Vastu Tips: ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟಿದ್ದೀರಾ? ಇಂದೇ ತೆಗೆದುಬಿಡಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಿಕ್ಕುಗಳು ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಸರಿಯಾದ ದಿಕ್ಕಿನಲ್ಲಿ ಪ್ರವೇಶದ್ವಾರ, ಕೊಠಡಿಗಳು ಹಾಗೂ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸುಖ, ಸಮೃದ್ಧಿ ಮತ್ತು ಶಾಂತಿ ದೊರೆಯುತ್ತದೆ. ಆದರೆ ಮನೆ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಪಾಲಿಸದೇ ಹೋದರೆ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಿ ಅನೇಕ ತೊಂದರೆಗಳು ಮತ್ತು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಜ. 20: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯ ಪ್ರತಿಯೊಂದು ದಿಕ್ಕು ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯನ್ನು (Negative Energy) ಸೃಷ್ಟಿಸುತ್ತದೆ. ಸರಿಯಾದ ದಿಕ್ಕಿನಲ್ಲಿ ಪ್ರವೇಶ, ಕೊಠಡಿಗಳು ಮತ್ತು ವಸ್ತುಗಳನ್ನು ಇರಿಸುವುದು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ವಾಸ್ತು ನಿಯಮಗಳನ್ನು (Vastu Tips) ಪಾಲಿಸುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ. ಇದಕ್ಕಾಗಿ ಮನೆ ಕಟ್ಟುವಾಗ ಯಾವಾಗಲೂ ವಾಸ್ತು ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗುತ್ತದೆ. ಮನೆ ನಿರ್ಮಾಣದ ಸಮಯದಲ್ಲಿ ವಾಸ್ತು ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶಿಸಿ ನಾನಾ ತೊಂದರೆ, ಸಮಸ್ಯೆಗಳು ಎದುರಾಗುತ್ತವೆ.
ಕೇವಲ ಮನೆ ನಿರ್ಮಾಣ ಸಮಯದಲ್ಲಿ ಮಾತ್ರವಲ್ಲದೇ, ಕೆಲ ವಸ್ತುಗಳನ್ನು ತಪ್ಪಾದ ದಿಕ್ಕಿನಲ್ಲಿ ಇರಿಸುವುದರಿಂದಲೂ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶಿಸಿ ನಾನಾ ಸಮಸ್ಯೆ ಉದ್ಭವಿಸುತ್ತದೆ. ಅದರಲ್ಲೂ ಮುಖ್ಯವಾಗಿ ಭಗವಂತ ನೆಲಸಿರುವ ದಿಕ್ಕು ಎನ್ನಲಾಗುವ ಉತ್ತರ ದಿಕ್ಕು.
ಹೌದು, ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕು ಸಂಪತ್ತಿನ ದೇವತೆ ಕುಬೇರ ನೆಲೆಸಿರುವ ದಿಕ್ಕಾಗಿದ್ದು, ಆರ್ಥಿಕ ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಹಾಗಾಗಿ ಇದನ್ನು ಭಗವಂತನ ದಿಕ್ಕೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮನೆಯ ಮುಖ್ಯ ಬಾಗಿಲು ಮತ್ತು ಪೂಜಾ ಕೋಣೆಗಳನ್ನು ಇಡುವುದು ಶ್ರೇಯಸ್ಸು ಎಂದು ನಂಬಲಾಗಿದೆ.
ಈ ಉತ್ತರ ದಿಕ್ಕಿನಿಂದಲೇ ಮನಗೆ ಸಂಪತ್ತು ಆಗಮಿಸಲಿದ್ದು, ಹೆಚ್ಚು ಹೆಚ್ಚು ಹಣ ಸಂಗ್ರಹವಾಗಬೇಕಾದರೆ ಕೆಲವು ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸಬೇಕು. ಇಲ್ಲವಾದರೆ, ನಾನಾ ಆರ್ಥಿಕ ಸಮಸ್ಯೆಗಳು ಉಂಟಾಗಿ, ಮನೆಯು ಅವನತಿಯತ್ತ ಸಾಗುತ್ತದೆ. ಹಾಗಾದರೆ ಬನ್ನಿ ಭಗವಂತನ ದಿಕ್ಕು ಎನ್ನಲಾದ ಉತ್ತರ ದಿಕ್ಕಿನಲ್ಲಿ ಯಾವೆಲ್ಲಾ ವಸ್ತುಗಳನ್ನು ಇಡಬಾರದು ಎಂಬುದನ್ನು ತಿಳಿಯೋಣ.
ಶೂ-ಚಪ್ಪಲಿ, ಕೊಳಕು ವಸ್ತುಗಳು
ವಾಸ್ತು ಶಾಸ್ತ್ರದ ಪ್ರಕಾರ ಸಂಪತ್ತಿನ ಅಧಿಪತಿ ಎನ್ನಲಾಗುವ ಕುಬೇರನು ನೆಲೆಸಿರುವ ಉತ್ತರ ದಿಕ್ಕಿನಲ್ಲಿ ಕೊಳಕು ವಸ್ತುಗಳನ್ನು ಇಡುವುದರಿಂದ ಸರಿಯಲ್ಲ. ಇದರಿಂದ ಕುಬೇರನಿಗೆ ಅಗೌರವ ತೋರಿದಂತಾಗುತ್ತದೆ. ಇದೇ ಕಾರಣಕ್ಕೆ ಮನೆಗೆ ಸಂಪತ್ತು ಬರುವುದು ನಿಂತು ನಾನಾ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಈ ಭಗವಂತನ ದಿಕ್ಕಿನಲ್ಲಿ ಶೂ-ಚಪ್ಪಲಿ, ಕೊಳಕು ವಸ್ತುಗಳು ಇಡುವುದನ್ನು ತಪ್ಪಿಸಿ.
ಮಲಗುವಾಗ ತಲೆದಿಂಬಿನ ಬಳಿ ಈ ವಸ್ತುಗಳನ್ನು ಇಟ್ಟುಕೊಂಡರೆ ಆರೋಗ್ಯ, ನೆಮ್ಮದಿ
ಡಸ್ಟ್ ಬಿನ್, ಪೊರಕೆ, ಕಸ
ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಡಸ್ಟ್ ಬಿನ್, ಪೊರಕೆ ಅಥವಾ ಕಸವನ್ನು ಉತ್ತರ ದಿಕ್ಕಿನಲ್ಲಿ ಇಡಬಾರದು ಮತ್ತು ಈ ದಿಕ್ಕನ್ನು ಎಂದೂ ಅಶುದ್ಧವಾಗಿ ಇರಬಾರದು. ಈ ದಿಕ್ಕಿನಲ್ಲಿ ಕಸ ಶೇಖರಣೆ ಮಾಡುವುದು ಹಣದ ನಷ್ಟಕ್ಕೆ ಕಾರಣವಾಗಿ, ಮನೆಯ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಭಾರವಾದ ವಸ್ತುಗಳು
ಭಾರದ ಪೀಠೋಪಕರಣಗಳನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಆ ದಿಕ್ಕಿನ ಮೇಲೆ ಹೊರೆ ಹೆಚ್ಚಾಗುತ್ತದೆ. ಹಾಗಾಗಿ ಈ ಪೀಠೋಪಕರಣಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿದರೆ, ಅದು ಆ ದಿಕ್ಕಿನಲ್ಲಿ ಹರಿಯುವ ಧನಾತ್ಮಕ ಶಕ್ತಿಗೆ ತಡೆಗೋಡೆಯನ್ನು ಸೃಷ್ಟಿಸುತ್ತದೆ. ಇದರಿಂದ ಆ ಮನೆಯಲ್ಲಿ ಸಂಪತ್ತಿನ ಸಂಗ್ರಹ ನಿಂತು, ಆದಾಯಕ್ಕ ಅಡಚಣೆ ಉಂಟಾಗುತ್ತದೆ.
ಗರಿಗಳು
ಮನೆಯ ಉತ್ತರ ದಿಕ್ಕಿನಲ್ಲಿ ಯಾವುದೇ ರೀತಿಯ ಗರಿಗಳನ್ನು ಇಡುವುದರಿಂದ, ಮನೆಯ ತುಂಬಾ ನೆಗೆಟಿವ್ ಎನರ್ಜಿ ಸೃಷ್ಟಿಯಾಗುತ್ತದೆ. ಇದರಿಂದಾಗಿ ಮನೆಯ ಸದಸ್ಯರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಗರಿಗಳನ್ನು ಇರಿಸಿದ್ದರೆ ತಕ್ಷಣ ತೆಗೆದು ಹಾಕಿರಿ.
ಕಪ್ಪು ಹರಳುಗಳು
ಕುಬೇರ ನೆಲೆಸಿರುವ ಉತ್ತರ ದಿಕ್ಕಿನಲ್ಲಿ ಎಂದಿಗೂ ಕಪ್ಪು ಹರಳುಗಳನ್ನು ಇಡಬಾರದು. ಅದು ಆ ದಿಕ್ಕಿನಲ್ಲಿ ಹರಿಯುವ ಧನಾತ್ಮಕ ಶಕ್ತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಿಸಲು ಕಪ್ಪು ಹರಳುಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಡಿ.