ದೆಹಲಿ ಬೆಂಕಿ ಅವಘಡ: ಪ್ರಾಣ ಕಾಪಾಡಿಕೊಳ್ಳಲು ಕಟ್ಟಡದಿಂದ ಜಿಗಿದ ಮಹಿಳೆಯರ ವಿಡಿಯೊ ವೈರಲ್
ದಕ್ಷಿಣ ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದ ಫ್ಲೋರಿಶ್ ಸ್ಟೇಯ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಬುಧವಾರ ಬೆಳಗ್ಗೆ ನಡೆದ ಬೆಂಕಿ ದುರಂತದಲ್ಲಿ ಪ್ರಾಣ ಕಾಪಾಡಿಕೊಳ್ಳಲು ಹಲವು ಮಹಿಳೆಯರು ಎತ್ತರದ ಕಟ್ಟಡದಿಂದ ಜಿಗಿದಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ರೆಸ್ಟೋರೆಂಟ್‌ವೊಂದರಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತದ ವಿಡಿಯೋಗಳು (Viral video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಪ್ರಾಣ ಕಾಪಾಡಿಕೊಳ್ಳಲು ಹಲವು ಮಹಿಳೆಯರು ಎತ್ತರದ ಕಟ್ಟಡದಿಂದ ಜಿಗಿದಿರುವ ಭೀಕರ ದೃಶ್ಯಗಳು ಕಂಡು ಬಂದಿವೆ. ದಕ್ಷಿಣ ದೆಹಲಿಯ (delhi fire) ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದ ಫ್ಲೋರಿಶ್ ಸ್ಟೇಯ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಬುಧವಾರ ಬೆಳಗ್ಗೆ 8.50ರ ಸುಮಾರಿಗೆ ಭಾರಿ ಬೆಂಕಿ (Fire) ದುರಂತ ಸಂಭವಿಸಿತ್ತು. ಇದರಲ್ಲಿ ಪ್ರಾಣ ಕಾಪಾಡಿಕೊಳ್ಳಲು ಹಲವು ಮಹಿಳೆಯರು ಎತ್ತರದ ಕಟ್ಟಡದಿಂದ ಜಿಗಿದಿದ್ದು, ಇವರನ್ನು ಸ್ಥಳೀಯರು ರಕ್ಷಿಸಿದರು.
ದಕ್ಷಿಣ ದೆಹಲಿಯ ಉಪಾಹಾರ ಗೃಹದಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡ ಮೇಲೆ ಇದರ ಆಘಾತಕಾರಿ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಈ ದುರಂತದಲ್ಲಿ ಸುಮಾರು 21 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಹೆಚ್ಚಿನ ವಿದೇಶಿಯರು ಸೇರಿದ್ದರು. ರೆಸ್ಟೋರೆಂಟ್ ನ ನೆಲ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಅತಿ ಶೀಘ್ರವಾಗಿ ಐದು ಅಂತಸ್ತಿನ ಕಟ್ಟಡದ ಇತರ ಮಹಡಿಗಳಿಗೆ ಹರಡಿದೆ.
ಖಾಲಿ ರಸ್ತೆಯಲ್ಲೂ 1 ಗಂಟೆ ಸಿಗ್ನಲ್‌ಗಾಗಿ ಕಾದ ವ್ಯಕ್ತಿ: ಸಿಂಗಾಪುರದ ಶಿಸ್ತಿನ ನಡೆಗೆ ನೆಟ್ಟಿಗರು ಮೆಚ್ಚುಗೆ!
ವೇಗವಾಗಿ ಹಬ್ಬುತ್ತಿದ್ದ ಬೆಂಕಿ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಹಲವು ಮಹಿಳೆಯರು ಎತ್ತರದ ಕಟ್ಟಡದಿಂದ ಜಿಗಿಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಬ್ಬರು ಮಹಿಳೆಯರು ಹೋಟೆಲ್ ಮುಂಭಾಗದ ರಸ್ತೆಗೆ ಬೆಂಕಿಯ ಜ್ವಾಲೆಯ ನಡುವೆ ಕಟ್ಟಡದಿಂದ ಜಿಗಿದಿದ್ದಾರೆ. ಇವರನ್ನು ಸ್ಥಳೀಯರು ಹಾಸಿಗೆ ಹಾಕಿ ರಕ್ಷಿಸಿದರು.
21 DEAD, 18 FOREIGN NATIONALS AMONG VICTIMS in Delhi hotel fire
— Nabila Jamal (@nabilajamal_) June 3, 2026
Shocking visuals show moments when some victims trapped in the Upper floors, jumped off the building to save their lives
Deadly fire at Delhi's Flourish Stay hotel in Malviya Nagar has claimed 21 lives,… pic.twitter.com/bSZxXHwjcY
ಬೆಂಕಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಮೇಲಿನ ಮಹಡಿಗಳಿಂದ ಕೆಲವರು ಜಿಗಿದು ತಮ್ಮ ಪ್ರಾಣವನ್ನು ಕಾಪಾಡಿಕೊಂಡಿದ್ದಾರೆ. ಇವರನ್ನು ಸ್ಥಳೀಯರು ರಕ್ಷಿಸಿದರು ಎಂದು ದಕ್ಷಿಣ ಜಿಲ್ಲೆಯ ಡಿಡಿಎಂಎ ಎಸ್‌ಡಿಎಂ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
‘ತಾರಕ್ ಮೆಹ್ತಾ’ ಸೀರಿಯಲ್ ನೋಡುತ್ತ ಕ್ಯಾಬ್ ಚಲಾಯಿಸಿ ಚಾಲಕ; ಪ್ರಶ್ನಿಸಿದ ಪ್ರಯಾಣಿಕನಿಗೇ ಧಮ್ಕಿ
ಹೌಜ್ ರಾಣಿ ಪ್ರದೇಶದ ಕಿರಿದಾದ ಪ್ರದೇಶದಲ್ಲಿರುವ ಈ ರೆಸ್ಟೋರೆಂಟ್ ಕಟ್ಟಡಕ್ಕೆ ತಗಲಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಅಧಿಕಾರಿಗಳು ಸಾಕಷ್ಟು ಹೊತ್ತು ಪರದಾಡಬೇಕಾಯಿತು. ನೆಲಮಾಳಿಗೆಯೊಂದಿಗೆ ಇದು ಸುಮಾರು 25 ಕೊಠಡಿಗಳನ್ನು ಒಳಗೊಂಡಿದೆ. ಸುಮಾರು 40 ಅತಿಥಿಗಳಿಗೆ ಇಲ್ಲಿ ಸ್ಥಳಾವಕಾಶವಿದ್ದು, ಇವರಲ್ಲಿ ಹೆಚ್ಚಿನವರು ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದ ವಿದೇಶಿಯಾರಾಗಿದ್ದರು. ಬೆಂಕಿ ದುರಂತ ಸಂಭವಿಸಿದಾಗ ಹೆಚ್ಚಿನವರು ನಿದ್ರಿಸುತ್ತಿದ್ದರು ಎನ್ನಲಾಗಿದೆ.