BMC Election Result: ಶಿವ ಸೇನೆ ಭದ್ರಕೋಟೆ ಮಹಾಯುತಿ ಪಾಲಿಗೆ! ಠಾಕ್ರೆ ಎಡವಿದ್ದೆಲ್ಲಿ?
ಮಹಾರಾಷ್ಟ್ರ ಪಾಲಿಕೆ ಚುನಾವಣೆಯ ಮೇಲೆ ಇಡೀ ದೇಶದ ಕಣ್ಣು ಇದೆ. ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಶಿವ ಸೇನೆಯ ಭದ್ರಕೋಟೆಯಾಗಿದ್ದ ಮಹಾರಾಷ್ಟ್ರ ಪಾಲಿಕೆ ಬಿಜೆಪಿಯ ತೆಕ್ಕೆಗೆ ಬೀಳುವುದು ಬಹುತೇಕ ಖಚಿತವಾಗಿದೆ.
ಸಂಗ್ರಹ ಚಿತ್ರ -
ಮುಂಬೈ: ಮಹಾರಾಷ್ಟ್ರ ಪಾಲಿಕೆ ಚುನಾವಣೆಯ ಮೇಲೆ ಇಡೀ ದೇಶದ ಕಣ್ಣು ಇದೆ. ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ (BMC Election Result) ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಶಿವ ಸೇನೆಯ (Shiva Sena) ಭದ್ರಕೋಟೆಯಾಗಿದ್ದ ಮಹಾರಾಷ್ಟ್ರ ಪಾಲಿಕೆ ಬಿಜೆಪಿಯ ತೆಕ್ಕೆಗೆ ಬೀಳುವುದು ಬಹುತೇಕ ಖಚಿತವಾಗಿದೆ. ಬಿಜೆಪಿ-ಶಿವಸೇನೆ(ಶಿಂಧೆ)-ಎನ್‌ಸಿಪಿ (ಅಜಿತ್) ಮೈತ್ರಿಕೂಟದ ಒಟ್ಟು 68 ಅಭ್ಯರ್ಥಿಗಳು ಅವಿರೋಧವಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. ಈ ಪೈಕಿ 44 ಬಿಜೆಪಿ ಅಭ್ಯರ್ಥಿಗಳಾದರೆ, 22 ಮಂದಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯವರು ಮತ್ತು ಇಬ್ಬರು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಅಭ್ಯರ್ಥಿಗಳು.
ಸುಮಾರು 20 ವರ್ಷಗಳ ನಂತರ ರಾಜ್ ಠಾಕ್ರೆ ಮತ್ತು ಉದ್ಧವ್ ಠಾಕ್ರೆ ಅವರು ತಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಒಂದಾಗಿದ್ದಾರೆ. ಈ ಮೈತ್ರಿಯು ಮಹಾಯುತಿಗೆ ಪ್ರಬಲ ಸವಾಲು ಒಡ್ಡಿದೆ. ಒಂಬತ್ತು ವರ್ಷಗಳ ನಂತರ ಮತ್ತು ನಾಲ್ಕು ವರ್ಷಗಳ ವಿಳಂಬದ ನಂತರ ನಡೆದ ಚುನಾವಣೆಯಲ್ಲಿ, ವಾರ್ಷಿಕ ಬಜೆಟ್ 74,400 ಕೋಟಿ ರೂ.ಗಳನ್ನು ಮೀರಿದ ಬಿಎಂಸಿಯಲ್ಲಿ, 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಮೈ ಆಕ್ಸಿಸ್ ಇಂಡಿಯಾ ಸಮೀಕ್ಷೆಯ ಪ್ರಕಾರ, ಮುಂಬೈನಲ್ಲಿ ಮಹಾಯುತಿ ಮೈತ್ರಿಕೂಟವು 131 ರಿಂದ 151 ಸ್ಥಾನಗಳನ್ನು ಗೆಲ್ಲಲಿದೆ ಎನ್ನಲಾಗಿದೆ. ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರ ಮೈತ್ರಿಕೂಟವು 58 ರಿಂದ 68 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು ಎನ್ನಲಾಗಿತ್ತು. ಆ ಮೂಲಕ ಮಹಾಯುತಿಗೆ ಗೆಲುವು ಎಂದು ಸಮೀಕ್ಷೆಗಳು ಹೇಳಿದ್ದವು. ಇದೀಗ ಸಮೀಕ್ಷೆಗಳು ನಿಜವಾಗುವ ಲಕ್ಷಣ ಗೋಚರಿಸುತ್ತಿವೆ. ಬಿಜೆಪಿ-ಶಿವಸೇನೆ ನೇತೃತ್ವದ ಮಹಾಯುತಿ ಹಲವಾರು ಪುರಸಭೆಗಳಲ್ಲಿ ಮುನ್ನಡೆ ಸಾಧಿಸುತ್ತಿರುವುದನ್ನು ಸೂಚಿಸುತ್ತಿದ್ದಂತೆ ಮುಂಬೈನ ಶಿವಸೇನಾ ಭವನದಿಂದ ಶುಕ್ರವಾರ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿರುವ ದೃಶ್ಯಗಳು ಕಂಡುಬಂದವು.
ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗದ್ದುಗೆ ಯಾರ ತೆಕ್ಕೆಗೆ? ಎಕ್ಸಿಟ್ ಪೋಲ್ ಭವಿಷ್ಯ ಹೇಳೋದೇನು?
2017 ರ ಕಳೆದ ಚುನಾವಣೆಯಲ್ಲಿ ಶೇ. 55.53 ರಷ್ಟು ಮತದಾನ ದಾಖಲಾಗಿದ್ದು, ಈ ಬಾರಿ ಶೇ. 52.94 ರಷ್ಟು ಮತದಾನ ಕಡಿಮೆಯಾಗಿದೆ ಎಂದು ಬಿಎಂಸಿ ತಿಳಿಸಿದೆ. ನಗರಪಾಲಿಕೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಉಪ ನಗರ ಭಾಂಡಪ್‌ನ ವಾರ್ಡ್ ಸಂಖ್ಯೆ 114 ರಲ್ಲಿ ಶೇ. 64.53 ರಷ್ಟು ಮತದಾನವಾಗಿದ್ದು, ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದ ವಾರ್ಡ್ ಸಂಖ್ಯೆ 227 ರಲ್ಲಿ ಶೇ. 20.88 ರಷ್ಟು ಮತದಾನವಾಗಿದೆ.