ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ನೆರವಿಗೆ ಬಂದ ಡೆಲಿವರಿ ಬಾಯ್: ಮಾನವೀಯತೆ ಜೀವಂತವಾಗಿದೆ ಎಂದ ನೆಟ್ಟಿಗರು
Viral News: ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ಕಂಡು ಆಕೆ ದಿಗ್ಭ್ರಮೆಗೊಂಡು ಸ್ತಬ್ಧರಾದಾಗ ಡೆಲಿವರಿ ಬಾಯ್ ತಕ್ಷಣವೇ ನೆರವಿಗೆ ಆಗಮಿಸಿದರು. ಯಾವುದೇ ಹಿಂಜರಿಕೆಯಿಲ್ಲದೆ ಸಹಾಯಕ್ಕೆ ಧಾವಿಸಿ ಬಂದು ಅಪಾಯ ತಪ್ಪಿಸಿದ್ದಾರೆ. ಈ ಘಟನೆಯ ನಂತರ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಡೆಲಿವರಿ ಏಜೆಂಟ್ನನ್ನು ಶ್ಲಾಘಿಸಿದ್ದಾರೆ.
ಮನೆಯಲ್ಲಿ ಬೆಂಕಿ ಕಾಣಿಸಿದಾಗ ಅನಾಹುತ ತಪ್ಪಿಸಿದ ಡೆಲಿವರಿ ಬಾಯ್ -
ನವದೆಹಲಿ, ಅ. 21: ಇತ್ತೀಚೆಗೆ ಪಾರ್ಸೆಲ್ ನೀಡುವ ಡೆಲಿವರಿ ಸಿಬ್ಬಂದಿ ಮಹಿಳೆಯರ ಜತೆ ಅನುಚಿತ ವರ್ತನೆ ತೋರಿದ್ದಾರೆ ಎನ್ನುವ ಬಗ್ಗೆ ಅನೇಕ ದೂರು ಕೇಳಿ ಬಂದಿವೆ. ಈ ನಡುವೆ ಇಲ್ಲೊಬ್ಬ ಡೆಲಿವರಿ ಸಿಬ್ಬಂದಿಯ ಸಮಯ ಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ಕಂಡು ಆಕೆ ದಿಗ್ಭ್ರಮೆಗೊಂಡು ಸ್ತಬ್ಧರಾದಾಗ ಡೆಲಿವರಿ ಬಾಯ್ ತಕ್ಷಣವೇ ನೆರವಿಗೆ ಬಂದರು. ಯಾವುದೇ ಹಿಂಜರಿಕೆಯಿಲ್ಲದೆ ಸಹಾಯಕ್ಕೆ ಧಾವಿಸಿ ಬಂದು ಅಪಾಯ ತಪ್ಪಿಸಿದ್ದಾರೆ. ಈ ಘಟನೆಯ (Viral News) ನಂತರ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಡೆಲಿವರಿ ಏಜೆಂಟ್ನನ್ನು ಶ್ಲಾಘಿಸಿದ್ದಾರೆ.
ಡಾ. ಶಿವಾಂಗಿ ಜೋಶಿ ಎನ್ನುವ ಮಹಿಳೆ ಈ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮನೆಗೆ ಪಾರ್ಸೆಲ್ ಒಂದನ್ನು ಬುಕ್ ಮಾಡಿದ್ದರು. ಆದರೆ ಈ ಸಮಯದಲ್ಲಿ ಅಡುಗೆ ಮನೆಯ ಸ್ಟೌ ಮೇಲಿಟ್ಟಿದ್ದ ಪಾತ್ರೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಂಡು ಭಯಪಟ್ಟ ಅವರು ಅಲ್ಲೇ ಸ್ತಬ್ಧರಾಗಿದ್ದರು. ಅದೇ ಸಮಯದಲ್ಲಿ ಪಾರ್ಸೆಲ್ ನೀಡಲು ಬಂದಿದ್ದ ಡೆಲಿವರಿ ಬಾಯ್, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕ್ಷಣಮಾತ್ರದಲ್ಲೂ ಯೋಚಿಸದೆ ಒಳಬಂದು ಬೆಂಕಿ ನಂದಿಸಲು ಸಹಾಯ ಮಾಡಿದರು.
ವಿಡಿಯೊ ನೋಡಿ:
ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯಲ್ಲಿ ಡೆಲಿವರಿ ಏಜೆಂಟ್ನಿಂದ ಪಾರ್ಸೆಲ್ ಪಡೆಯುತ್ತಿರುವಾಗ, ಅಡುಗೆಮನೆಯ ಒಲೆಯ ಮೇಲಿದ್ದ ಪಾತ್ರೆಯಿಂದ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ಗದ್ದಲವನ್ನು ಕೇಳಿ, ಡೆಲಿವರಿ ಸಿಬ್ಬಂದಿ ಒಳಗೆ ಬಂದು ಬೆಂಕಿಯನ್ನು ನಂದಿಸಲು ನೆರವಾಗಿರುವುದು ಕಂಡು ಬಂದಿದೆ. ಈ ಕ್ಷಣವನ್ನು ನೆನಪಿಸಿಕೊಂಡ ಮಹಿಳೆ, ʼʼಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿಯದೆ ಗಾಬರಿಯಾಗಿದ್ದೆ. ಆಗ ಪಾರ್ಸೆಲ್ ತಲುಪಿಸಲು ಬಂದಿದ್ದ ಡೆಲಿವರಿ ಏಜೆಂಟ್ ಸ್ವಲ್ಪವೂ ಯೋಚನೆ ಮಾಡದೇ ತಕ್ಷಣ ಸಹಾಯ ಮಾಡಿದ್ದಾರೆʼʼ ಎಂದು ವಿವರಿಸಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್ ನೋಡಿ ಮಾಲಕ ಭಾವುಕ
"ಮಾನವೀಯತೆ ಇಂದಿಗೂ ಜೀವಂತವಾಗಿದೆ. ಅವರು ನನ್ನ ಪಾಲಿಗೆ ನಿಜವಾದ ರಕ್ಷಕರು" ಎಂದು ಡೆಲಿವರಿ ಬಾಯ್ ಅವರ ಮಾನವೀಯತೆಯನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ''ನಿಜವಾದ ಹೀರೊ'' ಎಂದು ಬಣ್ಣಿಸಿದ್ದಾರೆ.