ಮನೆಗೆ ನುಗ್ಗಲು ಯತ್ನಿಸಿದ ಹೆಬ್ಬಾವಿನ ಬೃಹತ್ ಗಾತ್ರ ನೋಡಿಯೇ ಬೆಚ್ಚಿಬಿದ್ದ ಸ್ಥಳೀಯರು: ವಿಡಿಯೊ ಇಲ್ಲಿದೆ
Viral Video: ಜನ ವಸತಿ ಪ್ರದೇಶದಲ್ಲಿ ಹೆಬ್ಬಾವೊಂದು ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗ್ರಾಮಸ್ಥರು ಮತ್ತು ದಾರಿಹೋಕರು ಸುತ್ತಲೂ ಜಮಾಯಿಸಿದ್ದರಿಂದ ಹೆಬ್ಬಾವು ಮುಖ್ಯ ರಸ್ತೆಯಲ್ಲಿ ಸಾಗಿ ಜನವಸತಿ ಪ್ರದೇಶದ ಒಳಗೆ ನುಗ್ಗಲು ಯತ್ನಿಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಬ್ಬಾವಿನ ಗಾತ್ರ ನೋಡಿಯೇ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ ಬೃಹತ್ ಗಾತ್ರದ ಹೆಬ್ಬಾವು -
ಲಖನೌ, ಆ. 15: ಬೃಹತ್ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಗ್ರಾಮಸ್ಥರು ಮತ್ತು ದಾರಿಹೋಕರು ಸ್ಥಳದ ಸುತ್ತಲೂ ಜಮಾಯಿಸಿ ಹೆಬ್ಬಾವು ಮುಖ್ಯ ರಸ್ತೆಯಲ್ಲಿ ಸಾಗಿ ಜನವಸತಿ ಪ್ರದೇಶದ ಒಳಗೆ ನುಗ್ಗಲು ಯತ್ನಿಸಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ಹೆಬ್ಬಾವಿನ ಗಾತ್ರ ನೋಡಿಯೇ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ಮೀರತ್‌ನ ಹಸನ್‌ಪುರ್ ಕದಿಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ತಿರದ ಗದ್ದೆಗಳಿಂದ ಹೊರಬಂದ ಹೆಬ್ಬಾವು ಮನೆಯೊಂದಕ್ಕೆ ನುಗ್ಗಲು ಯತ್ನಿಸಿದೆ. ಸುತ್ತ ಜನ ಜಮಾಯಿಸಿದ್ದರೂ ಹಾವು ಸರಸರನೆ ಮುಂದಕ್ಕೆ ಸಾಗಿದ್ದು ಇದರ ಗಾತ್ರ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ವಿಡಿಯೊ ನೋಡಿ:
🚨 VIRAL: A massive python was spotted crawling through the streets of Meerut, Uttar Pradesh, leaving locals shocked. The snake reached the main entrance of a house before being safely rescued by the Forest Department team. pic.twitter.com/PRUT5zAFeK
— indiainlast24hr (@indiain24hr) August 15, 2026
ಹೆಬ್ಬಾವು ಮೊದಲು ಮನೆಯೊಂದರ ಪ್ರವೇಶದ್ವಾರವನ್ನು ತಲುಪಲು ಪ್ರಯತ್ನಿಸುತ್ತಿರುವಂತೆ ಒಬ್ಬ ವ್ಯಕ್ತಿ ಧೈರ್ಯದಿಂದ ಹೆಬ್ಬಾವಿನ ಬಾಲವನ್ನು ಹಿಡಿದು ತಡೆದಿದ್ದಾರೆ. ಈ ವಿಚಾರ ಹರಡುತ್ತಿದ್ದಂತೆ ಹಲವು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಕೆಲವರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಇದರಿಂದಾಗಿ ಕೆಲಕಾಲ ರಸ್ತೆಯಲ್ಲಿ ಜನದಟ್ಟಣೆ ಉಂಟಾಗಿತ್ತು.
8 ಅಡಿ 10 ಇಂಚು ಉದ್ದ ಕೂದಲು ಬೆಳೆಸಿ ದಾಖಲೆ ಬರೆದ ಉತ್ತರಾಖಂಡದ ಮಹಿಳೆ
ಕೊನೆಗೆ ಗ್ರಾಮಸ್ಥರು ಸಹಾಯಕ್ಕಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರು. ಅಧಿಕಾರಿಗಳು ಶೀಘ್ರದಲ್ಲೇ ಗ್ರಾಮಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ತಂಡವು ಸ್ಥಳೀಯ ನಿವಾಸಿಗಳ ಸಹಾಯದಿಂದ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದಿದೆ. ಹಾವನ್ನು ಜನವಸತಿ ಪ್ರದೇಶದಿಂದ ಕೊಂಡೊಯ್ದು ಹಸ್ತಿನಾಪುರ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.