ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೈಲ್‌ ನಾಪತ್ತೆಯಿಂದ ಬೇಸರ; ನೆನಪಿನ ಶಕ್ತಿ ಸುಧಾರಣೆಗೆ ಸರ್ಕಾರಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದ ವ್ಯಕ್ತಿ

Man Pours Almonds: ಕಡತಗಳು ನಾಪತ್ತೆಯಾಗಿದ್ದರಿಂದ ಬೇಸರಗೊಂಡ ಯುವಕನೊಬ್ಬ ಸರ್ಕಾರಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದಿರುವ ಘಟನೆ ಛತ್ತೀಸ್‍ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತನ್ನ ಆಸ್ತಿ ಫೈಲ್ ಕಾಣೆಯಾದ ನಂತರ ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದೆ.

ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದ ವ್ಯಕ್ತಿ; ವಿಡಿಯೊ ವೈರಲ್

ಸರ್ಕಾರಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದ ವ್ಯಕ್ತಿ -

Priyanka P
Priyanka P Apr 18, 2026 6:36 PM

ರಾಯ್‌ಪುರ, ಏ. 18: ಕಡತಗಳು ನಾಪತ್ತೆಯಾಗಿದ್ದರಿಂದ ಬೇಸರಗೊಂಡ ಯುವಕನೊಬ್ಬ ಸರ್ಕಾರಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದಿರುವ ಘಟನೆ ಛತ್ತೀಸ್‍ಗಢದ (Chhattisgarh) ಬಿಲಾಸ್ಪುರದಲ್ಲಿ ನಡೆದಿದೆ. ಅಧಿಕಾರಿಯ ನೆನಪಿನ ಶಕ್ತಿ ಸುಧಾರಣೆಗಾಗಿ ಬಾದಾಮಿ ಸುರಿಯಲಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತನ್ನ ಆಸ್ತಿ ಫೈಲ್ ಕಾಣೆಯಾದ ನಂತರ ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಈ ಘಟನೆ ವಸತಿ ಮಂಡಳಿ ಕಚೇರಿಯಲ್ಲಿ ನಡೆದಿದೆ. ದೂರುದಾರ ತರುಣ್ ಸಾಹು, ಪದೇ ಪದೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳಿಗೆ ಕಡತವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಹು ಸುಮಾರು ಒಂದು ವರ್ಷದ ಹಿಂದೆ ಮರುಮಾರಾಟದ ಮೂಲಕ ಇಡಬ್ಲ್ಯುಎಸ್ ಫ್ಲ್ಯಾಟ್ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಫೈಲ್ ಕಾಣೆಯಾಗಿರುವುದರಿಂದ ಮ್ಯೂಟೇಶನ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಗತ್ಯ ದಾಖಲೆಗಳಿಲ್ಲದೆ, ಅವರಿಗೆ ಅಧಿಕೃತ ಸ್ವಾಮ್ಯ ಹಕ್ಕು ಪಡೆಯಲು ಸಾಧ್ಯವಾಗಿಲ್ಲ.

ಇಲ್ಲಿದೆ ವಿಡಿಯೊ:



“ನಾನು ಇಲ್ಲಿಗೆ ಬಂದಾಗಲೆಲ್ಲ ಫೈಲ್ ಕಳೆದುಹೋಗಿದೆ ಎಂದು ಕಾರಣ ಹೇಳುತ್ತಾರೆ. ಇದು ಎಷ್ಟು ಕಾಲ ಮುಂದುವರಿಯಲು ಸಾಧ್ಯ?” ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ. ಸಾಹು ಬಾದಾಮಿಯನ್ನು ತಂದು ಸಬ್-ರಿಜಿಸ್ಟ್ರಾರ್ ಅಧಿಕಾರಿಯ ಮೇಜಿನ ಮೇಲೆ ಸುರಿದಿದ್ದಾರೆ. ಇಲಾಖೆಯು ತನ್ನ ಫೈಲ್ ಅನ್ನು ನೆನಪಿಟ್ಟುಕೊಳ್ಳುವಲ್ಲಿ ಅಥವಾ ಪತ್ತೆಹಚ್ಚುವಲ್ಲಿ ವಿಫಲವಾಗಿದೆ ಎಂದು ಅಣಕಿಸುವ ಉದ್ದೇಶದಿಂದ ಈ ರೀತಿ ವಿಲಕ್ಷಣವಾಗಿ ಪ್ರತಿಭಟನೆ ನಡೆಸಲಾಗಿದೆ. ಕಚೇರಿಯ ಸಿಬ್ಬಂದಿಯ ಗಮನ ಸೆಳೆದ ಈ ವಿನೂತನ ಪ್ರತಿಭಟನೆಯಿಂದ ವೈರಲ್‌ ಆಗಿದೆ.

ಸೊಳ್ಳೆ ಪರದೆಯೊಳಗೆ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವ ಸೆಕ್ಯೂರಿಟಿ ಗಾರ್ಡ್

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಗಮನ ಸೆಳೆದಿದೆ. ಸಾರ್ವಜನಿಕ ಕಚೇರಿಗಳಲ್ಲಿ ಅಧಿಕಾರಶಾಹಿ ವಿಳಂಬ ಮತ್ತು ಕರ್ತವ್ಯನಿಷ್ಠೆಯ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಅನೇಕ ಬಳಕೆದಾರರು ಕಾಗದಪತ್ರಗಳ ಕೆಲಸದಲ್ಲಿ ನಾಗರಿಕರು ಎದುರಿಸುತ್ತಿರುವ ದೈನಂದಿನ ತೊಂದರೆಗಳನ್ನು ತೋರಿಸುತ್ತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರಿಗಳು ಮಧ್ಯಪ್ರವೇಶಿಸಿ, ಕಾಣೆಯಾದ ಕಡತವನ್ನು ಪತ್ತೆಹಚ್ಚಿ, ಮತ್ತಷ್ಟು ವಿಳಂಬ ಮಾಡದೆ ಮ್ಯೂಟೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸಾಹು ಆಗ್ರಹಿಸಿದ್ದಾರೆ