ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಹದಗೆಟ್ಟಿದ ರಸ್ತೆ ವ್ಯವಸ್ಥೆ: ಗುಂಡಿಗೆ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ!

Viral News: ಬೆಂಗಳೂರಿನ ಗುಂಜೂರು ಬಳಿ ಬೈಕ್ ಸವಾರನೊಬ್ಬ ಪ್ರಯಾಣಿಸುತ್ತಿದ್ದಾಗ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ. ಅವರು ರಸ್ತೆಗೆ ಬೀಳುತ್ತಿದ್ದಂತೆಯೇ ಹಿಂದೆ ಬರುತ್ತಿದ್ದ ವಾಟರ್ ಟ್ಯಾಂಕರ್ ಬೈಕ್ ಮೇಲೆಯೇ ಹರಿದಿದೆ. ತಕ್ಷಣವೇ ಅವರು ಪಕ್ಕಕ್ಕೆ ಬಂದಿರುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸದ್ಯ ಈ ಅಘಾತಕಾರಿ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಸ್ತೆಯಲ್ಲಿ ಪ್ರಯಾಣಿಸುವಾಗ ಗುಂಡಿಗೆ ಬಿದ್ದ ಬೈಕ್ ಸವಾರ: ಅಪಾಯದಿಂದ ಪಾರು

ಬೆಂಗಳೂರಿನಲ್ಲಿ ಹದಗೆಟ್ಟಿದ ರಸ್ತೆ ವ್ಯವಸ್ಥೆ- ಗುಂಡಿಗೆ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ -

Profile
Pushpa Kumari Aug 21, 2026 1:27 PM

ಬೆಂಗಳೂರು,ಆ.21: ನಗರ ಪ್ರದೇಶಗಳು ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದೀಗ ಬೆಂಗಳೂರಿನ ಗುಂಜೂರು ಬಳಿ ಬೈಕ್ ಸವಾರನೊಬ್ಬ ಪ್ರಯಾಣಿಸುತ್ತಿದ್ದಾಗ ಗುಂಡಿಗೆ ಬಿದ್ದ ಘಟನೆಯೊಂದು ನಡೆದಿದೆ. ಅವರು ರಸ್ತೆಗೆ ಬೀಳುತ್ತಿದ್ದಂತೆಯೇ ಹಿಂದೆ ಬರುತ್ತಿದ್ದ ವಾಟರ್ ಟ್ಯಾಂಕರ್ ಬೈಕ್ ಮೇಲೆಯೇ ಹರಿದಿದೆ. ತಕ್ಷಣವೇ ಅವರು ಪಕ್ಕಕ್ಕೆ ಬಂದಿರುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸದ್ಯ ಈ ಅಘಾತಕಾರಿ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಬೆಂಗಳೂರಿನ ವಾಲ್‌ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಸೌರಭ್ ಎಂದು ಗುರುತಿಸಲಾದ ಯುವಕ ಪ್ರಯಾಣಿಸುತ್ತಿದ್ದ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಆಯತಪ್ಪಿ ಬೈಕ್ ಗುಂಡಿಗೆ ಬಿದ್ದಿದೆ. ನಿಯಂತ್ರಣ ತಪ್ಪುತ್ತಿದ್ದಂತೆ, ಹಿಂದಿನಿಂದ ಬಂದ ಟ್ಯಾಂಕರ್ ಸವಾರನನ್ನು ಗಮನಿಸದೆ ಬೈಕ್ ಮೇಲೆ ಡಿಕ್ಕಿ ಹೊಡೆದಿದೆ. ಸೌರಭ್ ಬೈಕನ್ನು ಬಿಟ್ಟು ದೂರ ಸರಿದಿದ್ದು ಸ್ವಲ್ಪದರಲ್ಲೇ ಡಿಕ್ಕಿ ಹೊಡೆಯುವುದರಿಂದ ಪಾರಾಗಿದ್ದಾರೆ‌.

ವಿಡಿಯೋ ನೋಡಿ:



ಟ್ಯಾಂಕರ್ ಚಾಲಕನು ಸ್ವಲ್ಪ ದೂರ ಚಲಾಯಿಸಿ ವಾಹನವನ್ನು ನಿಲ್ಲಿಸಿದ್ದಾನೆ. ಆದರೆ ಈ ಘಟನೆ ಎದುರಾದಾಗ ಚಾಲಕನ ಬಳಿ ಯಾವುದೇ ಪರವಾನಗಿ ಇರಲಿಲ್ಲ, ಹಾಗೆಯೇ ವಾಹನದಿಂದ ನಂಬರ್ ಪ್ಲೇಟ್ ಕೂಡ ಕಾಣೆಯಾಗಿತ್ತು. ಆತ ಹೊಸದಾಗಿ ಲಾರಿ ಚಾಲನೆ ಕಲಿಯುತ್ತಿದ್ದ ಎಂಬುದಾಗಿ ತಿಳಿದುಬಂದಿದೆ.

Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ

ರಸ್ತೆಯ ಬಗ್ಗೆ ಮಾತನಾಡಿದ, ವಿದ್ಯಾಸಾಗರ್ ವಾರದಲ್ಲಿ ಸುಮಾರು ನಾಲ್ಕು ದಿನ ಈ ರಸ್ತೆಯಲ್ಲಿ ಪ್ರಯಾಣಿಸುವುದಾಗಿ ಹೇಳಿಕೊಂಡಿದ್ದು, ಕಳೆದ ಆರರಿಂದ ಎಂಟು ತಿಂಗಳುಗಳಿಂದ ರಸ್ತೆ ಸ್ಥಿತಿ ಹದಗೆಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ

ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಸ್ತೆ ಸ್ಥಿತಿ ಕಂಡು ಆತಂಕ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು ಸಾರ್ವಜನಿಕರು, ಉದ್ಯೋಗಿಗಳು ದಿನನಿತ್ಯ ಎದುರಿಸುವ ಸಮಸ್ಯೆ ಇದಾಗಿದೆ. ಪ್ರಾಣ ಭಯದಲ್ಲೆ ಸಂಚಾರಿಸಬೇಕಾದ ಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.