Viral News: ಅರೇ.. ಹೀಗೂ ನಡೆಯುತ್ತಾ ಪ್ರೊಟೆಸ್ಟ್! ಲುಂಗಿ-ಬನಿಯನ್ ಧರಿಸಿ ಪ್ರತಿಭಟನೆ
ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಹಾಸ್ಟೆಲ್ ಕ್ಯಾಂಟೀನ್ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಜುಲೈ 16ರಂದು ಮಹರಾಷ್ಟ್ರ ವಿಧಾನಸಭೆಯ ಹೊರಗೆ 'ಲುಂಗಿ, ಬನಿಯನ್' ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.


ಮುಂಬೈ:ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಹಾಸ್ಟೆಲ್ ಕ್ಯಾಂಟೀನ್ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ್ದು, ಘಟನೆಯನ್ನು ಖಂಡಿಸಿ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಬುಧವಾರ (ಜುಲೈ 16) ಮಹರಾಷ್ಟ್ರ ವಿಧಾನಸಭೆಯ ಹೊರಗೆ 'ಲುಂಗಿ, ಬನಿಯನ್' ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಶಿವಸೇನೆ (ಉದ್ಧವ್ ಬಾಳಾಹಾಸಾಹೇಬ್ ಠಾಕ್ರೆ), ಎಂಎಲ್‌ಸಿ ಅಂಬಾದಾಸ್ ದಾನ್ವೆ ಮತ್ತು ಎನ್‌ಸಿಪಿ (ಎಸ್‌ಪಿ) ನಾಯಕ ಜಿತೇಂದ್ರ ಅವಾದ್ ಸೇರಿದಂತೆ ಇತರ ನಾಯಕರು ತಾವು ಧರಿಸಿದ ಉಡುಪಿನ ಮೇಲೆ ಬನಿಯನ್ ಮತ್ತು ಟವೆಲ್‌ಗಳನ್ನು ಲುಂಗಿಯಂತೆ ಧರಿಸಿರುವುದನ್ನು ವಿಡಿಯೊದಲ್ಲಿ ಕಂಡುಬಂದಿದೆ. ಅವರು ಆಡಳಿತ ಮೈತ್ರಿಕೂಟದ 'ಗೂಂಡಾ ರಾಜ್' ವಿರುದ್ಧ ಫಲಕಗಳನ್ನು ಹಿಡಿದು 'ಚಡ್ಡಿ ಬನಿಯನ್ ಗ್ಯಾಂಗ್ ಅನ್ನು ನಾವು ಖಂಡಿಸುತ್ತೇವೆ' ಎಂಬಂತಹ ಘೋಷಣೆಗಳನ್ನು ಕೂಗಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
VIDEO | Mumbai: Opposition leaders including Shiv Sena(UBT) MLC Ambadas Danve (@iambadasdanve), NCP(SP) leader Jitendra Awhad (@Awhadspeaks), and others hold protest on the steps of Maharashtra Vidhan Bhavan, raising slogans ‘We Condemn The Chaddi Baniyan Gang’.#Maharashtra… pic.twitter.com/UY6M9nyrm3
— Press Trust of India (@PTI_News) July 16, 2025
ನಡೆದಿದ್ದೇನು?
ಕಳೆದ ವಾರ, ಬುಲ್ದಾನದ ಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಚರ್ಚ್‌ಗೇಟ್‌ನಲ್ಲಿರುವ ಆಕಾಶವಾಣಿ ಎಂಎಲ್‍ಎ ಹಾಸ್ಟೆಲ್‌ನ ಉದ್ಯೋಗಿ ಯೋಗೇಶ್ ಕುತ್ರನ್ ಅವನಿಗೆ ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ನಂತರ ಭಾರಿ ವಿವಾದಕ್ಕೆ ಕಾರಣವಾಯಿತು.
ಮಾಹಿತಿ ಪ್ರಕಾರ, ಗಾಯಕ್ವಾಡ್ ಕ್ಯಾಂಟೀನ್‍ನಿಂದ ಊಟವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ನೀಡಿದ ಊಟಕ್ಕೆ ಬಳಸಿದ ಬೇಳೆ ಮತ್ತು ಅಕ್ಕಿ ಹಳೆಯದಾಗಿದ್ದು, ವಾಸನೆ ಬರುತ್ತಿತ್ತಂತೆ. ಇದರಿಂದ ಕೋಪಗೊಂಡ ನಾಯಕ ಕ್ಯಾಂಟೀನ್‌ಗೆ ಹೋಗಿ ಉದ್ಯೋಗಿಯನ್ನು ಪ್ರಶ್ನಿಸಿದ್ದಾರೆ. ಈ ಗಲಾಟೆಯ ಸಮಯದಲ್ಲಿ, ಗಾಯಕ್ವಾಡ್ ಕ್ಯಾಂಟೀನ್ ನೌಕರನಿಗೆ ಕಪಾಳಮೋಕ್ಷ ಮಾಡಿ ಗುದ್ದಿದ್ದಾರೆ. ಈ ಘಟನೆಯು ಭಾರಿ ಟೀಕೆಗೆ ಕಾರಣವಾಯಿತು. ವಿರೋಧ ಪಕ್ಷಗಳು ಆಡಳಿತ ಪಕ್ಷದ ಶಾಸಕನನ್ನು "ಗೂಂಡಾ ರಾಜ" ಎಂದು ಟೀಕಿಸಿದವು ಮತ್ತು ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದವು.
ಆದರೆ, ಗಾಯಕ್ವಾಡ್ ತಮ್ಮ ಆಘಾತಕಾರಿ ಕ್ರಮಗಳ ಬಗ್ಗೆ ಯಾವುದೇ ರೀತಿಯಲ್ಲಿ ಕ್ಷಮೆ ಕೇಳಲಿಲ್ಲ ಬದಲಾಗಿ ಅವರು ತಮ್ಮನ್ನು ತಾವು ಸಮರ್ಥಿಸಿಕೊಂಡು ತಾನು ಸಿಬ್ಬಂದಿಗೆ ಅಲ್ಲ, ವ್ಯವಸ್ಥಾಪಕರಿಗೆ ಹೊಡೆದಿದ್ದು, ಅದು ಸರಿ ಎಂದು ವಾದಿಸಿದ್ದಾರೆ. ಅಲ್ಲದೇ ಶಾಸಕ ಸಂಜಯ್ ಗಾಯಕ್ವಾಡ್ ದಕ್ಷಿಣದ ಶೆಟ್ಟಿ ಸಮುದಾಯವನ್ನು ಗುರಿಯಾಗಿಸಿಕೊಂಡು "ಮಹಾರಾಷ್ಟ್ರದ ಸಂಸ್ಕೃತಿಯನ್ನು ಕೆಣಕಿದ್ದಾರೆ" ಎಂದು ಆರೋಪಿಸಿದ್ದಾರೆ. ಮರಾಠಿಗಳಿಗೆ ಕ್ಯಾಂಟೀನ್ ನಡೆಸಲು ಅವಕಾಶ ನೀಡಿದ್ದರೆ, ಅವರು ತಾಜಾ ಆಹಾರವನ್ನು ಬಡಿಸುವಲ್ಲಿ ಎಂದಿಗೂ ಬೇಜವಾಬ್ದಾರಿತನವನ್ನು ತೋರಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿದೇಶದ ಬೀದಿಯಲ್ಲಿ ಲಂಗು ಲಗಾಮಿಲ್ಲದೇ ಕುಣಿದ ಭೂಪ! ನೆಟ್ಟಿಗರು ಹೇಳಿದ್ದೇನು?
ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತವೆ. ಆದರೆ ದಕ್ಷಿಣದ ಈ ಶೆಟ್ಟಿಗಳು ಮಹಾರಾಷ್ಟ್ರದ ಸಂಸ್ಕೃತಿಯನ್ನು, ಅದು ಡ್ಯಾನ್ಸ್ ಬಾರ್‌ಗಳಾಗಲಿ ಅಥವಾ ಲೇಡೀಸ್ ಬಾರ್‌ಗಳಾಗಲಿ, ಅಪಖ್ಯಾತಿ ಮಾಡಿದ್ದಾರೆಂದು ಅವರಿಗೆ ತಿಳಿದಿಲ್ಲವೇ? ಈ ವಿಷಯಗಳು ಮಹಾರಾಷ್ಟ್ರದಲ್ಲಿ ಬಹಳ ಸಮಯದಿಂದ ನಡೆಯುತ್ತಿವೆ ಮತ್ತು ಶೆಟ್ಟಿಗಳು ಇದನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.