Viral Video: ಅಜ್ನಾರ್ ನದಿ ಸ್ವಚ್ಛಗೊಳಿಸುತ್ತಿದ್ದ ಬಿಟ್ಟು ತಬಾಹಿ ಮೇಲೆ ಕಸ ಎಸೆದ ವ್ಯಕ್ತಿ; ಅನಾಗರಿಕ ವರ್ತನೆಗೆ ತಲೆ ತಗ್ಗಿಸಿದ ನಾಗರಿಕ ಸಮಾಜ
Viral News: ಇತ್ತೀಚೆಗೆ ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಅನ್ನೋದು ಮರೆಯಾಗಿ ಬಿಟ್ಟಿದೆ. ತಿಂದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುವುದು, ರಸ್ತೆ ಮಧ್ಯೆ ಎಸೆಯುವುದು ಹೀಗೆ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುರೇಶ್ಸಿಂಗ್ ಚೌಧರಿ (ಬಿಟ್ಟು ತಬಾಹಿ) ಎಂಬ ಪರಿಸರ ಪ್ರೇಮಿ ಅಜ್ನಾರ್ ನದಿಯನ್ನು ಸ್ವಚ್ಛ ಮಾಡುತ್ತಿರುವಾಗಲೇ ಸೇತುವೆ ಮೇಲಿನಿಂದ ವ್ಯಕ್ತಿಯೊಬ್ಬ ಅವರ ಮೇಲೆಯೇ ಕಸದ ಚೀಲ ಎಸೆದಿರುವ ಘಟನೆ ನಡೆದಿದೆ.
ಮಧ್ಯ ಪ್ರದೇಶದ ಅಜ್ನಾರ್ ನದಿ ಸ್ವಚ್ಛತಾ ಕಾರ್ಯ ವೇಳೆ ಬಿಟ್ಟು ತಬಾಹಿ ಮೇಲೆ ಕಸ ಎಸೆದ ವ್ಯಕ್ತಿ -
ಭೋಪಾಲ್, ಅ. 26: ಇತ್ತೀಚೆಗೆ ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಅನ್ನೋದು ಮರೆಯಾಗಿ ಬಿಟ್ಟಿದೆ. ತಿಂದ ಬಳಿಕ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ರಸ್ತೆ ಮಧ್ಯೆ ಬಿಸಾಕುವುದು ಹೀಗೆ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸುರೇಶ್ಸಿಂಗ್ ಚೌಧರಿ (ಬಿಟ್ಟು ತಬಾಹಿ) ಎಂಬ ಪರಿಸರ ಪ್ರೇಮಿ ಮಧ್ಯ ಪ್ರದೇಶದ ಅಜ್ನಾರ್ ನದಿಯನ್ನು ಸ್ವಚ್ಛ ಮಾಡುತ್ತಿರುವಾಗಲೇ ಸೇತುಮವೆ ಮೇಲಿನಿಂದ ವ್ಯಕ್ತಿಯೊಬ್ಬ ಅವರ ಮೇಲೆಯೇ ಕಸದ ಚೀಲ ಎಸೆದಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಪರಿಸರವಾದಿ ಬಿಟ್ಟು ತಬಾಹಿ ಕೈಗೊಂಡಿದ್ದ ಸ್ವಚ್ಛತಾ ಅಭಿಯಾನವು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಅಜ್ನಾರ್ ನದಿಯಿಂದ ತ್ಯಾಜ್ಯವನ್ನು ಹೊರತೆಗೆಯುತ್ತಿದ್ದಂತೆ ವ್ಯಕ್ತಿಯೊಬ್ಬ ಅವರತ್ತ ಕಸ ಎಸೆದಿದ್ದಾನೆ. ಈ ಘಟನೆಯ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದು ಇದು ಆನ್ಲೈನ್ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬಿಟ್ಟು ತಬಾಹಿ ಮೇಲೆ ಕಸ ಎಸೆದ ವ್ಯಕ್ತಿ:
यहाँ गंदगी से लड़ना आसान है, लोगों की सोच से लड़ना मुश्किल। बिट्टू भाई, तुम पढ़ाई-लिखाई शुरू करो, अपना भविष्य बनाओ। तुम नदी साफ करते रहोगे और ये तुम्हारे सिर पर ही कचरा फेंकते रहेंगे। 💔 https://t.co/cY1jJ9iI28
— खुरपेंची ढांचे (@Khurpenchinfra) October 25, 2026
ನವರಾತ್ರಿ ಆಚರಣೆಗಳ ನಂತರ ನದಿಯಲ್ಲಿ ಪ್ಲಾಸ್ಟಿಕ್ ಚೀಲ, ಪೂಜಾ ಸಾಮಗ್ರಿಗಳು ಮತ್ತು ಹೂವಿನ ಹಾರಗಳು ಇರುವುದನ್ನು ಬಿಟ್ಟು ತಬಾಹಿ ಗಮನಿಸಿದ್ದರು. ಹೀಗಾಗಿ ಬಿಟ್ಟು ತಬಾಹಿ ಮತ್ತೆ ನದಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಅವರು ಕಸವನ್ನು ತೆಗೆಯುತ್ತಿದ್ದಂತೆ ಮೇಲಿದ್ದ ವ್ಯಕ್ತಿಯೊಬ್ಬ ನದಿಗೆ ಮತ್ತು ಬಿಟ್ಟು ಅವರ ಬಳಿಗೆ ಕಸದ ಚೀಲವನ್ನು ಎಸೆದಿದ್ದಾನೆ.
ಅಪರಿಚಿತರ ಮೇಲೆಯೂ ಭಾರತೀಯರ ನಂಬಿಕೆ ಕಂಡು ಭಾವುಕನಾದೆ ಎಂದ ಲೇಖಕ ಸದಾನಂದ ಧೂಮೆ
ಪದೇ ಪದೆ ಕಸ ಎಸೆಯುವ ಜನರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಚೌಧರಿ, "ತಿಂಗಳುಗಟ್ಟಲೆ ಈ ನದಿಯನ್ನು ಸ್ವಚ್ಛಗೊಳಿಸಲು ಪ್ರಯತ್ನ ಪಡುತ್ತೇನೆ. ಆದರೂ ಕೆಲವರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನದಿಗೆ ಕಸ ಎಸೆಯುವುದನ್ನು ಮುಂದುವರಿಸಿದ್ದಾರೆ" ಎಂದು ಹೇಳಿದ್ದಾರೆ. ʼʼನದಿಯನ್ನು ಸ್ವಚ್ಛವಾಗಿಡುವುದು ಕೇವಲ ನನ್ನೊಬ್ಬನ ಜವಾಬ್ದಾರಿಯಲ್ಲ ಎಲ್ಲರೂ ಇದನ್ನು ಪಾಲಿಸಬೇಕುʼʼ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೊ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಬಳಕೆದಾರರೊಬ್ಬರು ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ಜನರಲ್ಲಿ ಕನಿಷ್ಠ ನಾಗರಿಕ ಪ್ರಜ್ಞೆಯೂ ಇಲ್ಲ. ಸಮಾಜಕ್ಕಾಗಿ ಶ್ರಮಿಸುತ್ತಿರುವವರ ಬಗ್ಗೆ ಅನುಕಂಪವು ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ