ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆಯ ಸಮೀಪದಲ್ಲಿ ದೇವಾಲಯವಿದ್ದರೆ ಪಾಲಿಸಬೇಕಾದ ನಿಯಮಗಳು ಏನು?

ನಗರಗಳಲ್ಲಿ ಸಾಮಾನ್ಯವಾಗಿ ಮನೆಯ (Vastu for home) ಸಮೀಪದಲ್ಲಿ ದೇವಾಲಯಗಳು ಇರುತ್ತವೆ. ಈ ಸಂದರ್ಭದಲ್ಲಿ ನಾವು ಮಾಡುವ ಕೆಲವೊಂದು ಕೆಲಸ ಕಾರ್ಯಗಳಿಂದ ಸ್ಥಳದ ಪಾವಿತ್ರ್ಯತೆ ಹಾಳಾಗುತ್ತದೆ ಎನ್ನುವ ಆತಂಕವಿರುತ್ತದೆ. ಆದರೆ ವಾಸ್ತು ನಿಯಮ ಪಾಲಿಸಿದರೆ ದೇವಾಲಯದ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಮನೆಯಲ್ಲೂ ಸಾಮರಸ್ಯ ಸದಾ ಕಾಲ ನೆಲೆಯಾಗುವಂತೆ ಮಾಡಬಹುದು.

ಮನೆಯ ಸಮೀಪದಲ್ಲಿ ದೇವಸ್ಥಾನ ಇದ್ದರೆ ಶುಭವೇ?

ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ (Vastu for temple) ವಿಶೇಷ ಮಹತ್ವವಿದೆ. ದೇವಸ್ಥಾನಗಳು ಮನಸ್ಸಿಗೆ ಶಾಂತಿಯನ್ನು ನೀಡುವ ಸ್ಥಳವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಕೆಲವು ಮನೆಗಳಿಗೆ (Vastu for home) ಸಮೀಪದಲ್ಲೇ ದೇವಾಲಯಗಳಿರುತ್ತವೆ. ಇದು ಸಕಾರಾತ್ಮಕ ಶಕ್ತಿಯು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆಯಾದರೂ ಇದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ (vastu tips) ಪ್ರಕಾರ ಮನೆಯ ಸಮೀಪ ದೇವಸ್ಥಾನವಿರುವುದು ಶುಭ ಅಥವಾ ಅಶುಭವೆಂದು ಪರಿಗಣಿಸಲ್ಪಡುತ್ತದೆಯೋ ಇಲ್ಲವೋ ಎನ್ನುವುದು ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಳಿ ದೇವಸ್ಥಾನವಿದ್ದರೆ ಅದರ ಸುತ್ತಮುತ್ತಲಿನ ಸ್ಥಳವು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ದೇವಸ್ಥಾನದಿಂದ ಹೊರಹೊಮ್ಮುವ ಶಕ್ತಿಯು ಮನೆಯ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳು ಗೋಚರವಾಗುವುದು.

ದೇವಸ್ಥಾನವು ಸರಿಯಾದ ನಿರ್ದೇಶನ ಮತ್ತು ನಿಯಮಗಳ ಪ್ರಕಾರ ನೆಲೆಗೊಂಡಿದ್ದರೆ ಅದು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಮಾನಸಿಕ ಶಾಂತಿಯನ್ನು ತರಲು ಸಹಾಯ ಮಾಡುತ್ತದೆ. ಇನ್ನು ದೇವಸ್ಥಾನವು ಮನೆಗೆ ಬಹಳ ಹತ್ತಿರದಲ್ಲಿ ಅಥವಾ ತಪ್ಪು ದಿಕ್ಕಿನಲ್ಲಿದ್ದರೆ ಅದು ಮನೆಗೆ ವಾಸ್ತು ದೋಷವನ್ನು ಉಂಟುಮಾಡಬಹುದು. ಇದರಿಂದ ಕುಟುಂಬ ಜೀವನದಲ್ಲಿ ಅಡೆತಡೆಗಳು ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಾಗುವುದು.

ಮನೆಗೆ ಹತ್ತಿರದಲ್ಲಿ ದೇವಸ್ಥಾನವಿರುವುದರಿಂದ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದನ್ನು ಜ್ಯೋತಿರ್ವಿದ್ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಅವರು ವಿವರಿಸುವುದು ಹೀಗೆ..

ಮನೆಯ ಹತ್ತಿರ ದೇವಸ್ಥಾನವಿದ್ದರೆ ಸಿಗುವ ಪ್ರಯೋಜನಗಳು

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಹತ್ತಿರ ದೇವಸ್ಥಾನವಿದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸದಾ ನೆಲೆಯಾಗಿರುತ್ತದೆ. ಇದರಿಂದ ಕುಟುಂಬಕ್ಕೆ ಶಾಂತಿ ಮತ್ತು ಸಮೃದ್ಧಿ ತರುತ್ತದೆ. ದೇವಸ್ಥಾನದಿಂದ ನಿಯಮಿತವಾಗಿ ಮಂತ್ರ, ಆರತಿ ಮತ್ತು ಭಜನೆಗಳು ಕೇಳುತ್ತಿರುವುದರಿಂದ ಮನೆಯ ವಾತಾವರಣ ಶುದ್ಧವಾಗುತ್ತದೆ ಮತ್ತು ನಕಾರಾತ್ಮಕತೆ ದೂರವಾಗುತ್ತದೆ.

ಕುಟುಂಬ ಸದಸ್ಯರಲ್ಲಿ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.ಮನೆಯ ಹತ್ತಿರ ದೇವಸ್ಥಾನವಿರುವುದರಿಂದ ಸಾಮಾಜಿಕ ಮತ್ತು ಧಾರ್ಮಿಕ ಬಾಂಧವ್ಯ ಬಲವಾಗುತ್ತದೆ.

ವಾಸ್ತು ಪ್ರಕಾರ ಮನೆ ಬಳಿ ದೇವಸ್ಥಾನವಿರುವುದು ಶುಭವೇ?

ಮನೆಯ ಬಳಿ ದೇವಸ್ಥಾನವಿರುವುದರಿಂದ ಕೆಲವು ಪ್ರಯೋಜನಗಳಿದ್ದರೂ ಕೆಲವು ವಾಸ್ತು ಕಾರಣಗಳಿಂದಾಗಿ ದೇವಸ್ಥಾನ ಮತ್ತು ಮನೆ ಹತ್ತಿರದಲ್ಲಿ ಇರುವುದರಿಂದ ನಕಾರಾತ್ಮಕ ಪರಿಣಾಮಗಳೂ ಉಂಟಾಗಬಹುದು. ಮನೆಯ ಬಳಿ ದೊಡ್ಡ ದೇವಸ್ಥಾನವಿದ್ದರೆ ಮತ್ತು ಅಲ್ಲಿ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೆ ಅದು ಕೆಲವೊಮ್ಮೆ ಮನೆಯ ಜನರಿಗೆ ಅವರ ದೈನಂದಿನ ಜೀವನ ಮತ್ತು ಕೆಲಸದಲ್ಲಿ ಅಡಚಣೆಯನ್ನು ಉಂಟುಮಾಡಬಹುದು.

ವಾಸ್ತು ಶಾಸ್ತ್ರದ ಪ್ರಕಾರ ದೇವಸ್ಥಾನದ ಮುಖ್ಯ ದ್ವಾರ ಅಥವಾ ಗರ್ಭಗುಡಿಯು ಮನೆಯ ಮುಖ್ಯ ದ್ವಾರಕ್ಕೆ ನಿಖರವಾಗಿ ವಿರುದ್ಧವಾಗಿದ್ದರೆ ಅದು ಮನೆಗೆ ವಾಸ್ತು ದೋಷವನ್ನು ಉಂಟುಮಾಡಬಹುದು. ಇದು ಮನೆಯಲ್ಲಿ ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.

ಮನೆಯ ಸುತ್ತಮುತ್ತ ದೊಡ್ಡ ದೇವಾಲಯಗಳಿದ್ದರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಇದರಿಂದಾಗಿ ಮನೆಯಲ್ಲಿ ಯಾವಾಗಲೂ ಗದ್ದಲದ ವಾತಾವರಣವಿರುತ್ತದೆ. ಇದು ಮನೆಯಲ್ಲಿ ವಾಸಿಸುವ ಜನರ ದೈನಂದಿನ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಮನೆಯಲ್ಲಿರುವ ವಿದ್ಯಾರ್ಥಿಗಳು ಮತ್ತು ವೃದ್ಧರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಏನು ಪರಿಹಾರ?

  • ಮನೆಯ ಹತ್ತಿರ ದೇವಸ್ಥಾನವಿದ್ದು ವಾಸ್ತು ದೋಷ ಉಂಟಾಗುತ್ತಿದ್ದರೆ ಕೆಲವು ಸರಳ ಪರಿಹಾರಗಳನ್ನು ಪ್ರಯತ್ನಿಸುವ ಮೂಲಕ ಅದರ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು-
  • ದೇವಾಲಯದ ಮುಖ್ಯ ದ್ವಾರವು ನಿಮ್ಮ ಮನೆಯ ಪ್ರವೇಶದ್ವಾರಕ್ಕೆ ಎದುರಾಗಿದ್ದರೆ ಉಂಟಾಗುವ ವಾಸ್ತು ದೋಷವನ್ನು ತಪ್ಪಿಸಲು ಮನೆಯ ಮುಖ್ಯ ದ್ವಾರದ ಎದುರು ತುಳಸಿ ಗಿಡವನ್ನು ನೆಡಬೇಕು
  • ದೇವಸ್ಥಾನದ ಸಮೀಪದಲ್ಲಿ ಮನೆ ಇದ್ದರೆ ಮನೆಯಲ್ಲಿ ನಿಯಮಿತವಾಗಿ ಪೂಜೆ, ಹವನಗಳನ್ನು ಮಾಡಿಸಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸದಾ ನೆಲೆಯಾಗಿರುತ್ತದೆ.
  • ದೇವಾಲಯದ ಶಕ್ತಿಯ ಪರಿಣಾಮವು ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತಿದ್ದರೆ ಮನೆಯ ಕಿಟಕಿ ಅಥವಾ ಬಾಗಿಲಿನ ಬಳಿ ತಿಳಿ ಬಣ್ಣದ ಪರದೆಯನ್ನು ಹಾಕಿ ಅಥವಾ ಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಎತ್ತರದ ಗೋಡೆಯನ್ನು ನಿರ್ಮಿಸಿ.

ಇದನ್ನೂ ಓದಿ: Vastu Tips: ಕಾರಿನಲ್ಲಿ ದೇವರ ವಿಗ್ರಹ ಇಡುವಾಗ ಪಾಲಿಸಬೇಕಾದ ನಿಯಮಗಳೇನು?

  • ಮನೆಯ ಹತ್ತಿರ ದೇವಾಲಯವಿದ್ದಾಗ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳಲು ಮನೆ ಮಂದಿ ಜೊತೆಯಾಗಿ ಧ್ಯಾನ ಮತ್ತು ಯೋಗ ಮಾಡಿ. ಇದು ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಧಾರ್ಮಿಕ ಗ್ರಂಥಗಳ ಪ್ರಕಾರ ದೇವಸ್ಥಾನಗಳ ಸುತ್ತಲಿನ ಪ್ರದೇಶವು ಪವಿತ್ರವಾಗಿದ್ದು, ಅಲ್ಲಿ ವಾಸಿಸುವುದರಿಂದ ವ್ಯಕ್ತಿಯ ಮನಸ್ಸು ಧಾರ್ಮಿಕತೆಯ ಕಡೆಗೆ ಆಕರ್ಷಿತವಾಗುತ್ತದೆ. ಇದು ಸಾಕಷ್ಟು ಪುಣ್ಯದ ಪ್ರಯೋಜನಗಳನ್ನು ಒದಗಿಸುತ್ತದೆ. ದೇವಾಲಯಕ್ಕೆ ತುಂಬಾ ಹತ್ತಿರವಾಗುವುದು ಕೆಲವು ಸಂದರ್ಭಗಳಲ್ಲಿ ಅಶುಭವಾಗಬಹುದು. ಕೆಲವು ನಂಬಿಕೆಗಳ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ಅಶುಭ ಗ್ರಹಗಳು ಪ್ರಬಲವಾಗಿದ್ದರೆ ಮತ್ತು ಅವನು ದೇವಾಲಯದ ಬಳಿ ವಾಸಿಸುತ್ತಿದ್ದರೆ ಅಂತವರು ವಿಶೇಷವಾದ ಪೂಜೆ ಕಾರ್ಯಗಳನ್ನು ನಡೆಸಬೇಕಾಗುತ್ತದೆ.