ಸ್ಕೂಟರ್ ರಿಪೇರಿಗಾಗಿ ತೆರಳುತ್ತಿದ್ದಾಗ ಹೃದಯಾಘಾತ: ಕುಸಿದು ಬಿದ್ದು ಯುವಕ ಸ್ಥಳದಲ್ಲೇ ಸಾವು
ಸ್ಕೂಟರ್ ರಿಪೇರಿಗಾಗಿತೆರಳುತ್ತಿದ್ದ 27 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ವಿಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಮಧ್ಯ ಪ್ರದೇದ ಪರ್ದೇಶಿಪುರದಲ್ಲಿ ಈ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯುವಕ ತನ್ನ ದ್ವಿಚಕ್ರ ವಾಹನವನ್ನು ಕಾಲ್ನಡಿಗೆಯಲ್ಲಿ ತಳ್ಳುತ್ತ ಹೋಗಿದ್ದಾನೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಸ್ಕೂಟರ್ ರಿಪೇರಿಗಾಗಿ ತೆರಳುತ್ತಿದ್ದಾಗ ಹೃದಯಾಘಾತ -
ಭೋಪಾಲ್, ಡಿ. 2: ಹೃದಯಾಘಾತದಿಂದಲೇ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಮಸೀದಿಯಲ್ಲಿ ನಮಾಜ್ ಮಾಡುತ್ತಲೇ ಹೃದಯಾಘಾತಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಬಸ್ ಪ್ರಯಾಣ, ವಾಕಿಂಗ್, ವರ್ಕೌಟ್ ಮಾಡುತ್ತಲೇ ಹಾರ್ಟ್ ಆಟ್ಯಾಕ್ ಆಗಿ ಪ್ರಾಣ ಕಳೆದು ಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಇದೀಗ ಸ್ಕೂಟರ್ ರಿಪೇರಿಗಾಗಿ ಹೋದ 27 ವರ್ಷದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ವಿಡಿಯೊವೊಂದು ಭಾರಿ ವೈರಲ್ (Viral Video) ಆಗುತ್ತಿದೆ. ಮಧ್ಯ ಪ್ರದೇದ ಪರ್ದೇಶಿಪುರದಲ್ಲಿ ಈ ಘಟನೆ ನಡೆದಿದ್ದು ನೋಡುಗರನ್ನೇ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ವಿನೀತ್ ಕುಚೇಕರ್ (27) ಜನತಾ ಕ್ವಾರ್ಟರ್ ನಿವಾಸಿಯಾಗಿದ್ದು ಬೆಳಗ್ಗೆ 11:30ಕ್ಜೆ ತಮ್ಮ ಸ್ಕೂಟರ್ ಸರಿಪಡಿಸಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರು ಅಲ್ಲಿನ ಪಿಂಕ್ ಫ್ಲವರ್ ಎಚ್.ಎಸ್. ಶಾಲೆಯ ಹತ್ತಿರ ಕೇವಲ 300 ಮೀಟರ್ ದೂರ ಕ್ರಮಿಸಿದ್ದಾಗಲೇ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಯುವಕ ತನ್ನ ದ್ವಿಚಕ್ರ ವಾಹನವನ್ನು ಕಾಲ್ನಡಿಗೆಯಲ್ಲಿ ತಳ್ಳುತ್ತಾ ಹೋಗಿದ್ದಾನೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ವಿಡಿಯೊ ನೋಡಿ:
27-year-old youth going to repair scooter puncture dies of heart attack in Indore#MadhyaPradesh #MPNews #FreePressMP pic.twitter.com/wRK18B26jE
— Free Press Madhya Pradesh (@FreePressMP) December 2, 2025
ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತ ಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ವಿನೀತ್ ತಂದೆ ಸಂಜಯ್ ಈ ಬಗ್ಗೆ ಮಾತನಾಡಿ, ತಮ್ಮ ಪುತ್ರನಿಗೆ ಯಾವುದೇ ರೀತಿಯ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ ಎಂದಿದ್ದಾರೆ. ವಿನೀತ್ ತನ್ನ ತಂದೆಯೊಂದಿಗೆ ಆಸ್ತಿ ವ್ಯವಹಾರದ ನೋಡಿಕೊಳ್ಳುತ್ತಿದ್ದರು.
ಮಧ್ಯ ಪ್ರದೇಶದಲ್ಲಿ ಇದೇ ರೀತಿಯ ಇನ್ನೊಂದು ಘಟನೆಯೂ ಬೆಳಕಿಗೆ ಬಂದಿದ್ದು ಮದುವೆ ಸಮಾರಂಭವೊಂದು ದುಃಖದಲ್ಲಿ ಅಂತ್ಯಗೊಂಡಿದೆ. ಮದುವೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವರನ ಸ್ನೇಹಿತ ಜಿತೇಂದ್ರ ಎನ್ನುವವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇದು ಕೂಡ ಹೃದಯಾಘಾತದಿಂದ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಎರಡು ಅಕಾಲಿಕ ಮರಣ ಇಂದೋರ್‌ನಲ್ಲಿ ಆತಂಕವನ್ನು ಹೆಚ್ಚಿಸಿವೆ.
ಸುರಂಗದಲ್ಲಿ ಕೆಟ್ಟು ನಿಂತ ಚೆನ್ನೈ ಮೆಟ್ರೋ ರೈಲು; ಪ್ರಯಾಣಿಕರು ಸುಸ್ತೋ ಸುಸ್ತು...
ಈ ದೃಶ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಹೃದಯಾಘಾತದಿಂದಲೇ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇಂದು ಎದುರಾಗಿದೆ. ಇನ್ನು ಮುಂದೆ ಸಾವಿಗೇ ಇದೇ ಬಹು ಮುಖ್ಯ ಕಾರಣ ಆಗಬಹುದು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಜೀವನ ಕ್ಷಣಿಕ ಅಷ್ಟೇ. ಇದ್ದಾಗ ಖುಷಿಯಲ್ಲಿ ಬದುಕ ಸಾಗಿಸಬೇಕು ಎಂದು ಬರೆದುಕೊಂಡಿದ್ದಾರೆ.