ಬಿಂದಿ ವಿವಾದದ ಬೆನ್ನಲ್ಲೇ ಲೆನ್ಸ್‌ಕಾರ್ಟ್‌ಗೆ ಎದುರಾದ ಮತ್ತೊಂದು ಸಂಕಷ್ಟ: ಹಿಂದೂ ವಿರೋಧಿ ಪೊಂಗಲ್ ಜಾಹೀರಾತಿಗೆ ನೆಟ್ಟಿಗರು ಕಿಡಿಕಿಡಿ
Viral Video: ಪೊಂಗಲ್ ಹಬ್ಬದ ಹಿನ್ನಲೆಯಲ್ಲಿ ಲೆನ್ಸ್‌ಕಾರ್ಟ್ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ ಸಾಂಪ್ರದಾಯಿಕ ಆಹಾರ ಬಳಕೆ ಮಾಡುವ ಬದಲಿಗೆ ಖರ್ಜೂರವನ್ನು ಬಳಸಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಪೊಂಗಲ್ ಆಚರಣೆಯ ಸಂದರ್ಭದಲ್ಲಿ ಅಕ್ಕಿ, ಬೆಲ್ಲದಂತಹ ಆಹಾರಗಳನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಲೆನ್ಸ್‌ಕಾರ್ಟ್ ನೀಡಿರುವ ಜಾಹೀರಾತಿನಲ್ಲಿ ಖರ್ಜೂರವನ್ನು ಬಳಸಲಾಗಿದೆ.
ಲೆನ್ಸ್‌ಕಾರ್ಟ್‌ಗೆ ಎದುರಾಯ್ತು ಮತ್ತೊಂದು ಸಂಕಷ್ಟ -
ನವದೆಹಲಿ, ಏ. 18: ಇತ್ತೀಚೆಗೆ ಹಿಂದೂ ವಿರೋಧಿ ನಡೆಯ ಮೂಲಕ ಕನ್ನಡಕ ತಯಾರಿಸುವ ಲೆನ್ಸ್‌ಕಾರ್ಟ್ ಸಂಸ್ಥೆಯೂ ನಾನಾ ರೀತಿಯ ಟೀಕೆಯನ್ನುನ ಎದುರಿಸುತ್ತಿದೆ. ಉದ್ಯೋಗಿಗಳು ಬಿಂದಿ, ತಿಲಕ ಇಟ್ಟುಕೊಳ್ಳಬಾರದೆಂದು ಿಯಮ ಜಾರಿಗೊಳಿಸುವ ಮೂಲಕ ಡ್ರೆಸ್ ಕೋಡ್ ವಿಚಾರದಲ್ಲಿ ಟೀಕೆ ಎದುರಿಸಿದ್ದ ಈ ಸಂಸ್ಥೆ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದೆ. ಪೊಂಗಲ್ ಹಬ್ಬದ ಸಂದರ್ಭದಲ್ಲಿ ನೀಡಿದ ಜಾಹೀರಾತಿನ ಎಡವಟ್ಟಿನಿಂದ ಮತ್ತೆ ಆಕ್ರೋಶಕ್ಕೆ ಗುರಿಯಾಗಿದೆ. ಪೊಂಗಲ್ ಹಬ್ಬದ ಹಿನ್ನಲೆಯಲ್ಲಿ ಲೆನ್ಸ್‌ಕಾರ್ಟ್ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ ಸಾಂಪ್ರದಾಯಿಕ ಆಹಾರ ಬಳಸುವ ಬದಲು ಖರ್ಜೂರವನ್ನು ಬಳಸಿದ್ದು ವಿಡಿಯೊದಲ್ಲಿ ಕಂಡುಬಂದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಸಾಮಾನ್ಯವಾಗಿವಾಗಿ ಪೊಂಗಲ್ ಆಚರಣೆಯ ಸಂದರ್ಭದಲ್ಲಿ ಅಕ್ಕಿ, ಬೆಲ್ಲದಂತಹ ಆಹಾರಗಳನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಲೆನ್ಸ್‌ಕಾರ್ಟ್‌ನ ಜಾಹೀರಾತಿನಲ್ಲಿ ಆಹಾರ ಮಧ್ಯೆ ಖರ್ಜೂರಬನ್ನಿಡಲಾಗಿದೆ. ಹಲವರು ಈ ಜಾಹೀರಾತನ್ನು ಟೀಕಿಸಿದ್ದು ಸಾಂಪ್ರದಾಯಿಕ ಪೊಂಗಲ್ ಆಚರಣೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ವಿಡಿಯೊ ನೋಡಿ:
Anything can be distorted under the label “Cool”, even culture and tradition. Lenskart's Pongal Ad. pic.twitter.com/amL5dWNBgo
— Arshdeep Singh Saini (@the_lama_singh) April 17, 2026
ಇತ್ತೀಚೆಗಷ್ಟೇ ಉದ್ಯೋಗಿಗಳು ಬಿಂದಿ, ತಿಲಕ ಇಟ್ಟುಕೊಳ್ಳಬಾರದೆಂದು ಎನ್ನುವ ರೂಲ್ಸ್ ವೈರಲ್ ಆದ ಬೆನ್ನಲ್ಲೇ ಈಗ ಈ ವಿವಾದಕ್ಕೆ ಸಿಲುಕಿದೆ. ಪೊಂಗಲ್ ಹಬ್ಬದ ಜಾಹೀರಾತಿನಲ್ಲಿ ನೀಡಿದ ಎಡವಟ್ಟಿನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ
ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ಸಂಸ್ಕೃತಿಯ ಆಚರಣೆಯ ಭಾಗವಾದ ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಲೆನ್ಸ್‌ಕಾರ್ಟ್ ಜಾಹೀರಾತು ಬಿಡುಗಡೆ ಮಾಡಿತ್ತು. ಅದರೆ ಇಲ್ಲಿ ಸಾಂಪ್ರದಾಯಿಕ ಆಹಾರದ ಬದಲಿಗೆ ಮುಸ್ಲಿಮರು ಹೆಚ್ಚಾಗಿ ಬಳಸುವ ಖರ್ಜೂರವನ್ನು ತೋರಿಸಿದ್ದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ʼʼಪೊಂಗಲ್ ಹಬ್ಬದಲ್ಲಿ ಯಾರು ಖರ್ಜೂರ ತಿನ್ನುತ್ತಾರೆ?" ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಕೃಷಿ ಹಬ್ಬವಾದ ಪೊಂಗಲ್‌ನಲ್ಲಿ ಅಕ್ಕಿ, ಬೆಲ್ಲ ಮತ್ತು ಹಾಲಿನಿಂದ ಮಾಡಿದ 'ಪೊಂಗಲ್' ಪ್ರಸಾದ ಮುಖ್ಯವಾಗಿರುತ್ತದೆʼʼ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, “ಅವರು ರಂಜಾನ್ ಹಬ್ಬವೆಂದು ಭಾವಿಸಿ ಗೊಂದಲಕ್ಕೊಳಗಾಗಿದ್ದಾರೆ'' ಎಂದು ಕಮೆಂಟ್ ಮಾಡಿದ್ದಾರೆ.