Viral News: ಅಪರಿಚಿತರ ಮೇಲೆಯೂ ಭಾರತೀಯರ ನಂಬಿಕೆ ಕಂಡು ಭಾವುಕನಾದೆ ಎಂದ ಅಮೆರಿಕದ ಲೇಖಕ ಸದಾನಂದ ಧೂಮೆ
ಭಾರತೀಯರೆಂದರೆ ನಂಬಿಕೆಗೆ ಬಹುದೊಡ್ಡ ಉದಾಹರಣೆ. ಅವರು ಅಪರಿಚಿತರನ್ನು ಕೂಡ ತಮ್ಮಂತೆಯೇ ಎಂದು ಭಾವಿಸುತ್ತಾರೆ. ವಿಮಾನ ನಿಲ್ದಾಣದಲ್ಲಿ ನಡೆದ ಈ ಒಂದು ಘಟನೆ ನನ್ನನ್ನು ಭಾವುಕನನ್ನಾಗಿಸಿತ್ತು ಎಂದು ಭಾರತೀಯ-ಅಮೆರಿಕನ್ ಬರಹಗಾರ, ಅಂಕಣಕಾರ ಮತ್ತು ಪತ್ರಕರ್ತ ಸದಾನಂದ ಧೂಮೆ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಭಾರತದ ಅತ್ಯಂತ ಹೃದಯಸ್ಪರ್ಶಿ ವಿಷಯವೆಂದರೆ ಇಲ್ಲಿನ ಜನರು ಸಣ್ಣ ಮಕ್ಕಳ ವಿಷಯದಲ್ಲಿ ಎಷ್ಟು ಸಹಜವಾಗಿರುತ್ತಾರೆ ಎಂದರೆ ಅಪರಿಚಿತರು ಕೂಡ ತಮ್ಮಂತೆಯೇ ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಅವರಲ್ಲಿದೆ ಎಂದು ಭಾರತೀಯ-ಅಮೆರಿಕನ್ ಬರಹಗಾರ (Indian-American writer), ಅಂಕಣಕಾರ ಮತ್ತು ಪತ್ರಕರ್ತ ಸದಾನಂದ ಧೂಮೆ (author Sadanand Dhume) ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ವಿಮಾನ ನಿಲ್ದಾಣದಲ್ಲಿ (Bengaluru airport) ನಡೆದ ಈ ಒಂದು ಸುಂದರ ಕ್ಷಣ ನನ್ನ ಮನಸ್ಸು ಮುಟ್ಟಿತು ಎಂದು ಹೇಳಿದರು.
ಭಾರತಕ್ಕೆ ಆಗಮಿಸಿದ ವೇಳೆ ಇಲ್ಲಿ ಆದ ಒಂದು ಸುಂದರ ಅನುಭವವಿದು. ವಿಮಾನ ನಿಲ್ದಾಣದಲ್ಲಿ ಎಸ್ಕಲೇಟರ್ನಲ್ಲಿ ಹೋಗುವಾಗ ತಾಯಿಯೊಬ್ಬರು ನನ್ನ ಬಳಿ ತಮ್ಮ ಮಗಳ ಕೈಯನ್ನು ಹಿಡಿದುಕೊಳ್ಳುವಂತೆ ಸಹಜವಾಗಿ ಕೇಳಿಕೊಂಡರು. ಅಪರಿಚಿತರ ಮೇಲಿರುವ ಅವರ ನಂಬಿಕೆಯನ್ನು ಕಂಡು ನಾನು ಭಾವುಕನಾದೆ ಎಂದು ತಿಳಿಸಿದರು.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದ ತಮ್ಮ ಹೃದಯಸ್ಪರ್ಶಿ ವಿಷಯವನ್ನು ಹಂಚಿಕೊಂಡಿರುವ ಅವರು, ವಿಮಾನದಿಂದ ಇಳಿದ ಅನಂತರ ಒಂದು ಸಣ್ಣ ಎಸ್ಕಲೇಟರ್ ಬಳಿ ಕುಟುಂಬವೊಂದು ಬಂದಿತ್ತು. ಅದರಲ್ಲಿ ವ್ಯಕ್ತಿಯೊಬ್ಬ ಬ್ಯಾಗ್ ಹಿಡಿದುಕೊಂಡು ಸ್ವಲ್ಪ ಮುಂದೆ ನಡೆಯುತ್ತಿದ್ದರೆ ಮಹಿಳೆಯೊಬ್ಬರು ತನ್ನ ಒಂದು ಮಗುವನ್ನು ಎತ್ತಿಕೊಂಡಿದ್ದರು. ಸುಮಾರು ಮೂರು-ನಾಲ್ಕು ವರ್ಷದ ಇನ್ನೊಂದು ಮಗುವಿನ ಕೈಯನ್ನು ಹಿಡಿದುಕೊಂಡಿದ್ದರು. ಮಹಿಳೆ ತನ್ನ ಮಗುವಿಗೆ ಎಸ್ಕಲೇಟರ್ನಲ್ಲಿ ಮುಂದೆ ಹೋಗುವಂತೆ ಸನ್ನೆ ಮಾಡಿದರು. ಆದರೆ ಮಗು ಹೋಗಲು ಕೇಳುತ್ತಿರಲಿಲ್ಲ.
One of the most heartwarming things about India is the comfort people have around small children, and their assumption that this will be shared by strangers. After I deplane from an Etihad flight in Bangalore, I reach the short escalator that leads to immigration at the same time as a young family. The husband is carrying a bag and walks a few steps ahead. The wife is carrying a toddler and holding the hand of a little girl in pink, who must be three or fours years old. I motion to the lady to pass ahead of me. She hesitates for a moment, then says, matter of factly, “you hold her hand,” as she slips her daughter’s little palm in mine. She’s kind of asking me, but she’s also kind of just telling me. She assumes (rightly) that this is the natural order. It’s a short escalator ride—less than a minute—and once we’ve cleared it the girl returns to her mother and the family returns to its formation. I thank them silently for a quietly beautiful moment.
— Sadanand Dhume (@dhume) October 13, 2026
ಆಗ ನಾನು ಅಲ್ಲಿಗೆ ಬಂದೆ. ಮಹಿಳೆಗೆ ನನ್ನ ಮುಂದೆ ಹೋಗುವಂತೆ ಹೇಳಿದೆ. ಆದರೆ ಅವರು ಒಂದು ಕ್ಷಣ ಹಿಂಜರಿದರು. ಬಳಿಕ ನೀವು ಮಗಳ ಕೈ ಹಿಡಿದುಕೊಳ್ಳಿ ಎಂದು ಹೇಳಿ ತಮ್ಮ ಮಗಳ ಪುಟ್ಟ ಕೈಯನ್ನು ನನ್ನ ಕೈಯಲ್ಲಿ ಇರಿಸಿದರು. ಅವರು ನನ್ನನ್ನು ಕೇಳುತ್ತಿದ್ದರು. ಆದರೆ ಅದೇ ಸಮಯದಲ್ಲಿ ಒಂದು ರೀತಿಯಲ್ಲಿ ನನಗೆ ಸೂಚನೆಯನ್ನೂ ನೀಡುತ್ತಿದ್ದರು. ಅಪರಿಚಿತರಾದ ನಮ್ಮ ನಡುವೆ ಹೀಗೆ ಮಾಡುವುದು ಸಹಜವಾದ ವಿಷಯ ಎಂದು ಅವರು ಭಾವಿಸಿದ್ದರು. ಅದೊಂದು ಒಂದು ಸುಂದರ ಹಾಗೂ ಶಾಂತ ಕ್ಷಣವಾಗಿತ್ತು ಎಂದು ಧೂಮೆ ಅವರು ಹೇಳಿದ್ದಾರೆ.
ಆ ಪ್ರಯಾಣ ಒಂದು ನಿಮಿಷಕ್ಕಿಂತ ಕಡಿಮೆ ಸಮಯದ್ದಾಗಿತ್ತು. ಇನ್ನೊಂದು ಬದಿ ತಲುಪಿದಾಗ ಆ ಪುಟ್ಟ ಮಗು ತನ್ನ ತಾಯಿಯ ಬಳಿ ಮರಳಿತು. ಆ ಕುಟುಂಬ ತನ್ನ ದಾರಿಯಲ್ಲಿ ಮುಂದೆ ಸಾಗಿತು. ಆದರೆ ಆ ಘಟನೆ ನನ್ನ ಮನಸ್ಸಿನಲ್ಲಿ ಉಳಿದುಹೋಯಿತು ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸದಾನಂದ ಧೂಮೆ ಅವರು ಹಂಚಿಕೊಂಡಿರುವ ಈ ಮಾಹಿತಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಅನೇಕರು ತಮಗಾದ ವಿಶೇಷ ಅನುಭವಗಳನ್ನು ಹಂಚಿಕೊಂಡರು.
ಒಬ್ಬ ಬಳಕೆದಾರರು, ಕೆನಡಾದಿಂದ ಭಾರತಕ್ಕೆ ಹಿಂತಿರುಗುವ ವಿಮಾನದಲ್ಲಿ ನನ್ನ 18 ತಿಂಗಳ ಮಗಳು ಅಳುತ್ತಾ ಹಠ ಮಾಡುತ್ತಿದ್ದಾಗ ಹೈದರಾಬಾದ್ನ ಮಹಿಳೆಯೊಬ್ಬರು ನನಗೆ ಸಹಾಯ ಮಾಡಲು ಮುಂದೆ ಬಂದರು. ಆಯಾಸಗೊಂಡಿದ್ದ ಒಬ್ಬ ಯುವ ತಾಯಿಗೆ ಆ ಕ್ಷಣದಲ್ಲಿ ಅದು ದೊಡ್ಡ ಬೆಂಬಲವಾಗಿತ್ತು. ಆ ಘಟನೆ ನಡೆದು ಈಗ 8 ವರ್ಷಗಳಾಗಿವೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬರು ಹೀಗೆ ಬರೆದಿದ್ದಾರೆ.. ಇತ್ತೀಚೆಗೆ ಮಾಲ್ ಒಂದರಲ್ಲಿ ನನಗೂ ಇದೇ ರೀತಿಯ ಅನುಭವವಾಯಿತು. ಕೆಲವು ವಿಷಯಗಳಲ್ಲಿ ಭಾರತದಲ್ಲಿ ಪರಸ್ಪರ ನಂಬಿಕೆ ಕಡಿಮೆ ಇರಬಹುದು. ಆದರೆ ಇಂತಹ ಕ್ಷಣಗಳು ಪರಸ್ಪರ ನಂಬಿಕೆಯುಳ್ಳ ಸಮಾಜದ ಅಡಿಪಾಯ ಇನ್ನೂ ಜೀವಂತವಾಗಿದೆ ಎಂಬುದನ್ನು ನೆನಪಿಸುತ್ತವೆ ಎಂದು ತಿಳಿಸಿದ್ದಾರೆ. ಹೀಗೆ ಅನೇಕರು ಭಾರತೀಯರ ನಂಬಿಕೆ, ಅಪರಿಚಿತರಿಗೂ ಸಹಾಯ ಮಾಡುವ ನಿಸ್ವಾರ್ಥ ಭಾವದ ಬಗ್ಗೆ ನೆನಪಿಸಿಕೊಂಡಿದ್ದಾರೆ.