ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

285 ರೂಪಾಯಿ ಬಾಡಿಗೆ ಮೊತ್ತಕ್ಕೆ 5,950 ರೂ. ಬಿಲ್! ಬೆಂಗಳೂರಿನ ಕ್ಯಾಬ್ ಚಾಲಕನಿಂದ ವಂಚನೆ

Viral Post: ಹಣದ ವಂಚನೆ, ನಿಗದಿತ ಸ್ಥಳಕ್ಕೆ ಕರೆದೊಯ್ಯದೇ ಇರುವುದು ಹೀಗೆ ನಾನಾ ಪ್ರಕರಣದಲ್ಲಿ ಕ್ಯಾಬ್ ಚಾಲಕರು ಸುದ್ದಿ ಯಾಗುತ್ತಿದ್ದಾರೆ. ಈ ನಡುವೆ ಕ್ಯಾಬ್ ಬಾಲಕನೊಬ್ಬ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದ್ದು ಪ್ರಯಾಣಿಕನಿಗೆ ಬೆದರಿಕೆ ಕೂಡ ಹಾಕಿದ್ದಾನೆ. ಈ ಘಟನೆಯೂ ಬೆಂಗಳೂರಿ ನಲ್ಲಿ ಕಂಡು ಬಂದಿದ್ದು ಕ್ಯಾಬ್ ಚಾಲಕನ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

ಬೆಂಗಳೂರು ಕ್ಯಾಬ್ ಚಾಲಕನಿಂದ ದುಬಾರಿ ಹಣ ವಸೂಲಿ: ಪ್ರಯಾಣಿಕ ಹೇಳಿದ್ದೇನು?

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ವಂಚನೆ -

Profile
Pushpa Kumari Mar 19, 2026 6:38 PM

ಬೆಂಗಳೂರು,ಮಾ.19: ಕ್ಯಾಬ್ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಜಗಳದ ವಿಡಿಯೊಗಳು ಆಗಾಗ ವೈರಲ್ (Viral Video) ಆಗುತ್ತವೆ. ಹಣದ ವಂಚನೆ, ನಿಗದಿತ ಸ್ಥಳಕ್ಕೆ ಕರೆದೊಯ್ಯದೇ ಇರುವುದು ಹೀಗೆ ನಾನಾ ಪ್ರಕರಣದಲ್ಲಿ ಕ್ಯಾಬ್ ಚಾಲಕರು ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಕ್ಯಾಬ್ ಬಾಲಕನೊಬ್ಬ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದ್ದು ಪ್ರಯಾಣಿಕನಿಗೆ ಬೆದರಿಕೆ ಕೂಡ ಹಾಕಿದ್ದಾನೆ. ಈ ಘಟನೆಯೂ ಬೆಂಗಳೂರಿನಲ್ಲಿ ಕಂಡು ಬಂದಿದ್ದು ಕ್ಯಾಬ್ ಚಾಲಕನ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.

ಓಲಾ ಚಾಲಕ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುವ ಮೂಲಕ ಅವರನ್ನು ವಂಚಿಸಲು ಪ್ರಯತ್ನಿ ಸಿದ್ದಾರೆ ಎಂದು ಪ್ರಯಾಣಿಕ ಆರೋಪ ಮಾಡಿದ್ದಾರೆ. ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಸವಾರಿಯನ್ನು ಬುಕ್ ಮಾಡಲಾಗಿತ್ತು.ಆದರೆ ಚಾಲಕ 5,950 ರೂ.ಪಾವತಿ ಮಾಡುವಂತೆ ಬೆದರಿಕೆ ಹಾಕಿದ್ದಾನೆ.



ಪೋಸ್ಟ್ ನಲ್ಲಿ, ಚಾಲಕ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುವ ಮೂಲಕ ಅವರನ್ನು ವಂಚಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ.ಆರಂಭದಲ್ಲಿ ಪ್ರಯಾಣ ದರ 285 ರೂ. ತೋರಿಸ ಲಾಗಿತ್ತು. ಆದರೆ ನಂತರ, ಚಾಲಕ 5,950 ರೂ. ಬಿಲ್ ನೀಡಿದ್ದಾನೆ ಎನ್ನಲಾಗಿದೆ. ಪ್ರಯಾಣಿಕನಿಗೆ ನಿಮ್ಮ ಹಳೆಯ ರೈಡ್ ಗಳು ಕ್ಯಾನ್ಸಲ್ ಆಗಿದೆ. ಈ ಹಣ ತನ್ನ ಖಾತೆಯಿಂದ ಕಡಿತವಾಗಿದೆ ಎಂದು ಸುಳ್ಳು ಕಾರಣವನ್ನು ನೀಡಿದ್ದಾರೆ.

Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಚಾಲಕನು ಹೆಚ್ಚಿನ ಸಂಭಾಷಣೆಯನ್ನು ಕನ್ನಡದಲ್ಲಿ ಮಾಡಿದ್ದಾನೆ ಆದ್ದರಿಂದ ಸಂವಹನವೂ ಕಷ್ಟಕರವಾಗಿತ್ತು. ನನಗೆ ಆ ಭಾಷೆ ಚೆನ್ನಾಗಿ ಬರದ ಕಾರಣ‌ ನಿರ್ವಹಿಸುವುದು ಕಷ್ಟಕರವಾಯಿತು ಎಂದು ಬರೆದಿದ್ದಾರೆ. ನಂತರ ಪ್ರಯಾಣಿಕನು ಅಪ್ಲಿಕೇಶನ್ ಮೂಲಕ ಓಲಾದ ತುರ್ತು ಬೆಂಬಲ ವನ್ನು ಸಂಪರ್ಕಿಸಿದ್ದಾರೆ. ಆದರೆ ಇದು ತುರ್ತು ಕರೆಯಲ್ಲ ಎಂದು ಕರೆ ಕಟ್ ಮಾಡಿದ್ದಾರೆ.

ಆ ಕ್ಷಣದಲ್ಲಿ ಚಾಲಕನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಭಾಯಿಸಲು ನಾನು ಒಬ್ಬಂಟಿಯಾಗಿದ್ದೆ ಎಂದು ಸವಾರ ಬರೆದಿದ್ದಾರೆ. ಗಲಾಟೆ ನಡೆಯುತ್ತಿದ್ದ ಸ್ಥಳದಲ್ಲಿ ಮಾಲೀಕರು ಬಂದಾಗ ಇಬ್ಬರನ್ನೂ ಪೊಲೀಸ್ ಠಾಣೆಗೆ ಹೋಗಲು ಸೂಚಿಸಿದ್ದಾರೆ.‌ ಆದರೆ ಚಾಲಕ ಠಾಣೆಗೆ ಎಂದು ಸುಳ್ಳು ಹೇಳಿ ಮಾರ್ಗ ಮಧ್ಯೆಯೇ ರಸ್ತೆ ಬದಲಾಯಿಸಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಚಾಲಕನ ವಿರುದ್ಧ ಕ್ರಮ ಕೈ ಗೊಳ್ಳುವಂತೆ ಸೂಚಿಸಿದ್ದಾರೆ.