನಿ ಸುಗಂಧ ರಾಜ ಗಿಡ ನೆಡುವಾಗ ಯಾವೆಲ್ಲ ವಾಸ್ತು ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ...

Vastu Tips: ತಪ್ಪಿಯೂ ಮನೆಯಲ್ಲಿ ಈ ಬಣ್ಣದ ಗಡಿಯಾರ ಇಡಬೇಡಿ; ವಾಸ್ತು ಎದುರಾಗಬಹುದು..!

ಮನೆಯ ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಈ ಬಣ್ಣದ ಗಡಿಯಾರ

Vastu Tips: ವಾಸ್ತು ಶಾಸ್ತ್ರದ ದೃಷ್ಟಿಯಿಂದ ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಮಹತ್ವವಿದೆ. ಅದರಲ್ಲೂ ಮನೆಯ ಗಡಿಯಾರವು ಕೇವಲ ಸಮಯವನ್ನು ತೋರಿಸುವ ವಸ್ತುವಲ್ಲ, ಅದು ಮನೆಯ ಶಕ್ತಿಯ ಹರಿವಿನ ಮೇಲೂ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ. ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇರಿಸದೇ ಹೋದರೆ, ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುವ ಸಾಧ್ಯತೆ ಇದೆ.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಚಪ್ಪಲಿಯನ್ನು ಹೀಗೆ ಇಡಲೇಬಾರದು! ಲಕ್ಷ್ಮೀ ದೇವಿ ಮುನಿಯುತ್ತಾಳೆ!

ಮನೆ ಮುಂದೆ ಚಪ್ಪಲಿ ಬಿಟ್ಟರೆ ದಾರಿದ್ರ್ಯ ಖಚಿತ!

ಮನೆಯಲ್ಲಿ ಹಿರಿಯರು ಚಪ್ಪಲಿಯನ್ನು ಅಲ್ಲಿ ಬಿಡಬೇಡ, ಇಲ್ಲಿ ಬಿಡಬೇಡ, ಮನೆಯ ಎದುರು ಇಡಬೇಡ ಎನ್ನುವುದನ್ನು ಕೇಳಿರುತ್ತೇವೆ. ಇವೆಲ್ಲಾ ಯಾಕೆ ಮಾಡಬಾರದು ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ವಾಸ್ತು ಶಾಸ್ತ್ರದಲ್ಲಿದ್ದು, ಚಪ್ಪಲಿಯನ್ನು ಎಲ್ಲಿ ಹೇಗೆ ಇಡಬೇಕು ಎಂಬ ಕುರಿತು ಕೆಲ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.

Vastu Tips: ದಿಂಬಿಗೆ ತಲೆ ಇಟ್ಟ ತಕ್ಷಣ ಸುಖ ನಿದ್ರೆ ನಿಮ್ಮದಾಗಬೇಕೇ..? ಅದಕ್ಕಾಗಿ ಈ ಸಿಂಪಲ್ ಟಿಪ್ಸ್ ಅನುಸರಿಸಿ

ನಿದ್ರಾದೇವಿಯ ಆಲಿಂಗನಕ್ಕೆ ಇಲ್ಲಿದೆ ವಾಸ್ತು ಪರಿಹಾರ!

ಕೆಲವರಿಗೆ ರಾತ್ರಿ ನಿದ್ದೆಯಲ್ಲಿ ಕೆಟ್ಟ ಕನಸುಗಳು ಕಾಡುತ್ತವೆ. ಇದು ನಮ್ಮ ನಿದ್ದೆಯನ್ನು ಹಾಳು ಮಾಡಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಅಥವಾ ಕಚೇರಿಯಲ್ಲಿ ನೆಗೆಟಿವಿಟಿಯನ್ನು ದೂರಗೊಳಿಸಿ ಪಾಸಿಟಿವಿಟಿಯನ್ನು ಹೆಚ್ಚುಗೊಳಿಸಲು ಈ ಸರಳ ಟಿಪ್ಸ್ ಸಹಕಾರಿಯಾಗಿದೆ. ಈ ಲೇಖನದಲ್ಲಿ, ನಾವು ಮಲಗುವ ಸಂದರ್ಭದಲ್ಲಿ ಅನುಸರಿಸಬಹುದಾದ ಸಿಂಪಲ್ ವಾಸ್ತು ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ.

Vasthu Tips: ಮನೆಯಲ್ಲಿ ಆಂಜನೇಯ ಫೋಟೋವನ್ನು ಗೋಡೆಯ ಮೇಲೆ ಹಾಕುವಾಗ ಈ ವಾಸ್ತು ಸಲಹೆಗಳನ್ನು ಪಾಲಿಸಿ

ಮನೆಯಲ್ಲಿ ಹನುಮಾನ್ ಫೋಟೋ ಹಾಕಲು ಇಲ್ಲಿದೆ ವಾಸ್ತು ಟಿಪ್ಸ್...

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ವಾಸ್ತುವಿನಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ನೀವು ಎಲ್ಲವನ್ನೂ ವಾಸ್ತು ಪ್ರಕಾರ ಮಾಡಿದರೆ ನಿಮ್ಮ ಜೀವನವು ತುಂಬಾ ಉತ್ತಮವಾಗಿರುತ್ತದೆ. ಇದಕ್ಕೆ ದೇವರ ಫೋಟೋವೂ ಹೊರತಾಗಿಲ್ಲ.. ನಾವಿಂದು ನಿಮಗೆ ಆಂಜನೇಯ ಸ್ವಾಮಿ ಫೋಟೋ ಎಲ್ಲಿ ಹಾಕಬೇಕು ಎಂಬುದನ್ನು ತಿಳಿಸಿದ್ದೇವೆ.

Vastu Tips: ಹಣ ಬರುತ್ತಿಲ್ಲ, ಬಂದ ಹಣ ಉಳಿಯುತ್ತಿಲ್ಲವೆಂಬ ಚಿಂತೆಯೇ? ಹಾಗಾದ್ರೆ ಚಿಂತೆ ಬಿಡಿ ಈ ಸಿಂಪಲ್ ಪರಿಹಾರಗಳನ್ನು ಮಾಡಿ

ಪರ್ಸ್ ಗೂ ಇದೆ ಸರಳ ವಾಸ್ತು

ಹಣದ ಯಾವಾಗ ಬರುತ್ತದೆ ಯಾವಾಗ ಹೋಗುತ್ತದೆ ಗೊತ್ತಾಗುವುದಿಲ್ಲ. ಕೆಲವರು ಎಷ್ಟೇ ದುಡಿದರೂ ಹಣ ಮಾತ್ರ ನಿಲ್ಲುವುದಿಲ್ಲ. ಅದಕ್ಕೆ ಏನು ಕಾರಣ ಅಂತ ಬಹುತೇಕರು ಚಿಂತೆ ಮಾಡುತ್ತಿರುತ್ತಾರೆ. ಇದಕ್ಕೆ ವಾಸ್ತುವೂ ಒಂದು ಕಾರಣ. ಬಹುತೇಕರು ಪರ್ಸು, ಬ್ಯಾಗುಗಳ ವಾಸ್ತು ಬಗ್ಗೆ ಆಲೋಚನೆ ಮಾಡುವುದಿಲ್ಲ. ಎಂದಿಗೂ ಹಣದ ಕೊರತೆಯಾಗದಂತೆ ನೋಡಿಕೊಳ್ಳಲು ಯಾವ ಐದು ವಸ್ತುಗಳನ್ನು ಪರ್ಸ್ನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Vastu Tips: ಮನೆಯಲ್ಲಿ ಬಾಲ್ಕನಿ ನಿರ್ಮಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ

ಬಾಲ್ಕನಿ ನಿರ್ಮಿಸುವಾಗ ತಜ್ಞರ ಈ ಸಲಹೆ ಪಾಲಿಸಿ

ಬಾಲ್ಕನಿ ತಪ್ಪು ದಿಕ್ಕಿನಲ್ಲಿ ಇದ್ದರೆ, ಅದು ಮನೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಾವಿಂದು, ಮನೆಯ ಬಾಲ್ಕನಿ ಯಾವ ದಿಕ್ಕಿನಲ್ಲಿ ಇರಬೇಕು, ಯಾವ ರೀತಿಯ ವಾಸ್ತು ನಿಯಮಗಳನ್ನು ಪಾಲಿಸಬೇಕು ಮತ್ತು ಬಾಲ್ಕನಿಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

Vastu Tips: ಮನೆಯಲ್ಲಿ ಈ ಆನೆಯ ಪ್ರತಿಮೆಯನ್ನಿಟ್ಟರೆ ಸಂಪತ್ತು ಐಶ್ವರ್ಯ ವೃದ್ಧಿ ಗ್ಯಾರೆಂಟಿ..!

ಬೆಳ್ಳಿಯ ಆನೆ ಇಡುವಾಗ ಈ ನಿಯಮ ಪಾಲಿಸಿ

ಬೆಳ್ಳಿ ಆನೆಯನ್ನ ಮನೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟರೆ ವಾಸ್ತು ದೋಷಗಳು ನಿವಾರಣೆಗೊಳ್ಳುತ್ತವೆ ಹಾಗೂ ಅದೃಷ್ಟ ನಿಮ್ಮ ಮನೆಯ ಬಾಗಿಲನ್ನು ಹುಡುಕಿಕೊಂಡು ಬರುತ್ತದೆ. ಇದರೊಂದಿಗೆ ಪೌರಾಣಿಕ ನಂಬಿಕೆಗಳ ಪ್ರಕಾರ, ಆನೆಯ ಪ್ರತಿಮೆ ಗಣೇಶ ಮತ್ತು ಗೌತಮ ಬುದ್ಧನೊಂದಿಗೆ ನೇರ ಸಂಬಂಧ ಹೊಂದಿದ್ದು, ವಿಶೇಷವಾಗಿ, ಆನೆಯ ಪ್ರತಿಮೆ ಮನೆಯಲ್ಲಿನ ಕಷ್ಟಗಳು ಮತ್ತು ಅಡೆತಡೆಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗಿದೆ.

Vastu Tips: ತುಳಸಿ ಕಟ್ಟೆಯ ಬಳಿ ಈ ಗಿಡಗಳನ್ನು ನೆಡಿ; ಹಣದ ಸಮಸ್ಯೆ ನಿಮ್ಮ ಬಳಿ ಸುಳಿಯುವುದೂ ಇಲ್ಲ

ತುಳಸಿ ಜತೆಗೆ ಈ ಗಿಡ ನೆಟ್ಟರೆ ಹಣದ ಸಮಸ್ಯೆಗೆ ಪರಿಹಾರ

ತುಳಸಿ ಗಿಡದ ಜತೆ ವಾಸ್ತು ಪ್ರಕಾರ ಕೆಲ ಗಿಡಗಳನ್ನು ನೆಟ್ಟರೆ ಸಾಕಷ್ಟು ಶುಭಫಲಗಳು ಸಿಗಲಿದ್ದು, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಜತೆಗೆ ಹಣದ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲದೇ ಹಿಂದೂ ಸಂಪ್ರದಾಯದಲ್ಲಿ ಕೆಲ ಸಸ್ಯಗಳನ್ನು ಅತ್ಯಂತ ಪಾವಿತ್ರ್ಯವುಳ್ಳವು ಎಂದು ಪರಿಗಣಿಸಲಾಗಿದ್ದು, ಕೆಲವು ಗಿಡಗಳಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ.

Loading...