ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ಟ್ರಾಫಿಕ್ ನಡುವೆ ರಾಂಗ್ ಸೈಡ್ ಡ್ರೈವ್ ಮಾಡಿ ದರ್ಪ ತೋರಿದ ಚಾಲಕ: ವಿಡಿಯೊ ವೈರಲ್

Viral News: ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಶಾಕಿಂಗ್ ಘಟನೆಯೊಂದು ಕಂಡು ಬಂದಿದೆ. ರಾಂಗ್ ಲೇನ್ ನಲ್ಲಿ ಟ್ರಕ್ ಚಾಲಕನೊಬ್ಬ ವಾಹನ ಚಲಾಯಿಸಿಕೊಂಡು ಬಂದಿದ್ದು ಅದನ್ನು ಪ್ರಶ್ನೆ ಮಾಡಿದ ವ್ಯಕ್ತಿಯ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..

ರಾಂಗ್ ಸೈಡ್ ಡ್ರೈವ್ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ ಟ್ರಕ್ ಚಾಲಕ

ರಾಂಗ್ ಸೈಡ್ ಡ್ರೈವ್ ಮಾಡಿ ದರ್ಪ ತೋರಿದ ಚಾಲಕ -

Profile
Pushpa Kumari Jun 24, 2026 3:18 PM

ಬೆಂಗಳೂರು,ಜೂ.24: ಸಿಲಿಕಾನ್ ಸಿಟಿ ಅಂದಾಗ ನೆನಪಾಗು ವುದೇ ಅಲ್ಲಿನ ಮೀತಿಮಿರಿದ ಟ್ರಾಫಿಕ್..ದಿನ ನಿತ್ಯ ಸಂಚಾರ ಮಾಡುವ ಉದ್ಯೋಗಿಗಳಂತೂ ಅರ್ಧ ಗಂಟೆ ಮೊದಲೇ ಹೊರ ಡಬೇಕಾದ ಅನಿವಾರ್ಯ ಬಂದಿದೆ. ಅದರಲ್ಲೂ ಇಲ್ಲಿ ಸಂಚಾರ ನಿಯಮಗಳ ಬಗ್ಗೆ ಎಷ್ಟೇ ಜಾಗೃತಿ ವಹಿಸಿದರೂ ಉಲ್ಲಂಘನೆಗಳು ಕಂಡು ಬರುತ್ತಿವೆ. ಇದೀಗ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಇಂತಹದ್ದೇ ಶಾಕಿಂಗ್ ಘಟನೆಯೊಂದು ಕಂಡು ಬಂದಿದೆ. ರಾಂಗ್ ಲೇನ್ ನಲ್ಲಿ ಟ್ರಕ್ ಚಾಲಕನೊಬ್ಬ ವಾಹನ ಚಲಾಯಿಸಿಕೊಂಡು ಬಂದಿದ್ದು ಅದನ್ನು ಪ್ರಶ್ನೆ ಮಾಡಿದ ವ್ಯಕ್ತಿಯ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಇತ್ತೀಚೆಗೆ ಪಾದಿಚಾರಿ ರಸ್ತೆಯಲ್ಲಿ, ತಪ್ಪು ದಿಕ್ಕಿನಲ್ಲಿ ಪ್ರಯಾಣಿಸಿ ನಿಯಮ ಉಲ್ಲಂಘನೆ ಮಾಡುವವರು ಅನೇಕರು ಇದ್ದಾರೆ. ಜೂನ್ 22 ರಂದು ಮಧ್ಯಾಹ್ನ ಚಾಲಕನೊಬ್ಬ ಮೇಖ್ರಿ ವೃತ್ತದಲ್ಲಿ ತಪ್ಪು ಬದಿಯಲ್ಲಿ ಚಾಲನೆ ಮಾಡಿದ್ದು ಇದು ಗಂಭೀರ ಸುರಕ್ಷತಾ ಅಪಾಯವನ್ನುಂಟು ಮಾಡುತ್ತಿತ್ತು.

ವಿಡಿಯೋ ನೋಡಿ:



ಚಂದ್ರು ಎಂಬುವವರು ತಮ್ಮ ಕಾರಿನಲ್ಲಿ ಎಡಕ್ಕೆ ತಿರುವು ಪಡೆದು ರಸ್ತೆಯಲ್ಲಿ ಸರಿಯಾದ ರಸ್ತೆ ಯಲ್ಲೆ ಡ್ರೈವ್ ಮಾಡುತ್ತಿದ್ದರು. ಈ ವೇಳೆ ಎದುರುಗಡೆಯಿಂದ KA01AG1283 ನೋಂದಣಿ ಸಂಖ್ಯೆಯ ಟೆಂಪೋ ಟ್ರಾವೆಲರ್ ತಪ್ಪು ದಿಕ್ಕಿನಲ್ಲಿ ಬಂದು ಎರಡು ವಾಹನಗಳು ಮುಖಾಮುಖಿ ಯಾಗಿವೆ. ಕಾರು ಚಾಲಕ ತಾನು ಸರಿಯಾದ ರಸ್ತೆಯಲ್ಲಿದ್ದ ಕಾರಣ ಹಿಂದೆ ಸರಿಯಲು ನಿರಾಕ ರಿಸಿದ್ದಾರೆ. ಟೆಂಪೊ ಚಾಲಕ ತನ್ನದೇ ತಪ್ಪಿದ್ದರೂ ಕೋಪಗೊಂಡು ವಾಹನದಿಂದ ಕೆಳಗಿಳಿದು ಬಂದು ಕಾರು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

Viral Video: ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ; ನಿವೃತ್ತ ಪೊಲೀಸ್ ಅಧಿಕಾರಿಯ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ಫಿದಾ

ಈ ಇಡೀ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಇನ್ನೂ ಕೆಲವು ವಾಹನಗಳು ಕೂಡ ನಿಯಮ ಉಲ್ಲಂಘಿಸಿ ಪ್ರಯಾಣ ಮಾಡುತ್ತಿವೆ. ಸದ್ಯ ಕಾರು ಚಾಲಕ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತಪ್ಪು ಲೇನ್‌ನಲ್ಲಿದ್ದ ಚಾಲಕನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಒನ್‌ವೇನಲ್ಲಿ ಬರುವುದು ಫ್ಯಾಷನ್ ಆಗಿಬಿಟ್ಟಿದೆ. ಇಂತಹ ಬೇಜವಾಬ್ದಾರಿ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ...