ಯುವಕನ ಬಳಿ ಲಿಫ್ಟ್ ಕೇಳಿ ಮೊಬೈಲ್ ದೋಚಲು ಯತ್ನಿಸಿದ ಕಳ್ಳಿ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಮಾಡಿದ್ದೇನು? ವೈರಲಾಯ್ತು ವಿಡಿಯೊ
Viral News: ಸಹಾಯ ಕೇಳುವ ನೆಪದಲ್ಲೂ ಮೋಸ ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಲಿಫ್ಟ್ ಕೇಳುವ ನೆಪದಲ್ಲಿ ಯುವತಿಯೊಬ್ಬಳು ಹೈಡ್ರಾಮ ಮಾಡಿದ್ದಾಳೆ. ಸವಾರೊಬ್ಬನ ಬಳಿ ಲಿಫ್ಟ್ ಕೇಳಿ ಬಳಿಕ ಆತನ ಮೊಬೈಲ್ ಅನ್ನೇ ಕದಿಯಲು ಮುಂದಾಗಿದ್ದಾಳೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ಲಿಫ್ಟ್ ಕೇಳಿ ಕಳ್ಳತನಕ್ಕೆ ಮುಂದಾದ ಯುವತಿ -
ಜೈಪುರ, ಜೂ. 5: ಸ್ವಾರ್ಥವೇ ತುಂಬಿದ ಈ ಕಾಲದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡಲು ಕೂಡ ಹಿಂದೆ-ಮುಂದೆ ಯೋಚಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಸಹಾಯ ಕೇಳುವ ನೆಪದಲ್ಲೂ ಮೋಸ ಎಸಗುವ ಅನೇಕರಿದ್ದಾರೆ. ಇಂತಹ ಹಲವು ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಲಿಫ್ಟ್ ಕೇಳುವ ನೆಪದಲ್ಲಿ ಯುವತಿಯೊಬ್ಬಳು ಹೈಡ್ರಾಮ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸವಾರೊಬ್ಬನ ಬಳಿ ಲಿಫ್ಟ್ ಕೇಳಿ ಬಳಿಕ ಆತನ ಮೊಬೈಲ್ ಅನ್ನೇ ಕದಿಯಲು ಮುಂದಾಗಿದ್ದಾಳೆ. ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೊಬ್ಬ ರಾಜಸ್ಥಾನದ ಜೈಪುರದಲ್ಲಿ ಯುವತಿಯೊಬ್ಬಳು ಲಿಫ್ಟ್ ಕೇಳಿದ ತಕ್ಷಣ ಸಹಾಯ ಹಸ್ತ ಚಾಚಲು ಮುಂದಾಗಿದ್ದ. ಆದರೆ ಆಕೆ ಆತನ ಮೊಬೈಲ್ ಫೋನ್ ಕಳವು ಮಾಡಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾಳೆ. ಆತನ ಸೌಜನ್ಯದ ಗುಣವನ್ನೇ ಆಕೆ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾಳೆ.
ವಿಡಿಯೊ ನೋಡಿ:
Jaipur, Rajasthan
— ︎ ︎venom (@venom1s) June 3, 2026
A girl asked for a lift from a guy. Then she stole his phone.
When he caught her, she started abusing him and accusing him of harassment.
Just a few years back, many simps would have beaten him and supported the girl. pic.twitter.com/nj7Me9xgSV
ಆಕೆ ತನ್ನ ಮೊಬೈಲ್ ಫೋನ್ ಕಸಿದು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಂತೆ ಆತ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ. ವೈರಲ್ ಕ್ಲಿಪ್‌ನಲ್ಲಿ, ಯುವತಿ ಕ್ಯಾಮರಾದಿಂದ ಮುಖವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾಗ ಮತ್ತು ತನ್ನನ್ನು ತಾನು ಬಿಡಿಸಿಕೊಳ್ಳಲು ಪದೇ ಪದೆ ಪ್ರಯತ್ನಿಸುತ್ತಿದ್ದಾಗ ಆತ ಆಕೆಯ ಕೈಯನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ.
ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ವಿಡಿಯೊ ವೈರಲ್
ಜೈಪುರದ ಜನನಿಬಿಡ ರಸ್ತೆಯಲ್ಲೇ ಈ ಘಟನೆ ನಡೆದಿದೆ. ಆಕೆಯ ಸ್ಥಿತಿ ಕಂಡು ಸಹಾಯ ಮಾಡಲು ಒಪ್ಪಿದ ಸವಾರನಿಗೆ ಆಕೆ ಮೋಸ ಮಾಡಲು ಮುಂದಾಗಿದ್ದಾಳೆ. ಯುವತಿ ಆತನ ಬೈಕ್ ಹತ್ತಿದ ಕೆಲವೇ ಕ್ಷಣಗಳಲ್ಲಿ ಆತನ ಮೊಬೈಲ್ ಫೋನ್ ಕದ್ದು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ತಕ್ಷಣವೇ ತಿಳಿದ ಬೈಕ್ ಸವಾರ ಆಕೆಯನ್ನು ಬೆನ್ನಟ್ಟಿದ್ದಾನೆ.
ಘಟನೆ ನಡೆಯುತ್ತಿದ್ದಂತೆ ಕೆಲವು ದಾರಿಹೋಕರು ಇವರ ಸುತ್ತಲೂ ಜಮಾಯಿಸಿ ವಿಡಿಯೊ ಮಾಡಿದ್ದಾರೆ. ಅಷ್ಟಕ್ಕೆ ತನ್ನ ನೀಚ ಬುದ್ಧಿ ಬಿಡದ ಯುವತಿ ಬೈಕ್ ಸವಾರ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, “ಇದಕ್ಕಾಗಿಯೇ ಅನೇಕರು ಈಗ ಅಪರಿಚಿತರಿಗೆ ಸಹಾಯ ಮಾಡುವ ಮೊದಲು ಎರಡು ಬಾರಿ ಯೋಚಿಸುತ್ತಾರೆ" ಎಂದು ಹೇಳಿದ್ದಾರೆ.