"ಓಲ್ಡ್ ಈಸ್ ಗೋಲ್ಡ್" ತಾತನಿಂದ ಮೊಮ್ಮಗನಿಗೆ ಸಿಕ್ತು 35 ವರ್ಷ ಹಳೆಯ ಟೈಟಾನ್ ವಾಚ್
Viral News: ಯುವಕನೊಬ್ಬರು ತಮ್ಮ 27ನೇ ಹುಟ್ಟು ಹಬ್ಬಕ್ಕೆ ತಾತನಿಂದ 35 ವರ್ಷ ಹಳೆಯ ಟೈಟಾನ್ ವಿಂಟೇಜ್ ವಾಚ್ ಅನ್ನು ಗಿಫ್ಟ್ ಆಗಿ ಪಡೆದಿದ್ದಾರೆ. ಅನೇಕರು ಈ ವಾಚ್ ನ ವಿನ್ಯಾಸ ಮತ್ತು ಅದರ ಗುಣಮಟ್ಟದ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ಸದ್ಯ ಈ ವಾಚ್ ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ತಾತನಿಂದ ಮೊಮ್ಮಗನಿಗೆ ಸಿಕ್ಕ 35 ವರ್ಷ ಹಳೆಯ ಟೈಟಾನ್ ಗಿಫ್ಟ್ -
ಹೊಸ ದೆಹಲಿ,ಜೂ.10: ಕೆಲವೊಂದು ಉಡುಗೊರೆಗಳು ಕೇವಲ ವಸ್ತುವಾಗಿ ಉಳಿಯುವುದಿಲ್ಲ. ಬದಲಾಗಿ ಅದೊಂದು ಭಾವನಾತ್ಮಕ ನೆನಪನ್ನು ಹೊತ್ತು ತರುವಂತೆ ಮಾಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಯುವಕನೊಬ್ಬರು ತಮ್ಮ 27ನೇ ಹುಟ್ಟು ಹಬ್ಬಕ್ಕೆ ತಾತನಿಂದ 35 ವರ್ಷ ಹಳೆಯ ಟೈಟಾನ್ ವಿಂಟೇಜ್ ವಾಚ್ ಅನ್ನು ಗಿಫ್ಟ್ ಆಗಿ ಪಡೆದಿದ್ದಾರೆ. ಅನೇಕರು ಈ ವಾಚ್ ನ ವಿನ್ಯಾಸ ಮತ್ತು ಅದರ ಗುಣಮಟ್ಟದ ಬಗ್ಗೆ ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ಸದ್ಯ ಈ ವಾಚ್ ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ (Viral News) ಭಾರೀ ಸದ್ದು ಮಾಡುತ್ತಿದೆ.
ರಾಹುಲ್ ಮಾಥುರ್ ಎಂಬುವವರು ಈ ಭಾವನಾತ್ಮಕ ವಿಚಾರ ವನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರ ತಾತನು 1990 ರಲ್ಲಿ ಮುಂಬೈನಲ್ಲಿ ಟೈಟಾನ್ ಶೋರೂಮ್ ಆರಂಭವಾದ ದಿನವೇ ‘ಟೈಟಾನ್ ಕ್ವಾರ್ಟ್ಸ್ ಕ್ಲಾಸಿಕ್ ವಾಚ್" ಅನ್ನು ಖರೀದಿ ಮಾಡಿದ್ದರು. ಕಳೆದ 35 ವರ್ಷದಿಂದ ಇದನ್ನು ಬಹಳಷ್ಟು ಜಾಗರೂಕತೆಯಿಂದ ರಕ್ಷಣೆ ಮಾಡಿ ಕೊಂಡು ಉಳಿಸಿಕೊಂಡಿದ್ದರು.ಇದೀಗ ಇದೇ ವಾಚ್ ಅನ್ನು ಮೊಮ್ಮಗನಿಗೆ ಗಿಫ್ಟ್ ಆಗಿ ನೀಡಿದ್ದಾರೆ.
My grandfather bought the original Titan Quartz Classique 289-06 on the very first day Titan opened its Mumbai store in 1990.
— Rahul Mathur (@Rahul_J_Mathur) June 8, 2026
He kept the watch in mint condition for 35 years until he gifted it to me on my 27th birthday pic.twitter.com/wbf9abw5bG
ಇದೀಗ ಮೊಮ್ಮಗ ಈ ಪೋಸ್ಟ್ ಜೊತೆಗೆ, ಫೋಟೋದ ಚಿತ್ರವನ್ನು ಹಂಚಿಕೊಂಡಿದ್ದಾರೆ. ದೃಶ್ಯವು ಅವರ ಮಣಿಕಟ್ಟಿನ ಮೇಲೆ ಧರಿಸಿರುವ ಕ್ಲಾಸಿಕ್ ಟೈಟಾನ್ ಕ್ವಾರ್ಟ್ಜ್ ಕ್ಲಾಸಿಕ್ ಅನ್ನು ತೋರಿಸಿದೆ. ಇದು ಸರಳ ವಿನ್ಯಾಸ, ಸ್ಲಿಮ್ ಕೈಗಳು ಮತ್ತು ಕಪ್ಪು ಬೆಲ್ಟ್ ಹೊಂದಿರುವ ಸ್ವಚ್ಛ, ಗೋಲ್ಡ್ ಬಣ್ಣದವಡಯಲ್ ಅನ್ನು ಒಳಗೊಂಡಿತ್ತು.
Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ತಾತ ತಾವು ಬಳಸುತ್ತಿದ್ದ ವಾಚ್ ಅನ್ನೇ ಮೊಮ್ಮಗನಿಗೆ ಗಿಫ್ಟ್ ಆಗಿ ನೀಡಿರುವುದಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಂಜಿನಿಯರಿಂಗ್ ಹಾಗೂ ಕರಕುಶಲತೆಗೆ ಇದೊಂದು ಅತ್ಯುತ್ತಮ ಉದಾಹರಣೆ ಎಂದು ರಾಹುಲ್ ಹೆಮ್ಮೆಯಿಂದ ಬರೆದು ಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಅದು ತುಂಬಾ ಸುಂದರವಾದ ವಾಚ್! ಅಭಿನಂದನೆಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇತ್ತೀಚಿನ ಆಧುನಿಕ ವಿನ್ಯಾಸಗಳಿಗಿಂತ ಈ ಹಳೆಯ ವಿನ್ಯಾಸವೇ ಅದ್ಭುತವಾಗಿದೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ