ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಸ್ತೆ ಮಧ್ಯೆಯೇ ಬಸ್ ತಡೆದು ಯುವಕರ ಪುಂಡಾಟ; ವೈರಲ್‌ ಆಯ್ತು ವಿಡಿಯೋ

Viral Video: ಯುವಕರ ಗುಂಪೊಂದು ಬಸ್ ಅನ್ನು ಬಲವಂತವಾಗಿ ತಡೆದು ಪುಂಡಾಟ ನಡೆಸಿದ ಘಟನೆ ಮುಂಬೈನ ಗೋವಂಡಿಯಲ್ಲಿ ನಡೆದಿದೆ. ಇದು ನಗರದಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಶಿಸ್ತಿನ ಬಗ್ಗೆ ವ್ಯಾಪಕ ಕಳವಳವನ್ನು ಉಂಟುಮಾಡಿದೆ...

ಮಾರ್ಗ ಮಧ್ಯೆಯೇ ಬಸ್ ನಿಲ್ಲಿಸಿ ಪುಂಡಾಟ ಮೆರೆದ ಯುವಕರು!

ಮುಂಬೈಯಲ್ಲಿ ರಸ್ತೆ ಮಧ್ಯೆಯೇ ಬಸ್ ತಡೆದು ಯುವಕರ ಪುಂಡಾಟ -

Profile
Pushpa Kumari Apr 17, 2026 9:20 PM

ಮುಂಬೈ,ಎ.18: ಇತ್ತೀಚೆಗೆ ರಸ್ತೆ ಸುರಕ್ಷತೆ ಬಗ್ಗೆ ಎಷ್ಟೇ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದರೂ ನಿಯಮ ಉಲ್ಲಂಘನೆ ಮಾಡುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಯುವಕರ ಗುಂಪೊಂದು ಬಸ್ ಅನ್ನು ಬಲವಂತವಾಗಿ ತಡೆದು ಪುಂಡಾಟ ನಡೆಸಿದ ಘಟನೆ (Viral News) ಮುಂಬೈನ ಗೋವಂಡಿಯಲ್ಲಿ ನಡೆದಿದೆ. ಇದು ನಗರದಲ್ಲಿ ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಶಿಸ್ತಿನ ಬಗ್ಗೆ ವ್ಯಾಪಕ ಕಳವಳವನ್ನು ಉಂಟುಮಾಡಿದೆ.

ಯುವಕರ ಗುಂಪೊಂದು ಮಾರ್ಗ ಮಧ್ಯೆಯೇ ಬಸ್ ಅನ್ನು ತಡೆದಿದ್ದು ಇದರಿಂದ ಸಂಚಾರವೇ ಸ್ಥಗಿತಗೊಂಡಿದೆ. ಶಿವಾಜಿ ನಗರ ಡಿಪೋ ಮತ್ತು ಬಾಂದ್ರಾ ಬಸ್ ನಿಲ್ದಾಣ (ಇ) ನಡುವೆ ಬಿಕೆಸಿ ಮೂಲಕ ಚಲಿಸುವ ಎ-371 ಮಾರ್ಗ ಸಂಖ್ಯೆಯನ್ನು ಹೊಂದಿರುವ ಬಸ್ ಅನ್ನು ಯುವಕರು ರಸ್ತೆ ಸಾರಿಗೆಯ ಮಧ್ಯೆಯೇ ತಡೆದು ಪುಂಡಾಡಿಕೆ ಮೆರೆದಿದ್ದಾರೆ.

ವಿಡಿಯೋ ನೋಡಿ:



ಚಲಿಸುತ್ತಿದ್ದ ಬಸ್ಸಿಗೆ ಅಡ್ಡವಾಗಿ ಅವರು‌ ಸೈಕಲ್ ಒಂದನ್ನು ಇಟ್ಟು ಬಸ್ ಚಲಿಸುವುದನ್ನು ತಡೆದಿದ್ದಾರೆ. ಒಬ್ಬ ಯುವಕನು ಚಾಲಕ ನಿಗೆ ಏಕವಚನದಲ್ಲಿ ಬೈದಿದ್ದು ಅವಾಜ್ ಅನ್ನು ಹಾಕಿದ್ದಾನೆ. ಇತರರು ಡ್ಯಾನ್ಸ್ ಮಾಡುತ್ತಾ ಪರಿಸ್ಥಿತಿಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಪಾದಚಾರಿಗಳು ಮತ್ತು ಮೂಲಭೂತ ನಾಗರಿಕ ಮಾನದಂಡಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುವ ಮೂಲಕ ಯುವಕರು ರಸ್ತೆಯಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದಾರೆ.

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ನಿಲ್ಲಿಸಿದ ಬಸ್‌ನ ಹಿಂದೆ ವಾಹನಗಳು ಜಮಾಯಿಸಿದ್ದರಿಂದ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಲ್ಬಣಗೊಂಡಿತು. ಈ ತುರ್ತು ಚಿಕಿತ್ಸೆಗೆ ಹೋಗುವವರಿಗೂ ಈ ಕೃತ್ಯದಿಂದ ಭಾರೀ ತೊಂದರೆಯಾಗಿತ್ತು. ಆದರೆ ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಗುರುತುಗಳ ಬಗ್ಗೆ ಯಾವುದೇ ದೃಢೀಕೃತ ವರದಿಗಳಿಲ್ಲ. ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ನೀಡಿದ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.