ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಾಷಿಂಗ್‌ ಮೆಷಿನ್‌ ಬಳಸೋ ಮುನ್ನ ಎಚ್ಚರ... ಎಚ್ಚರ! ಈ ವಿಡಿಯೊ ನೋಡಿ

Man Dies from Electric Shock: ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಭಯಾನಕ ವಿಡಿಯೊ ನೋಡಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಆರಾಮಾಗಿದ್ದ ವ್ಯಕ್ತಿ, ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್‍ಗೆ ಕೈ ಹಾಕಿದ ಪರಿಣಾಮ ಮೃತಪಟ್ಟಿದ್ದನ್ನು ನೋಡಿ ನೆಟ್ಟಿಗರು ಆತಂಕಗೊಂಡರು. ವಿದ್ಯುತ್ ಉಪಕರಣಗಳಿಗೆ ಸಂಬಂಧಪಟ್ಟಂತೆ ನಾವು ಎಷ್ಟೇ ಜಾಗರೂಕರಾಗಿದ್ದರೂ ಸಾಲದು ಎಂಬುದನ್ನು ಈ ವಿಡಿಯೊದಿಂದ ತಿಳಿದುಕೊಳ್ಳಬಹುದು.

ವಾಷಿಂಗ್‌ ಮೆಷಿನ್‌ ಬಳಸೋ ಮುನ್ನ ಎಚ್ಚರ... ಎಚ್ಚರ! ಈ ವಿಡಿಯೊ ನೋಡಿ

Priyanka P Priyanka P Aug 8, 2025 3:49 PM

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ವಿಡಿಯೊವೊಂದು ವೈರಲ್ ಆಗಿದೆ. ವಾಷಿಂಗ್ ಮೆಷಿನ್ ಬಳಸುವಾಗ ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ದುರಂತ ಘಟನೆಯು ಆಘಾತವನ್ನುಂಟು ಮಾಡಿದೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಯಾವ ರೀತಿಯ ಅಪಾಯ ಉಂಟಾಗಬಹುದು ಎಂಬುದನ್ನು ಈ ವಿಡಿಯೊದಿಂದ(Viral Video) ತಿಳಿದುಕೊಳ್ಳಬಹುದು. ವಿಡಿಯೊದಲ್ಲಿ, ವ್ಯಕ್ತಿಯು ಬಟ್ಟೆ ಒಗೆಯಲು ತಯಾರಿ ನಡೆಸುತ್ತಿರುವುದನ್ನು ನೋಡಬಹುದು. ಡಿಟರ್ಜೆಂಟ್ ಪೌಡರ್ ಸೇರಿಸಿ, ಮೆಷಿನ್ ಅನ್ನು ಆನ್ ಮಾಡಿ, ನಂತರ ತನ್ನ ಕೈಯನ್ನು ಮೆಷಿನ್ ಒಳಗೆ ಹಾಕಿದ್ದಾನೆ. ತಾಂತ್ರಿಕ ದೋಷದ ಅರಿವಿಲ್ಲದ ಅವರು ನೀರನ್ನು ಮುಟ್ಟಿದಾಗ ತೀವ್ರ ವಿದ್ಯುತ್ ಆಘಾತಕ್ಕೊಳಗಾದರು. ಕೆಲವೇ ಸೆಕೆಂಡುಗಳಲ್ಲಿ ಪ್ರಜ್ಞೆ ಕಳೆದುಕೊಂಡರು.

ಈ ಭಯಾನಕ ವಿಡಿಯೊ ನೋಡಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಆರಾಮಾಗಿದ್ದ ವ್ಯಕ್ತಿ, ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್‍ಗೆ ಕೈ ಹಾಕಿದ ಪರಿಣಾಮ ಮೃತಪಟ್ಟಿದ್ದನ್ನು ನೋಡಿ ನೆಟ್ಟಿಗರು ಆತಂಕಗೊಂಡರು. ವಿದ್ಯುತ್ ಉಪಕರಣಗಳಿಗೆ ಸಂಬಂಧಪಟ್ಟಂತೆ ನಾವು ಎಷ್ಟೇ ಜಾಗರೂಕರಾಗಿದ್ದರೂ ಸಾಲದು ಎಂಬುದನ್ನು ಈ ವಿಡಿಯೊದಿಂದ ತಿಳಿದುಕೊಳ್ಳಬಹುದು.

ವಿಡಿಯೊ ವೀಕ್ಷಿಸಿ:

ಅಂದಹಾಗೆ, ಇದು ಪ್ರತ್ಯೇಕ ಪ್ರಕರಣವಲ್ಲ. ಉತ್ತರ ಪ್ರದೇಶದ ಲಕ್ನೋದಲ್ಲಿ, ಫಾಸ್ಟ್ ಫುಡ್ ಮಾರಾಟಗಾರ 28 ವರ್ಷದ ಇರ್ಫಾನ್, ವಾಷಿಂಗ್ ಮೆಷಿನ್ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟರು. ಕೂಡಲೇ ಅವರನ್ನು ಲೋಹಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಅಲ್ಲಿ ತಲುಪುವ ವೇಳೆಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಈ ಸುದ್ದಿಯನ್ನೂ ಓದಿ: Viral Video: ವರದಕ್ಷಿಣೆಗಾಗಿ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ; ವೈರಲ್‌ ಆಯ್ತು ಪತಿಯ ಕ್ರೌರ್ಯ

ಅದೇ ರೀತಿ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಜವಾಹರ್ ಸಿಂಗ್ ಯಾದವ್ ಎಂಬವರು ತನ್ನ ಹಸುವಿಗೆ ಸ್ನಾನ ಮಾಡಿಸುವಾಗ ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು. ಈ ಘಟನೆಗಳು ವಿದ್ಯುತ್ ಸಾಧನಗಳ ಬಗ್ಗೆ ಅಜಾಗರೂಕತೆಯ ಮಾರಕ ಪರಿಣಾಮಗಳನ್ನು ಎತ್ತಿ ತೋರಿಸುತ್ತವೆ.

ವಿದ್ಯುತ್ ಆಘಾತಗಳು ಏಕೆ ಸಂಭವಿಸುತ್ತವೆ?

ದೇಹದ ಮೂಲಕ ವಿದ್ಯುತ್ ಪ್ರವಾಹ ಹಾದುಹೋದಾಗ ವಿದ್ಯುತ್ ಆಘಾತ (ಕರೆಂಟ್ ಶಾಕ್) ಸಂಭವಿಸುತ್ತವೆ ಎಂದು ತಜ್ಞರು ವಿವರಿಸಿದ್ದಾರೆ. ಇದು ನರಗಳ ಕಾರ್ಯವನ್ನು ಅಡ್ಡಿಪಡಿಸುತ್ತದೆ ಮತ್ತು ಶಾಖವನ್ನು ಉತ್ಪಾದಿಸುತ್ತದೆ. ಅಪಾಯವನ್ನು ಕಡಿಮೆ ಮಾಡಲು, ಮರದ ಅಥವಾ ಎತ್ತರದ ಸ್ಟ್ಯಾಂಡ್‌ಗಳ ಮೇಲೆ ವಾಷಿಂಗ್ ಮೆಷಿನ್ ಇರಿಸಲು ತಜ್ಞರು ಸಲಹೆ ನೀಡುತ್ತಾರೆ. ಯಂತ್ರದೊಳಗೆ ಕೈ ಹಾಕುವ ಮೊದಲು ಯಂತ್ರವು ಸಂಪೂರ್ಣವಾಗಿ ಸ್ವಿಚ್ ಆಫ್ ಮತ್ತು ಅನ್‌ಪ್ಲಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಸಹ ಅತ್ಯಗತ್ಯ.