ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುದ್ಧದ ಫೋಟೊ ಪೋಸ್ಟ್ ಮಾಡಿದ 25 ವರ್ಷದ ಫ್ಲೈಟ್ ಅಟೆಂಡರ್‌ ಬಂಧನ

ಯುದ್ಧದ ದಾಳಿಯ ಫೋಟೋ ಶೇರ್ ಮಾಡಿದ ಪರಿಣಾಮ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಿರುವ ಘಟನೆಯೊಂದು ನಡೆದಿದೆ. ಯುಎಇಯಲ್ಲಿ ಸ್ಥಳೀಯ ವಿಮಾನಯಾನ ಸಂಸ್ಥೆ ಯಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ 25 ವರ್ಷದ ಬ್ರಿಟಿಷ್ ಫ್ಲೈಟ್ ಅಟೆಂಡೆಂಟ್ ಅನ್ನು ಪೊಲೀಸರು ಬಂಧಿಸಿದ್ದಾರೆ..

ದುಬೈನಲ್ಲಿ ಯುದ್ಧದ ಫೋಟೋ ಶೇರ್ ಮಾಡಿದ್ದಕ್ಕೆ ಫ್ಲೈಟ್ ಸಿಬ್ಬಂದಿಯ ಬಂಧನ!

ಯುದ್ಧದ ಫೋಟೋ ಶೇರ್ ಮಾಡಿದ ವಿಮಾನ ಸಿಬ್ಬಂದಿಯ ಬಂಧನ -

Profile
Pushpa Kumari Apr 4, 2026 7:20 PM

ದುಬೈ, ಏ. 4: ಇರಾನ್-ಇಸ್ರೇಲ್ (Iran-Israel) ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಯುದ್ಧದ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಯುಎಇಯಲ್ಲಿ ಸ್ಥಳೀಯ ವಿಮಾನಯಾನ ಸಂಸ್ಥೆಯಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ 25 ವರ್ಷದ ಬ್ರಿಟಿಷ್ ಫ್ಲೈಟ್ ಅಟೆಂಡರ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದಿಂದ ಜಗತ್ತಿನಾದ್ಯಂತ ತಲ್ಲಣ ಮೂಡಿದೆ. ದುಬೈ ವಿಮಾನ ನಿಲ್ದಾಣದ ಬಳಿಯೂ ಸ್ಫೋಟ ಸಂಭವಿಸಿದೆ. ಅಲ್ಲಿ ಸಂಭವಿಸಿದ ಹಾನಿಯ ಫೋಟೊವನ್ನು ಫ್ಲೈಟ್ ಅಟೆಂಡರ್‌ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಹೀಗಾಗಿ 25 ವರ್ಷದ ಬ್ರಿಟಿಷ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಲಾಗಿದ್ದು ಯುಎಇಯ ಸೈಬರ್ ಕ್ರೈಮ್ ಅಡಿಯಲ್ಲಿ ದೂರು ದಾಖಲಾಗಿದೆ.

Viral Video: ಏನಿದು ಪವಾಡ?! ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಅಲ್ಲಿಗೆ ಕೆಲಸಕ್ಕೆ ಹಾಜರಾಗುವುದು‌ ಸುರಕ್ಷಿತವೇ ಎಂದು ತಿಳಿದುಕೊಳ್ಳಲು ಆತ ಖಾಸಗಿ ವಾಟ್ಸ್‌ಆ್ಯಪ್‌ ಮೂಲಕ ಫೋಟೊ ಶೇರ್ ಮಾಡಿದ್ದ. ಪೊಲೀಸರು ಆತನ ಫೋನ್ ಪರೀಕ್ಷಿಸಿ, ಫೋಟೊ ಪತ್ತೆಹಚ್ಚಿದ್ದಾರೆ. ಯುಎಇಯ ಕಠಿಣ ಸೈಬರ್ ಅಪರಾಧ ಕಾನೂನುಗಳ ಅಡಿಯಲ್ಲಿ ಆತನನ್ನು ಬಂಧಿಸಿದ್ದು ಈಗ ಆತನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 20,0000 ಯುಎಇ ದಿರ್ಹಾಮ್‌ಗಳು ಅಂದರೆ ಸರಿಸುಮಾರು 50 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.ಶಿಕ್ಷೆ ಮುಗಿದ ನಂತರ ದೇಶದಿಂದ ಗಡೀಪಾರು ಮಾಡುವ ಸಾಧ್ಯತೆ ಕೂಡ ಇದೆ.

ಸಾರ್ವಜನಿಕ ಭದ್ರತೆಗೆ ಹಾನಿ ಮಾಡುವ ಅಥವಾ ಭೀತಿ ಉಂಟುಮಾಡುವ ವಿಷಯವನ್ನು ಹಂಚಿ ಕೊಂಡಿದ್ದಕ್ಕಾಗಿ ಯುಎಇಯ ಸೈಬರ್ ಅಪರಾಧ ಕಾನೂನುಗಳ ಅಡಿಯಲ್ಲಿ ಸುಮಾರು 21 ಜನರ ಮೇಲೆ ಆರೋಪ ಹೊರಿಸಿದೆ ಎಂದು ಇಂಗ್ಲೆಂಡ್‌ ಮೂಲದ ಕಾನೂನು ನೆರವು ನೀಡುವ ಸಂಸ್ಥೆ ಮಾಹಿತಿ ನೀಡಿದೆ.