ರೈಲಿನಲ್ಲಿ ಯುವತಿಯರ ಮೇಲೆ ಹಲ್ಲೆ: ದಿಟ್ಟಿಸಿ ನೋಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಪಾಳಮೋಕ್ಷ ಮಾಡಿದ ದುಷ್ಕರ್ಮಿ
Viral Video: ಚಲಿಸುವ ರೈಲಿನಲ್ಲಿ ಯುವತಿಯರ ಗುಂಪಿನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ಎಸಗಿದ್ದಾನೆ. ಯುವತಿಯರ ಗುಂಪು ಮತ್ತು ಪುರುಷ ಪ್ರಯಾಣಿಕನ ನಡುವೆ ವಾಗ್ವಾದ ಉಂಟಾಗಿದ್ದು, ಮಾತಿನ ಚಕಮಕಿಯ ನಂತರ ಅದು ದೈಹಿಕ ಹಿಂಸೆಯಲ್ಲಿ ಕೊನೆಗೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.
ರೈಲಿನಲ್ಲಿ ಯುವತಿಯರ ಮೇಲೆ ಹಲ್ಲೆ -
ದೆಹಲಿ, ಮೇ 4: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು ದಿನ ನಿತ್ಯ ಕೇಳಿ ಬರುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಚಲಿಸುವ ರೈಲಿನಲ್ಲಿ ಯುವತಿಯರ ಗುಂಪಿನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ಎಸಗಿದ್ದಾನೆ. ಯುವತಿಯರ ಗುಂಪು ಮತ್ತು ಪ್ರಯಾಣಿಕನ ನಡುವೆ ವಾಗ್ವಾದ ಉಂಟಾಗಿದ್ದು, ಮಾತಿನ ಚಕಮಕಿಯ ನಂತರ ಅದು ದೈಹಿಕ ಹಿಂಸೆಯಲ್ಲಿ ಕೊನೆಗೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.
ಚಲಿಸುವ ರೈಲಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಯುವತಿಯರ ಪ್ರಕಾರ, ಆ ವ್ಯಕ್ತಿ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅವರನ್ನು ದಿಟ್ಟಿಸಿ ನೋಡುತ್ತಿದ್ದ. ಇದನ್ನು ಪ್ರಶ್ನೆ ಮಾಡಲು ಹೋದಾಗ ಹಲ್ಲೆ ಮಾಡಿದ್ದಾನೆ. ಮಾತಿನ ಚಕಮಕಿಯಾಗಿ ಪ್ರಾರಂಭವಾಗಿದ್ದು ನಂತರ ಆತ ಯುವತಿಗೆ ಕಪಾಳಮೋಕ್ಷ ಮಾಡಿದ್ದಾನೆ.
ವಿಡಿಯೊ ನೋಡಿ:
रेल में महिलाओं से बदसलूकी और मारपीट का ये वीडियो सोशलमीडिया पर वायरल है।
— अश्विनी सोनी (@Ramraajya) May 4, 2026
जब तक ये आरोपी पकड़ा ना जाये जिम्मेदारी अधिकारीयों को टैग कीजिए।@RailMinIndia इस दरिंदे को कड़ी से कड़ी सजा मिलनी चाहिए।
@AshwiniVaishnaw#ElectionResult2026 pic.twitter.com/4prR4ELrXm
ರೈಲಿನ ಮೇಲಿನ ಬರ್ತ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಯುವತಿಯರನ್ನು ಸುಮಾರು ಸಮಯದವರೆಗೆ ದಿಟ್ಟಿಸಿ ನೋಡುತ್ತಿದ್ದ. ಇದರಿಂದ ಅಸಮಾಧಾನಗೊಂಡ ಯುವತಿಯರು ಆತನನ್ನು ಪ್ರಶ್ನಿಸಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಯುವತಿಯರು ಪ್ರಶ್ನಿಸುತ್ತಿದ್ದಂತೆ ಕೆಳಕ್ಕೆ ಇಳಿದು ಬಂದ ವ್ಯಕ್ತಿ, ಕ್ಷಮೆ ಕೇಳುವ ಬದಲು ವಿಡಿಯೊ ರೆಕಾರ್ಡ್ ಮಾಡಿದ ಯುವತಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆಕ್ರೋಶಗೊಂಡ ಯುವತಿ, "ನನ್ನ ಮೇಲೆ ಕೈ ಮಾಡಲು ನಿನಗೆಷ್ಟು ಧೈರ್ಯ? ಹೇಗೆ ಹೊಡೆದೆ?'' ಎಂದು ಕಿರುಚಿದ್ದಾಳೆ.
ಪೆಟ್ ಲವ್ವರ್ಸ್ ನೋಡಲೇಬೇಕು ಈ ವಿಡಿಯೊ! ಶ್ವಾನದ ಜೊತೆ ಟ್ರಾವೆಲ್ ಮಾಡೋರಿಗೆ ಇಲ್ಲಿದೆ ಕ್ರಿಯೇಟಿವ್ ಹ್ಯಾಕ್
ಸದ್ಯ ಈ ವಿಡಿಯೊ ವೈರಲ್ ಆಗಿದ್ದು ಅನೇಕರು ರೈಲ್ವೆ ಸಚಿವಾಲಯ ಮತ್ತು ರೈಲು ಸಚಿವೆ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ, ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ. ರೈಲಿನಲ್ಲಿ ಮಹಿಳೆಯರ ಮೇಲಿನ ಅನುಚಿತ ವರ್ತನೆ. ಈ ಅಪರಾಧಿಯನ್ನು ಹಿಡಿಯುವವರೆಗೆ, ಜವಾಬ್ದಾರಿಯುತ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಶೇರ್ ಮಾಡಲಾಗಿದೆ.
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು, ಬಳಕೆದಾರರೊಬ್ಬರು "ಅಧಿಕಾರಿಗಳು ನಾಚಿಕೆಪಡಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು ʼʼಇವನಿಗೆ ಶಿಕ್ಷೆ ಆಗುವರೆಗೂ ಬಿಡಬಾರದುʼʼ ಹೇಳಿದ್ದಾರೆ. ಈ ಘಟನೆ ನಡೆಯುವಾಗ ಸುತ್ತಮುತ್ತಲಿದ್ದ ಇತರ ಪ್ರಯಾಣಿಕರು ಯಾವುದೇ ಸಹಾಯಕ್ಕೆ ಮುಂದಾಗಿಲ್ಲ.