ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾವು ನಿಜವಾದ ತೃಣಮೂಲ ಕಾಂಗ್ರೆಸ್, ಪಕ್ಷದ ಚಿಹ್ನೆಗಾಗಿ ಹಕ್ಕು ಸಾಧಿಸುವ ಅಗತ್ಯವಿಲ್ಲ: ಋತಬ್ರತ ಬ್ಯಾನರ್ಜಿ ಸ್ಪಷ್ಟನೆ

ತೃಣಮೂಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಿದ್ದ ಮಮತಾ ಬ್ಯಾನರ್ಜಿ ಅವರನ್ನು ಬಂಡಾಯ ನಾಯಕರು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಬಳಿಕ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಿದರು. ಅಲ್ಲದೇ ನಮ್ಮದು ನಿಜವಾದ ತೃಣ ಮೂಲ ಕಾಂಗ್ರೆಸ್ ಪಕ್ಷ ಎಂದು ಸ್ಪಷ್ಟಪಡಿಸಿದ್ದಾರೆ.

ಟಿಎಂಸಿ ಚಿಹ್ನೆಗಾಗಿ ಹಕ್ಕು ಸಾಧಿಸುವ ಅಗತ್ಯವಿಲ್ಲ:  ಋತಬ್ರತ ಬ್ಯಾನರ್ಜಿ

ಸಂಗ್ರಹ ಚಿತ್ರ -

ಕೋಲ್ಕತ್ತಾ: ನಿಜವಾದ ತೃಣ ಮೂಲ ಕಾಂಗ್ರೆಸ್ (Trinamool Congress) ಯಾವುದು ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿಲ್ಲ. ಪಕ್ಷದ ಬಹುಪಾಲು ಚುನಾಯಿತ ಪ್ರತಿನಿಧಿಗಳು ತಮ್ಮ ಬಣದಲ್ಲಿದ್ದಾರೆ. ಹೀಗಾಗಿ ಪಕ್ಷದ ಚಿಹ್ನೆಗಾಗಿಯೂ ಹಕ್ಕು ಸಾಧಿಸುವ ಅಗತ್ಯವಿಲ್ಲ ಎಂಬುದಾಗಿ ಟಿಎಂಸಿ ನಾಯಕ (TMC leader) ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಋತಬ್ರತ ಬ್ಯಾನರ್ಜಿ (Ritabrata Banerjee) ಮಂಗಳವಾರ ಹೇಳಿದರು. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ (Election Commission of India) ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

2022ರ ಫೆಬ್ರವರಿಯಲ್ಲಿ ರಚನೆಯಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮೂರು ವರ್ಷಗಳ ಅವಧಿ ಮುಗಿದಿದೆ. ಹೀಗಾಗಿ ಸೋಮವಾರ ಭಾರತೀಯ ಚುನಾವಣಾಯ ಆಯೋಗಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಸಲ್ಲಿಸಲಾಗಿದೆ. ಇದು ಒಂದು ನಿಯಮಿತ ಪ್ರಕ್ರಿಯೆ. ವಿಶೇಷ ಅಧಿವೇಶನ ಅಥವಾ ಯಾವುದೇ ಅಧಿವೇಶನ ನಡೆದಾಗಲೆಲ್ಲಾ ಅದನ್ನು ಭಾರತದ ಚುನಾವಣಾ ಆಯೋಗ ಮತ್ತು ರಾಜ್ಯ ಸಂಸ್ಥೆಗೆ ತಿಳಿಸಬೇಕು. ಆದ್ದರಿಂದ ಅದು ಸಾಮಾನ್ಯ ಪ್ರಕ್ರಿಯೆ. ನಾವು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ನಾವು ತೃಣಮೂಲ ಕಾಂಗ್ರೆಸ್. ಆದ್ದರಿಂದ, ಪಕ್ಷದ ಚಿಹ್ನೆಯನ್ನು ಪಡೆಯುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಮುಂಗಾರು ಮಳೆಗೆ ರಸ್ತೆಯಲ್ಲೆ ರಾಜಗಾಂಭೀರ್ಯದಿಂದ ತಿರುಗಾಡಿದ ನವಿಲುಗಳು!

ಪಕ್ಷದ 80 ಶಾಸಕರಲ್ಲಿ 65 ಶಾಸಕರ ಬೆಂಬಲವನ್ನು ಹೊಂದಿರುವ ಬಂಡಾಯ ಬಣವು ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿರುವ ಹೋಟೆಲ್‌ನಲ್ಲಿ ಸೋಮವಾರ ಸಭೆ ನಡೆಸಿದೆ. ಇದರಲ್ಲಿ ಪಕ್ಷದ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಅವರನ್ನು ಅಧ್ಯಕ್ಷೆ ಸ್ಥಾನದಿಂದ ತೆಗೆದು ಹಾಕಲು ಧ್ವನಿ ಮತದ ಮೂಲಕ ಶಾಸಕರು ಮತ ಚಲಾಯಿಸಿದರು. ಹೀಗಾಗಿ ಬಳಿಕ ಹೌರಾ ಸೆಂಟ್ರಲ್ ಶಾಸಕ ಅರೂಪ್ ರಾಯ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಟಿಎಂಸಿಯಲ್ಲಿ ಮಮತಾ ಬ್ಯಾನರ್ಜಿ ಅವರು ಮುಖ್ಯ ಸಲಹೆಗಾರರಾಗಿ ಸೇವೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

ನನ್ನ ಹೆಸರಿನಲ್ಲಿರುವುದು 32 ಎಕರೆ ಜಮೀನು ಮಾತ್ರ, 100 ಎಕರೆ ಅಲ್ಲ: ಸಚಿವ ಎಂ.ಬಿ.ಪಾಟೀಲ್‌ಗೆ ಅನಿತಾ ಕುಮಾರಸ್ವಾಮಿ ತಿರುಗೇಟು

ತೃಣ ಮೂಲ ಕಾಂಗ್ರೆಸ್ ಬಂಡಾಯ ನಾಯಕರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕಾರ್ಯಕಾರಿ ಪಟ್ಟಿಯನ್ನು ವಿರೋಧಿಸಿದ ಮಮತಾ ಬ್ಯಾನರ್ಜಿ ಅವರ ಬಣವು ಸೋಮವಾರ ರಾತ್ರಿ ಪರಿಷ್ಕೃತ ಪಟ್ಟಿಯನ್ನು ಕಳುಹಿಸಿತು. ಇದರಲ್ಲಿ ಅವರು ಮಮತಾ ಬ್ಯಾನರ್ಜಿ ಅವರು ಪಕ್ಷದ ಅಧ್ಯಕ್ಷರು ಮತ್ತು ಅಭಿಷೇಕ್ ಬ್ಯಾನರ್ಜಿಯವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದೆ. ಶಾಸಕಾಂಗದೊಳಗೆ ತಮ್ಮ ಪಕ್ಷ ಅತೀ ಕಡಿಮೆ ಸ್ಥಾನವನ್ನು ಹೊಂದಿದೆ ಎಂಬುದಾಗಿ ಕೂಡ ಅದು ಪಟ್ಟಿಯಲ್ಲಿ ವಿವರಿಸಿದೆ.