ಬರಿಗೈಯಲ್ಲೇ ಒಬ್ಬಂಟಿಯಾಗಿ ಕಲುಷಿತ ನದಿ ಸ್ವಚ್ಛಗೊಳಿಸಿದ ಯುವಕ:ನಿಸ್ವಾರ್ಥ ಸೇವೆಗೆ ಶ್ಲಾಘಿಸಿ ಕೆಲಸದ ಆಫರ್ ನೀಡಿದ ಓಷನ್ ಕ್ಲೀನ್‌ಅಪ್ CEO
Viral News: ಮಧ್ಯಪ್ರದೇಶದ ಅಜ್ನರ್ ನದಿಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಬಿಟ್ಟು ತಬಾಹಿ ಎನ್ನುವ ಯುವಕ ಒಬ್ಬಂಟಿಯಾಗಿ ತೆರವು ಗೊಳಿಸಿದ್ದ.ಇದೀಗ ಯುವಕನ ಈ ನಿಸ್ವಾರ್ಥ ಸೇವೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಪರಿಸರ ಕಾಳಜಿಗೆ ಶ್ಲಾಘನೆ ವ್ಯಕ್ತ ಪಡಿಸಿದ ನೆದರ್ಲ್ಯಾಂಡ್ಸ್ ಮೂಲದ 'ದಿ ಓಷನ್ ಕ್ಲೀನ್‌ಅಪ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ಮಾಡುವಂತೆ ಈ ಯುವಕನಿಗೆ ಆಫರ್ ನೀಡಿದ್ದಾರೆ.
ನದಿ ನೀರು ಸ್ವಚ್ಚಗೊಳಿಸಿದ ಯುವಕನಿಗೆ ಜಾಬ್ ಆಫರ್ ನೀಡಿದ ವಿದೇಶಿ ಸಂಸ್ಥಾಪಕ -
ಮಧ್ಯಪ್ರದೇಶ,ಸೆ.6: ಇತ್ತೀಚೆಗೆ 20 ವರ್ಷದ ಯುವಕನೊಬ್ಬ ಕಲುಷಿತಗೊಂಡ ನದಿಯ ನೀರನ್ನು ಸ್ವಚ್ಛಗೊಳಿಸಿದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿತ್ತು. ಪುರಸಭೆಯ ಸ್ವಚ್ಛತಾ ಅಭಿಯಾನಕ್ಕಾಗಿ ಕಾಯದೇ ಮಧ್ಯಪ್ರದೇಶದ ಅಜ್ನರ್ ನದಿಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ಬಿಟ್ಟು ತಬಾಹಿ ಎನ್ನುವ ಯುವಕ ಒಬ್ಬಂಟಿಯಾಗಿ ತೆರವುಗೊಳಿಸಿದ್ದ. ಇದೀಗ ಯುವಕನ ಈ ನಿಸ್ವಾರ್ಥ ಸೇವೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರ ಪರಿಸರ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದ ನೆದರ್ಲ್ಯಾಂಡ್ಸ್ ಮೂಲದ 'ದಿ ಓಷನ್ ಕ್ಲೀನ್‌ಅಪ್' ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ಮಾಡುವಂತೆ ಈ ಯುವಕನಿಗೆ ಆಫರ್ ನೀಡಿದ್ದಾರೆ.
20 ವರ್ಷದ ಭಾರತೀಯ ಯುವಕನೊಬ್ಬ ಕಸ ತುಂಬಿದ ನದಿಯನ್ನು ಒಂಟಿಯಾಗಿ ಸ್ವಚ್ಛಗೊಳಿಸುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ ಡಚ್ ಪರಿಸರವಾದಿ ಬೋಯನ್ ಸ್ಲಾಟ್ ಅವರ ಗಮನ ಸೆಳೆದಿದೆ. ಬಿಟ್ಟು ತಬಹಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದಿರುವ ಸುರೇಂದ್ರ ಸಿಂಗ್ ಚೌಧರಿ, ಹಲವಾರು ತಿಂಗಳುಗಳಿಂದ ಕಲುಷಿತ ಜಲಮಾರ್ಗದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವತಃ ತಮ್ಮ ಕೈಯಿಂದಲೇ ತೆರವುಗೊಳಿಸಿದ್ದರು.
ವಿಡಿಯೋ ನೋಡಿ:
Dutch founder Boyan Slat has offered 20 year old Bittu a job and a move to the Netherlands after his viral river-cleaning video: Report pic.twitter.com/3PTaE6199j
— 🚨Indian Gems (@IndianGems_) September 5, 2026
ಅಜ್ನರ್ ನದಿಯಿಂದ ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ತೆಗೆಯಲು ಮೂರು ತಿಂಗಳು ಕಾಲ ಶ್ರಮಿಸಿದ್ದರು. ತಮ್ಮ ಈ ಪ್ರಯತ್ನಕ್ಕೆ ಅಗತ್ಯವಾದ ಸಾಮಗ್ರಿಗಳಿಗಾಗಿ ತಮ್ಮ ಸ್ವಂತ ಹಣವನ್ನು ಅವರು ಖರ್ಚು ಮಾಡಿದ್ದರು. ಇವರ ಪರಿಸರ ಪ್ರೇಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ ಇದನ್ನು ಗಮನಿಸಿದ ಡಚ್ ಪರಿಸರವಾದಿ ಬೋಯನ್ ಸ್ಲಾಟ್, "ನಮ್ಮ ಜೊತೆ ಬಂದು ಕೆಲಸ ಮಾಡಿ" ಎಂದು ಸಂದೇಶ ಕಳುಹಿಸುವ ಮೂಲಕ ಕೆಲಸದ ಆಫರ್ ನೀಡಿದ್ದಾರೆ.
"ದಿ ಓಷನ್ ಕ್ಲೀನಪ್, ನೆದರ್ಲ್ಯಾಂಡ್ಸ್ ಮೂಲದ ಸಂಸ್ಥೆಯಾಗಿದ್ದು, ಇದು ಸಾಗರಗಳು ಮತ್ತು ನದಿಗಳಿಂದ ಪ್ಲಾಸ್ಟಿಕ್ ಮಾಲಿನ್ಯವನ್ನು ತೆಗೆದುಹಾಕಲು ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಜಾಗತಿಕ ಸಂಸ್ಥೆಯಾಗಿದೆ.ಇದೀಗ ಬೋಯನ್ ಸ್ಲಾಟ್ ಅವರ ಈ ಆಫರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ
ಭಾರತದಲ್ಲಿ ಇಂತಹ ಶ್ರಮಕ್ಕೆ ಬೆಲೆ ಸಿಗುವುದು ಕಷ್ಟ. ಅವರು ತಕ್ಷಣ ಈ ಆಫರ್ ಸ್ವೀಕರಿಸಿ ವಿದೇಶಕ್ಕೆ ತೆರಳಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಲವಾರು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಪಾಶ್ಚಿಮಾತ್ಯ ದೇಶಗಳು ಕೆಲಸವನ್ನು ಗೌರವಿಸುತ್ತವೆ, ಆದರೆ ಭಾರತೀಯರಲ್ಲಿ ಇದಕ್ಕೆ ಕೃತಜ್ಞತೆ ಭಾವವೂ ಇಲ್ಲ ಅಂದರು. ಇನ್ನೊಬ್ಬರು ಇದು ಭಾರತವನ್ನು ಕೀಳಾಗಿ ಬಿಂಬಿಸುವ ಯತ್ನ, ವಿದೇಶಿಯರು ನಮ್ಮ ದೇಶದ ಬಗ್ಗೆ ಉಪಚಾರ ಮಾಡುವುದು ತಪ್ಪು ಎಂದಿದ್ದಾರೆ.