12ನೇ ಮಹಡಿಯ ಕಿಟಕಿಯಲ್ಲಿ ತಲೆ ಸಿಲುಕಿಕೊಂಡು ನೇತಾಡಿದ 3 ವರ್ಷದ ಬಾಲಕಿ: ರಕ್ಷಣಾ ಕಾರ್ಯಾಚರಣೆಯ ರೋಚಕ ವಿಡಿಯೊ ವೈರಲ್
Viral News: ಚೀನಾದ ಫುಜಿಯನ್ ಪ್ರಾಂತ್ಯದ ಝಾಂಗ್ಪಿಂಗ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೂರು ವರ್ಷದ ಬಾಲಕಿಯೊಬ್ಬಳು ಹನ್ನೆರಡನೇ ಮಹಡಿಯ ಅಪಾರ್ಟ್ಮೆಂಟ್ನ ಕಿಟಕಿ ಒಳಗೆ ತಲೆ ಸಿಲುಕಿಕೊಂಡು ಹೊರಭಾಗದಲ್ಲಿ ನೇತಾಡುತ್ತಿದ್ದ ದೃಶ್ಯವೊಂದು ಕಂಡು ಬಂದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ನೆರೆಹೊರೆಯವರು ನೆರವಿಗೆ ಧಾವಿಸಿ ಪ್ರಾಣ ಉಳಿಸಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚೀನಾದ 12ನೇ ಮಹಡಿಯ ಕಿಟಕಿಯಲ್ಲಿ ತಲೆ ಸಿಲುಕಿಕೊಂಡು ನೇತಾಡಿದ 3 ವರ್ಷದ ಬಾಲಕಿ -
ಬೀಜಿಂಗ್, ಅ. 21: ಸಣ್ಣ ಪುಟ್ಟ ಮಕ್ಕಳು ಮನೆಯಲ್ಲಿದ್ದಾಗ ಪೋಷಕರು ಎಷ್ಟು ಎಚ್ಚರಿಕೆ ವಹಿಸಿದರೂ ಕಮ್ಮಿಯೇ. ಅದರಲ್ಲೂ ಒಬ್ಬಂಟಿ ಮಕ್ಕಳನ್ನು ಆಡಲೆಂದು ಬಿಡುವಾಗ ಪೋಷಕರು ಯೋಚಿಸಲೇಬೇಕು. ಇದಕ್ಕೆ ಸಾಕ್ಷಿ ಎನ್ನುವಂತೆ ಚೀನಾದ ಫುಜಿಯನ್ ಪ್ರಾಂತ್ಯದ ಝಾಂಗ್ಪಿಂಗ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೂರು ವರ್ಷದ ಬಾಲಕಿಯೊಬ್ಬಳು ಹನ್ನೆರಡನೇ ಮಹಡಿಯ ಅಪಾರ್ಟ್ಮೆಂಟ್ನ ಕಿಟಕಿ ಒಳಗೆ ತಲೆ ಸಿಲುಕಿಕೊಂಡು ಹೊರ ಭಾಗದಲ್ಲಿ ನೇತಾಡುತ್ತಿದ್ದ ದೃಶ್ಯವೊಂದು (Viral News) ಕಂಡು ಬಂದಿದೆ. ಕೂಡಲೇ ಭದ್ರತಾ ಸಿಬ್ಬಂದಿ ಮತ್ತು ನೆರೆಹೊರೆಯವರು ಧಾವಿಸಿ ಮಗುವಿನ ಪ್ರಾಣ ಉಳಿಸಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಅಗ್ನಿಶಾಮಕ ದಳದವರು ಬರುವವರೆಗೂ ಇಬ್ಬರು ರಕ್ಷಕರು ಮಗುವಿದ್ದ ಅಪಾರ್ಟ್ಮೆಂಟ್ನ ಕೆಳಗಿನ ಮಹಡಿಗೆ ತೆರಳಿ ಸ್ಟೂಲ್ ಒಂದನ್ನು ಹಿಡಿದು ಆಧಾರ ನೀಡಿದ್ದಾರೆ. ನಂತರ ಬಾಲಕಿಯನ್ನು ಗ್ರಿಲ್ನಿಂದ ಬಿಡಿಸಿ, ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವಿಡಿಯೊ ನೋಡಿ:
太惊险了😱爸爸去上班,妈妈早起去买菜,一岁多的孩子被挂16楼阳台。 后续被众人合力救下🙏 https://t.co/2cMDzwVuIc
— 小牛 (@Xiaoniu6161) October 17, 2026
ಈ ದೃಶ್ಯವು ಅಲ್ಲಿದ್ದ ನೆರೆಹೊರೆಯವರನ್ನು ಆತಂಕಕ್ಕೆ ದೂಡಿದ್ದು ಮಗು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಈ ಘಟನೆಯು ಅಕ್ಟೋಬರ್ 17ರಂದು ಬೆಳಿಗ್ಗೆ 7:48ರ ಸುಮಾರಿಗೆ ಝಾಂಗ್ ಪಿಂಗ್ನಲ್ಲಿರುವ ವಸತಿ ಕಟ್ಟವೊಂದರಲ್ಲಿ ನಡೆದಿದೆ. ಬಾಲಕಿ ಕಿಟಕಿಯ ಸರಳಿನ ಮೂಲಕ ಹೊರಹೋಗಲು ಪ್ರಯತ್ನಿಸಿದಾಗ, ಅವಳ ತಲೆ ಮಾತ್ರ ಸರಳುಗಳ ನಡುವೆ ಸಿಲುಕಿಕೊಂಡಿದೆ.
ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!
ವರದಿಗಳ ಪ್ರಕಾರ, ಘಟನೆ ನಡೆದಾಗ ಬಾಲಕಿಯ ತಂದೆ ಕೆಲಸಕ್ಕೆ ಹೋಗಿದ್ದರು. ತಾಯಿ ಮಗುವನ್ನು ಮನೆಯಲ್ಲಿ ಮಲಗಿಸಿ, ದಿನಸಿ ಸಾಮಗ್ರಿಗಳನ್ನು ಖರೀದಿಸಲು ಹೊರಗೆ ಹೋಗಿದ್ದರು. ವೈರಲ್ ಫೋಟೊಗಳಲ್ಲಿ ಬಾಲಕಿ ತನ್ನ ಎರಡೂ ಕೈಗಳಿಂದ ಗ್ರಿಲ್ ಅನ್ನು ಬಿಗಿಯಾಗಿ ಹಿಡಿದುಕೊಂಡಿದ್ದು ದೇಹ ಮಾತ್ರ ಅಪಾರ್ಟ್ಮೆಂಟ್ನ ಹೊರಗೆ ನೇತಾಡುತ್ತಿರುವುದು ಕಂಡು ಬಂದಿದೆ.
ತುರ್ತು ಕರೆ ಸ್ವೀಕರಿಸಿದ ಅಗ್ನಿಶಾಮಕ ದಳದವರು ವಸತಿ ಸಮುಚ್ಚಯಕ್ಕೆ ಕೂಡಲೇ ಆಗಮಿಸಿದ್ದು ಅಪಾರ್ಟ್ಮೆಂಟ್ ಬಾಗಿಲನ್ನು ಒಡೆದು ಒಳಪ್ರವೇಶಿಸಿ, ಕಿಟಕಿಯ ಗ್ರಿಲ್ನಿಂದ ಮಗುವನ್ನು ಮುಕ್ತಗೊಳಿಸಿದ್ದಾರೆ.