ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇದೆಂಥಾ ಸಂಸ್ಕೃತಿ? ಅಮೆರಿಕದಲ್ಲಿ ಭಾರತದ ರಾಷ್ಟ್ರ ಧ್ವಜ ಹರಿದು ವಿಕೃತಿ ಮೆರೆದ ಯುವಕ

Viral News: ಭಾರತದ ವಿರುದ್ಧ ಕತ್ತಿ ಮಸೆಯುವ ಅನೇಕ ಕಿಡೀಗೆಡಿಗಳು ಇದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅಮೆರಿಕದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬ ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿ ವಿಕೃತಿ ಮೆರೆದಿರುವ ದೃಶ್ಯವೊಂದು ವೈರಲ್‌ ಆಗಿದ್ದು, ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾರತದ ರಾಷ್ಟ್ರಧ್ವಜ ಹರಿದು ಹಾಕಿದ ಕಿಡಿಗೇಡಿ: ಭುಗಿಲೆದ್ದ ಆಕ್ರೋಶ

ಅಮೆರಿಕದಲ್ಲಿ ಭಾರತದ ರಾಷ್ಟ್ರಧ್ವಜ ಹರಿದು ವಿಕೃತಿ ಮೆರೆದ ಯುವಕ -

Profile
Pushpa Kumari Jun 3, 2026 7:01 PM

ದೆಹಲಿ, ಜೂ. 3: ದೇಶಪ್ರೇಮವನ್ನು ಸಾರುವ ಅನೇಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿರುವುದನ್ನು ನೀವು ಗಮನಿಸರಬಹುದು.‌ ರಾಷ್ಟ ಧ್ವಜಕ್ಕೆ ಗೌರವ ನೀಡುವುದು, ರಾಷ್ಟ್ರ ಗೀತೆಯನ್ನು ಗೌರವಿಸುವುದು ಹೀಗೆ...ಆದರೆ ಭಾರತಕ್ಕೆ ದ್ವೇಷ ಬಯಸುವ ಅನೇಕ ಕಿಡಿಗೇಡಿಗಳು ಇದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಅಮೆರಿಕದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬ ಭಾರತದ ರಾಷ್ಟ್ರ ಧ್ವಜವನ್ನು ಹರಿದು ಹಾಕಿ ವಿಕೃತಿ ಮೆರೆದಿರುವ ದೃಶ್ಯ ವೈರಲ್‌ ಆಗಿದ್ದು, ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಫ್ರಿಸ್ಕೊ ​​ಸಿಟಿ ಹಾಲ್ ಹೊರಗೆ ಟೆಕ್ಸಾಸ್‌ನ ವ್ಯಕ್ತಿಯೊಬ್ಬ ಭಾರತದ ಧ್ವಜವನ್ನು ಹರಿದು ಹಾಕಿದ್ದಾನೆ‌. ಸಾರ್ವಜನಿಕವಾಗಿಯೇ ಬಮ್ಮ ರಾಷ್ಟ ಧ್ವಜವನ್ನು ಅವಮಾನಿಸಿದ್ದಾನೆ. ವಿಡಿಯೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಆತನ ವಿರುದ್ಧ ಕಿಡಿಕಾರಿದ್ದಾರೆ.

ವಿಡಿಯೊ ನೋಡಿ:



ವ್ಯಕ್ತಿಯೂ ಹರ್ಷೋದ್ಗಾರ ಮಾಡುತ್ತಿದ್ದ ಜನಸಮೂಹದ ಮುಂದೆ ಭಾರತದ ಧ್ವಜವನ್ನು ಹರಿದು ಹಾಕಿದ್ದಾನೆ. ಫ್ರಿಸ್ಕೋ ನಗರದ ಸರ್ಕಾರಿ ಕಚೇರಿಯ ಎದುರು ನಿಂತ ಈತ ಮೊದಲು ಭಾರತೀಯ ಧ್ವಜವನ್ನು ಕೈಯಲ್ಲಿ ಹಿಡಿದು ಹರಿದು ಹಾಕಿದ್ದಾನೆ. ಈ ವೇಳೆ ಅಲ್ಲಿದ್ದ ಕೆಲವರು ಆತನನ್ನು ಹುರಿದುಂಬಿಸಿದ್ದಾರೆ. ಭಾರತೀಯ ವಲಸಿಗರ ಸಂಖ್ಯೆಯನ್ನು ವಿರೋಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.

ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಸಿಟಿ ಹಾಲ್ ಹೊರಗೆ ಸಿಗರೇಟ್‌ ಸೇದುತ್ತ ನಿಂತಿದ್ದ ಈ ಪಾಪಿ ಭಾರತದ ಧ್ವಜವನ್ನು ಹರಿದು ಹಾಕುತ್ತಿರುವುದನ್ನು ವಿಡಿಯೊ ತೋರಿಸಿದೆ. ಅವನ ಸುತ್ತಲಿನ ಹಲವರು ಈ ನಡೆಯನ್ನು ಮೆಚ್ಚಿ ಹರ್ಷೋದ್ಗಾರ ಮಾಡಿದ್ದಾರೆ. ಉತ್ತರ ಡಲ್ಲಾಸ್‌ನಲ್ಲಿ ಭಾರತೀಯ ವಲಸೆ ಆಕ್ರಮಣದ ವಿರುದ್ಧ ಈ ಕೃತ್ಯ ಎಸಗಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಶ್ವದಾದ್ಯಂತ ಇರುವ ಭಾರತೀಯರು ತೀವ್ರ ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರು, ಈ ಕೃತ್ಯವನ್ನು ಖಂಡಿಸುತ್ತ, ʼʼಇದು ಅನ್ಯಾಯ. ದ್ವೇಷ ಎಂದಿಗೂ ಒಳ್ಳೆಯದಲ್ಲ‌‌‌. ವಲಸಿಗರ ವಿರುದ್ಧ ನೀವು ಸಭ್ಯವಾಗಿ ಮತ್ತು ಗೌರವದಿಂದ ಧ್ವನಿ ಎತ್ತಬಹುದು. ಆದರೆ ಈ ರೀತಿ ದ್ವೇಷ ಮೆರೆಯುವುದು ತಪ್ಪುʼʼ ಎಂದಿದ್ದಾರೆ. ʼʼವಿದೇಶದಲ್ಲಿ ಭಾರತೀಯರ ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸ್ಥಳೀಯ ಉದ್ಯೋಗದಲ್ಲೂ ಮುಂಚೂಣಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಇಂತಹ ದ್ವೇಷʼʼ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.