ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಕಚೇರಿ ಮೇಜಿನಲ್ಲಿ ಲಕ್ಷ್ಮೀ ಪಾದುಕೆ ಇರಿಸಿ; ಕಷ್ಟಗಳನ್ನೂ ದೂರವಿರಿಸಿ

ಸಾಮಾನ್ಯವಾಗಿ ದೇವರ ಮೇಲೆ ಹೆಚ್ಚಿನ ಭಕ್ತಿ ಶ್ರದ್ದೆ ಇರುವವರು ತಮ್ಮ ಕಚೇರಿಗಳಲ್ಲೂ ತಾವು ಬಳಕೆ ಮಾಡುವ ಮೇಜಿನ ಮೇಲೆ ದೇವರ ಫೋಟೋ, ಮೂರ್ತಿ ಅಥವಾ ಪಾದುಕೆಗಳ ಚಿತ್ರಗಳನ್ನು ಇರಿಸುತ್ತಾರೆ. ಇದರಿಂದ ಕೆಲಸದಲ್ಲಿ ಪ್ರಗತಿಯಾಗುತ್ತದೆ ಎಂಬುದು ಅವರವರ ವಿಶ್ವಾಸ. ಆದರೆ ಇದನ್ನು ಸುಮ್ಮನೆ ಇಡಬಹುದೇ?, ಇದರಿಂದ ನಮ್ಮ ಜೀವನದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆಯೇ? ಎನ್ನುವ ಪ್ರಶ್ನೆ ಬಹುತೇಕ ಮಂದಿಯಲ್ಲಿ ಇದ್ದೇ ಇರುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಉತ್ತರವಿದೆ.

ಕಚೇರಿ ಮೇಜಿನಲ್ಲಿ ಲಕ್ಷ್ಮೀ  ಪಾದುಕೆ ಇರಿಸಬಹುದೇ?

ಸಾಮಾನ್ಯವಾಗಿ ದೇವರ ಮೇಲೆ ಹೆಚ್ಚಿನ ಭಕ್ತಿ ಶ್ರದ್ದೆ ಇರುವವರು ತಮ್ಮ ಕಚೇರಿಗಳಲ್ಲೂ (vastu for office) ತಾವು ಬಳಕೆ ಮಾಡುವ ಮೇಜಿನ ಮೇಲೆ ದೇವರ ಫೋಟೋ, ಮೂರ್ತಿ ಅಥವಾ ಪಾದುಕೆಗಳ ಚಿತ್ರಗಳನ್ನು ಇರಿಸುತ್ತಾರೆ. ಇದರಿಂದ ಕೆಲಸದಲ್ಲಿ ಪ್ರಗತಿಯಾಗುತ್ತದೆ ಎಂಬುದು ಅವರವರ ವಿಶ್ವಾಸ. ಆದರೆ ಇದನ್ನು ಸುಮ್ಮನೆ ಇಡಬಹುದೇ?, ಇದರಿಂದ ನಮ್ಮ ಜೀವನದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆಯೇ? ಎನ್ನುವ ಪ್ರಶ್ನೆ ಬಹುತೇಕ ಮಂದಿಯಲ್ಲಿ ಇದ್ದೇ ಇರುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಉತ್ತರವಿದೆ. ಕಚೇರಿಯಲ್ಲಿ ನಾವು ನಮ್ಮ ಮೇಜಿನ ಮೇಲೆ ಇರಿಸುವ ಪ್ರತಿಯೊಂದು ವಸ್ತುವೂ ನಮ್ಮ ಬದುಕಿನ ಮೇಲೆ ಖಂಡಿತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವಾಸ್ತು (Vastu tips) ತಜ್ಞರು.

ಕೆಲವು ವಸ್ತುಗಳನ್ನು ಕಚೇರಿ ಮೇಜಿನ ಮೇಲೆ ಇಡುವುದರಿಂದ ನಮ್ಮ ಹಾಗೂ ನಮ್ಮ ಸುತ್ತಮುತ್ತ ಸಕಾರಾತ್ಮಕ ಶಕ್ತಿ ಹರಡುತ್ತದೆ. ಇದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಈ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಇಡುವುದು ಸಹ ಮುಖ್ಯವಾಗಿದೆ ಎನ್ನುತ್ತದೆ ವಾಸ್ತು ನಿಯಮಗಳು. ಕಚೇರಿ ಮೇಜಿನ ಮೇಲೆ ಇಡಬಹುದಾದ ಕೆಲವು ವಸ್ತುಗಳಿವೆ. ಅಂತೆಯೇ ಕೆಲವು ವಸ್ತುಗಳನ್ನು ಇಡಬಾರದು ಎನ್ನುವ ನಿಯಮಗಳೂ ಇವೆ. ಯಾಕೆಂದರೆ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಅಲ್ಲದೆ ವ್ಯಕ್ತಿಯ ಕೆಲಸದ ಪ್ರದೇಶದಲ್ಲಿ ಅಡೆತಡೆಗಳನ್ನು ಉಂಟು ಮಾಡುತ್ತದೆ.

lakshmi (1)

ಲಕ್ಷ್ಮೀ ದೇವರ ಚಿತ್ರ, ಮೂರ್ತಿ, ಪಾದುಕೆಗಳನ್ನು ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ಕಚೇರಿ ಮೇಜಿನ ಮೇಲೆ ಇರಿಸುತ್ತಾರೆ. ಅದರಲ್ಲೂ ಲಕ್ಷ್ಮೀ ದೇವಿಯ ಪಾದುಕೆಗಳನ್ನು ಕಚೇರಿ ಮೇಜಿನ ಮೇಲೆ ಇಡಬಹುದೇ ಎನ್ನುವ ಪ್ರಶ್ನೆ ಬಹುತೇಕರಲ್ಲಿ ಇರಬಹುದು. ಈ ಬಗ್ಗೆ ಪಂಡಿತ್ ಅರವಿಂದ ತ್ರಿಪಾಠಿ ಅವರು ಹೇಳುವುದು ಹೀಗೆ..

  • ಲಕ್ಷ್ಮೀ ಪಾದುಕಾ ಎಂದು ಕರೆಯಲ್ಪಡುವ ಲಕ್ಷ್ಮೀ ದೇವಿಯ ಚರಣದ ಚಿತ್ರ ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.
  • ಲಕ್ಷ್ಮೀ ಪಾದುಕಾವನ್ನು ಮೇಜಿನ ಮೇಲೆ ಇಡುವುದರಿಂದ ಕಚೇರಿಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ ಮತ್ತು ನಕಾರಾತ್ಮಕತೆ ದೂರವಾಗುತ್ತದೆ.
  • ಲಕ್ಷ್ಮೀ ಪಾದುಕಾವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮೀಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮೇಜಿನ ಮೇಲೆ ಇಡುವುದರಿಂದ ವ್ಯವಹಾರ ಮತ್ತು ಕೆಲಸದಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದು. ಕೆಲಸದಲ್ಲಿ ಯಶಸ್ಸು ದೊರೆಯುವುದು. ಮನದ ಇಚ್ಛೆಗಳು ನೆರವೇರುವುದು.
lakshmi (2)

ಇದನ್ನೂ ಓದಿ: VastuTips: ನವವಿವಾಹಿತರ ಕೋಣೆ ಅಲಂಕಾರ; ಗಮನದಲ್ಲಿರಲಿ ಈ ವಿಚಾರ

  • ಲಕ್ಷ್ಮೀ ಪಾದುಕೆಯನ್ನು ಶಾಂತಿ ಮತ್ತು ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮೇಜಿನ ಮೇಲೆ ಇಡುವುದರಿಂದ ಮನಸ್ಸು ಶಾಂತವಾಗಿರುತ್ತದೆ ಮತ್ತು ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ.

ಹೇಗೆ ಇಡಬೇಕು ?

ಲಕ್ಷ್ಮೀ ದೇವಿಯ ಪಾದಗಳು ಯಾವಾಗಲೂ ಕಚೇರಿ ಮೇಜಿನ ಮೇಲೆ ಈಶಾನ್ಯ ದಿಕ್ಕಿನಲ್ಲಿರಬೇಕು.ಯಾಕೆಂದರೆ ಈ ದಿಕ್ಕನ್ನು ಸಂಪತ್ತು ಮತ್ತು ಸಮೃದ್ಧಿಗೆ ಶುಭವೆಂದು ಪರಿಗಣಿಸಲಾಗುತ್ತದೆ.

ಮನೆ ಮತ್ತು ಕಚೇರಿಯಲ್ಲಿ ಲಕ್ಷ್ಮೀ ಪಾದುಕವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಇಡುವುದು ಬಹುಮುಖ್ಯ. ಇದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಅದಕ್ಕಾಗಿ ಲಕ್ಷ್ಮೀ ಚರಣವನ್ನು ನಾವು ಕುಳಿತುಕೊಳ್ಳುವ ದಿಕ್ಕಿನಲ್ಲಿ ಇರಿಸಬೇಕು. ಕುರ್ಚಿಯ ಮೇಲೆ ಕುಳಿತಾಗ ಲಕ್ಷ್ಮೀ ಚರಣವು ಮುಂದೆ ಇರಬೇಕು. ಲಕ್ಷ್ಮೀ ಚರಣವನ್ನು ಮೇಜಿನ ಮೇಲಿನ ಎಡ ಮೂಲೆಯಲ್ಲಿ ಇರಿಸಿ. ಈ ಸ್ಥಳವು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಇದು ಜೀವನದಲ್ಲಿ ಎದುರಾಗುವ ಎಲ್ಲಾ ತೊಂದರೆಗಳನ್ನು ದೂರ ಮಾಡುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.