ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಸಿವಿದ್ದರೂ ಉಪವಾಸವಿರುವ 58 ಮಕ್ಕಳ ತಂದೆ: ಜಗತ್ತನ್ನು ಬೆಚ್ಚಿಬೀಳಿಸಿದ ಅಫ್ಘಾನಿಸ್ತಾನ ವ್ಯಕ್ತಿಯ ಬಡತನದ ಕಥೆ

Viral News: 58 ಮಕ್ಕಳನ್ನು ಹೊಂದಿರುವ ಅಫ್ಘಾನಿಸ್ತಾನದ ವ್ಯಕ್ತಿಯೊಬ್ಬ ತೀವ್ರ ಬಡತನದಲ್ಲಿದ್ದು ಕುಟುಂಬವನ್ನು ಪೋಷಿಸಲು ಪರದಾಡುತ್ತಿದ್ದಾನೆ. 4 ಜನ ಪತ್ನಿಯರಿಂದ ಒಟ್ಟು 58 ಮಕ್ಕಳನ್ನು ಹೊಂದಿರುವ ಮುಹಮ್ಮದ್ ಸಾದಿಕ್‌ನ ಕಣ್ಣೀರಿನ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

58 ಮಕ್ಕಳನ್ನು ಸಾಕಲು ಆಗದೇ ಕಣ್ಣೀರಿಟ್ಟ ಅಫ್ಘಾನಿಸ್ತಾನದ ವ್ಯಕ್ತಿ

58 ಮಕ್ಕಳ ತಂದೆ ಮುಹಮ್ಮದ್ ಸಾದಿಕ್‌ (ಸಂಗ್ರಹ ಚಿತ್ರ) -

Profile
Pushpa Kumari Oct 21, 2026 8:05 PM

ಕಾಬೂಲ್‌, ಅ. 21: ಬಡತನ ಎನ್ನುವುದು ನಮ್ಮ ಬದುಕನ್ನೇ ನುಂಗಿ ಬಿಡುತ್ತದೆ. ಅದರಲ್ಲೂ ಮನೆಯ ಯಜಮಾನ ಒಬ್ಬನೇ ದುಡಿದು ಕುಟುಂಬ ನಡೆಸುವುದು ಬಹಳಷ್ಟು ಕಷ್ಟ. ಇದೀಗ 58 ಮಕ್ಕಳನ್ನು ಹೊಂದಿರುವ ಅಫ್ಘಾನಿಸ್ತಾನದ ವ್ಯಕ್ತಿಯೊಬ್ಬ ತೀವ್ರ ಬಡತನದಲ್ಲಿದ್ದು, ಕುಟುಂಬವನ್ನು ಪೋಷಿಸಲು ಪರದಾಡುತ್ತಿದ್ದಾನೆ. 4 ಜನ ಪತ್ನಿಯರಿಂದ ಒಟ್ಟು 58 ಮಕ್ಕಳನ್ನು ಹೊಂದಿರುವ ಮುಹಮ್ಮದ್ ಸಾದಿಕ್‌ನ ಕಣ್ಣೀರಿನ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ, ಜನಸಂಖ್ಯಾ ನಿಯಂತ್ರಣ ಕುರಿತು ಆಗಾಗ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ಕೆಲವು ದೇಶದಲ್ಲಿ ಇದಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ಅಫ್ಘಾನ್‌ ನಿವಾಸಿ ಮುಹಮ್ಮದ್ ಸಾದಿಕ್ ಅಲ್ಪ ಆದಾಯವನ್ನು ಗಳಿಸುತ್ತಿದ್ದು ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾನೆ. ಈತನ ಕುಟುಂಬವು ತೀವ್ರ ಬಡತನದಲ್ಲಿದ್ದು, ಮಕ್ಕಳು ಕೆಲವೊಮ್ಮೆ ಹಸಿವಿನಿಂದ ಬಳಲುತ್ತಾರೆ. ಧರಿಸಲು ಚಪ್ಪಲಿಯೂ ಇಲ್ಲದೆ ಬರಿಗಾಲಿನಲ್ಲಿ ನಡೆಯುತ್ತಾರೆ. ಇವರ ಕಥೆಯು ಅಫ್ಘಾನಿಸ್ತಾನದಲ್ಲಿರುವ ಬಡತನ ಮತ್ತು ಬಾಲ್ಯ ವಿವಾಹದಂತಹ ಸಮಸ್ಯೆಗಳನ್ನು ಎತ್ತಿ ತೋರಿಸಿದೆ.

ವಿಡಿಯೊ ನೋಡಿ:



ಒಟ್ಟು 58 ಮಕ್ಕಳನ್ನು ಹೊಂದಿದ್ದು, ನಾಲ್ವರು ಪತ್ನಿಯರೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿತ್ತು ಎಂದು ಸಾದಿಕ್ ತಿಳಿಸಿದ್ದಾನೆ. ಸರಿಯಾದ ಆರೈಕೆ ಮತ್ತು ಅನುಭವದ ಕೊರತೆಯಿಂದಾಗಿ ಕೆಲ ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳಿಗೆ ಹೇಗೆ ಆರೈಕೆ ಮಾಡಬೇಕು, ಅವರಿಗೆ ಎದೆ ಹಾಲುಣಿಸುವುದು ಹೇಗೆ ಅಥವಾ ಅವರನ್ನು ಹೇಗೆ ನೋಡಿ ಕೊಳ್ಳಬೇಕೆಂದು ತಾಯಂದಿರಿಗೆ ತಿಳಿದಿರಲಿಲ್ಲ. ಕೆಲವು ಮಕ್ಕಳು ಕ್ಷಯರೋಗ, ದಡಾರದಿಂದ ಮೃತಪಟ್ಟಿದ್ದಾಗಿ ವಿವರಿಸಿದ್ದಾನೆ.

ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಸಾದಿಕ್‌ ವಾಹನ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅತ್ಯಲ್ಪ ಆದಾಯ ಗಳಿಸುತ್ತಿದ್ದಾನೆ. ಈ ಹಣದಿಂದ ಇಷ್ಟು ದೊಡ್ಡ ಕುಟುಂಬವನ್ನು ನಿರ್ವಹಿಸಲು ಆತನಿಗೆ ಸಾಧ್ಯವಾಗುತ್ತಿಲ್ಲ. ಮಕ್ಕಳ ಮೂಲಭೂತ ಅಗತ್ಯಗಳನ್ನು ಪೂರೈಸುವ ವಿಷಯದಲ್ಲಿ, ಒಬ್ಬ ತಂದೆಯಾಗಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ತನಗೆ ಸಾಧ್ಯವಾಗಲಿಲ್ಲ ಎಂಬುದನ್ನೂ ಆತ ಒಪ್ಪಿಕೊಂಡಿದ್ದಾನೆ.

ಇವರು ವಾಸಿಸುವ ಮಣ್ಣಿನ ಮನೆಗಳಿಗೆ ಸರಿಯಾದ ಬಾಗಿಲು ಅಥವಾ ಕಿಟಕಿಗಳಿಲ್ಲ. ಹೀಗಾಗಿ ಬಟ್ಟೆಯ ಪರದೆಗಳನ್ನೇ ಆಶ್ರಯಿಸಲಾಗಿದೆ. ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ ಎಲ್ಲ ಮಕ್ಕಳ ಹೆಸರು ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾದಿಕ್ ಒಪ್ಪಿಕೊಂಡಿದ್ದಾನೆ. ಆರ್ಥಿಕ ಕಷ್ಟದ ಬಗ್ಗೆ ಮೊದಲೇ ತಿಳಿದಿದ್ದರೆ ಮೊದಲೇ ಯೋಚಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾನೆ. ಆತನ ಈ ಹೇಳಿಕೆಯು ಬಾಲ್ಯ ವಿವಾಹದ ಪರಿಣಾಮ ಹಾಗೂ ಬಡತನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.