Vastu Tips: ಮನೆಯಲ್ಲಿ ಎಷ್ಟು ಮೆಟ್ಟಿಲುಗಳಿರಬೇಕು? ಸಮ ಸಂಖ್ಯೆ ಇದ್ದರೆ ಒಳ್ಳೆಯದೋ? ಬೆಸ ಸಂಖ್ಯೆ ಇದ್ದರೆ ಶುಭವೋ?
ವಾಸ್ತು ಪ್ರಕಾರ ಮನೆಯ ಮೆಟ್ಟಿಲುಗಳು ಸಂತೋಷ ಮತ್ತು ಶಾಂತಿಗೆ ಕಾರಣವಾಗುವುದಲ್ಲದೆ, ಹಣದ ಕೊರತೆಯನ್ನು ನಿವಾರಿಸುತ್ತದೆ. ಆದ್ದರಿಂದ ಮೆಟ್ಟಿಲುಗಳನ್ನು ನಿರ್ಮಿಸುವಾಗ ಅದರ ದಿಕ್ಕು, ಮೆಟ್ಟಿಲುಗಳ ಸಂಖ್ಯೆ ಹಾಗೂ ಅವುಗಳ ಕೆಳಭಾಗದ ವಿನ್ಯಾಸವನ್ನು ಗಮನಪೂರ್ವಕವಾಗಿ ಪರಿಗಣಿಸಬೇಕು. ಹಾಗಾದರೆ ವಾಸ್ತು ದೃಷ್ಟಿಯಿಂದ ಮನೆಯ ಮೆಟ್ಟಿಲುಗಳು ಹೇಗಿರಬೇಕು? ಯಾವ ರೀತಿಯ ಮೆಟ್ಟಿಲುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬುದನ್ನು ನೋಡೋಣ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಜ. 18: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯ ಪ್ರತಿಯೊಂದು ಮೂಲೆಯೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಮನೆ ಸುಖ–ಶಾಂತಿಯಿಂದ ಇರಬೇಕಾದರೆ ವಾಸ್ತು ದೋಷರಹಿತವಾಗಿರಬೇಕು. ಅಷ್ಟೇ ಅಲ್ಲದೆ, ವಾಸ್ತು ಸರಿಯಾಗಿದ್ದರೆ ಮಾತ್ರ ಮನೆಯಲ್ಲಿರುವವರು ಸಂತೋಷ ಮತ್ತು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಹೇಗೆ ಮನೆಯ ಪ್ರತಿಯೊಂದು ಭಾಗವೂ ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದು, ಅವುಗಳ ಪೈಕಿ ಮೆಟ್ಟಿಲುಗಳ ನಿರ್ಮಾಣದಲ್ಲಿಯೂ ಅನ್ವಯವಾಗುತ್ತದೆ.
ವಾಸ್ತು ಪ್ರಕಾರ ಮೆಟ್ಟಿಲುಗಳು ಸಂತೋಷ ಮತ್ತು ಶಾಂತಿಗೆ ಕಾರಣವಾಗುವುದಲ್ಲದೆ, ಹಣದ ಕೊರತೆಯನ್ನು ನಿವಾರಿಸಬಹುದು. ಆದ್ದರಿಂದ ಮೆಟ್ಟಿಲುಗಳನ್ನು ನಿರ್ಮಿಸುವಾಗ ಅದರ ದಿಕ್ಕು, ಮೆಟ್ಟಿಲುಗಳ ಸಂಖ್ಯೆ ಹಾಗೂ ಅವುಗಳ ಕೆಳಭಾಗದ ವಿನ್ಯಾಸವನ್ನು ಗಮನಪೂರ್ವಕವಾಗಿ ಪರಿಗಣಿಸಬೇಕು. ಹಾಗಾದರೆ ವಾಸ್ತು ದೃಷ್ಟಿಯಿಂದ ಮನೆಯ ಮೆಟ್ಟಿಲುಗಳು ಹೇಗಿರಬೇಕು? ಯಾವ ರೀತಿಯ ಮೆಟ್ಟಿಲುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ಇಲ್ಲಿ ಮೆಟ್ಟಿಲು ಒಳ್ಳೆಯದಲ್ಲ
ವಾಸ್ತು ನಿಯಮಗಳಂತೆ, ಮುಖ್ಯ ಬಾಗಿಲಿನ ಮುಂದೆ, ಉತ್ತರ ದಿಕ್ಕಿನಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವುದು ಶುಭಕರವಲ್ಲ. ಇಂತಹ ವ್ಯವಸ್ಥೆಯಿಂದ ಮನೆಯ ಸದಸ್ಯರಿಗೆ ಅವಕಾಶಗಳು ತಪ್ಪುವ ಸಾಧ್ಯತೆ ಇದ್ದು, ಆದಾಯದಲ್ಲಿ ಕುಸಿತ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ನಂಬಲಾಗಿದೆ.
ಈ ದಿಕ್ಕು ಸೂಕ್ತ
ಮೆಟ್ಟಿಲುಗಳನ್ನು ನೈಋತ್ಯ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸುವುದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಮೆಟ್ಟಿಲುಗಳಿದ್ದರೆ ಮನೆಯಲ್ಲಿ ಪ್ರಗತಿ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ವಾಯುವ್ಯ ದಿಕ್ಕಿನ ಆಯ್ಕೆಯನ್ನೂ ಕೆಲವೊಮ್ಮೆ ಪರಿಗಣಿಸಬಹುದು.
ಮಲಗುವಾಗ ತಲೆದಿಂಬಿನ ಬಳಿ ಈ ವಸ್ತುಗಳನ್ನು ಇಟ್ಟುಕೊಂಡರೆ ಆರೋಗ್ಯ, ನೆಮ್ಮದಿ
ಎಷ್ಟು ಮೆಟ್ಟಿಲುಗಳು ಇರಬೇಕು?
ಮೆಟ್ಟಿಲುಗಳ ಸಂಖ್ಯೆ ಸದಾ ಬೆಸವಾಗಿರಬೇಕು – 7, 11, 15, 17, 19 ಅಥವಾ 21. ಇವುಗಳಲ್ಲಿ 17 ಮೆಟ್ಟಿಲುಗಳನ್ನು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಬೆಸ ಸಂಖ್ಯೆಯ ಮೆಟ್ಟಿಲುಗಳು ಮನೆಯಲ್ಲಿನ ಸಂತೋಷ, ಬೆಳವಣಿಗೆ ಮತ್ತು ಗೌರವವನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ.
ಈ ತಪ್ಪನ್ನು ಮಾಡಬೇಡಿ
ಮೆಟ್ಟಿಲುಗಳ ಕೆಳಗಿನ ಜಾಗವನ್ನು ಕಸ, ಶೂಗಳು, ಅನುಪಯುಕ್ತ ವಸ್ತುಗಳನ್ನು ಇಡಲು ಬಳಸುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ದುರ್ಬಲವಾಗುವ ಜತೆಗೆ ಕುಟುಂಬದ ಸದಸ್ಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ
- ಜಾಗ ಉಳಿಸುವ ನೆಪದಲ್ಲಿ ಮೆಟ್ಟಿಲುಗಳ ಕೆಳಗೆ ಪೂಜಾ ಕೋಣೆ, ಅಡುಗೆಮನೆ, ಸ್ನಾನಗೃಹ ಅಥವಾ ಮಲಗುವ ಕೋಣೆ ನಿರ್ಮಿಸುವುದೂ ಸರಿಯಲ್ಲ. ಅಗತ್ಯವಿದ್ದರೆ ಅದನ್ನು ಸ್ವಚ್ಛವಾದ ಸ್ಟೋರ್ ರೂಮ್ ಆಗಿ ಬಳಸಬಹುದು. ಆದರೆ ಆ ಸ್ಥಳದಲ್ಲಿ ಹಣ, ಆಭರಣಗಳ ಬೀರು ಅಥವಾ ಸೇಫ್ ಇಡುವುದು ಅಶುಭಕರವೆಂದು ವಾಸ್ತು ಹೇಳುತ್ತದೆ.
- ಮೆಟ್ಟಿಲುಗಳ ಕೆಳಗೆ ಟ್ಯಾಪ್‌ಗಳು ಅಥವಾ ನೀರಿನ ಲೀಕೆಜ್ ಇದ್ದರೆ, ಅದು ಹಣದ ನಷ್ಟ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಹಾಗೆಯೇ ಮೆಟ್ಟಿಲುಗಳು ಅಗಲವಾಗಿದ್ದು, ಸಾಕಷ್ಟು ಬೆಳಕು ಇರಬೇಕು. ಕತ್ತಲೆ ಮತ್ತು ಇಳುವರಿ ಮೆಟ್ಟಿಲುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎನ್ನಲಾಗುತ್ತದೆ.
- ಮೆಟ್ಟಿಲುಗಳ ಆರಂಭ ಮತ್ತು ಅಂತ್ಯದಲ್ಲಿ ಗೇಟ್‌ಗಳಿರಬೇಕು. ಕೆಳಭಾಗದಲ್ಲಿ ಚಪ್ಪಲಿ, ಶೂಗಳು ಅಥವಾ ಕಸದ ವಸ್ತುಗಳನ್ನು ಇಡಬಾರದು. ಇದರಿಂದ ಮಕ್ಕಳ ಆರೋಗ್ಯ ಮತ್ತು ಕುಟುಂಬದ ಶಾಂತಿಗೆ ಅಡ್ಡಿಯಾಗಬಹುದು.
- ಒಂದೇ ವೇಳೆ ಮೆಟ್ಟಿಲುಗಳು ತಪ್ಪು ದಿಕ್ಕಿನಲ್ಲಿ ನಿರ್ಮಾಣಗೊಂಡಿದ್ದರೆ ಮತ್ತು ಅದನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ, ವಾಸ್ತು ಪರಿಹಾರವಾಗಿ ಮೆಟ್ಟಿಲುಗಳ ಮೇಲೆ ಕಲ್ಲಿನ ಪಿರಮಿಡ್‌ಗಳನ್ನು ಇಡುವುದರಿಂದ ವಾಸ್ತು ದೋಷ ನಿವಾರಣೆ ಆಗಿ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.