Zomatoದಲ್ಲಿ ಫುಡ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಶಾಕ್; ಬೆಂಗಳೂರಿನಲ್ಲಿ ಪಾವ್ ಭಾಜಿ ಜೊತೆ ಫ್ರೀಯಾಗಿ ಬಂತು ಸೇದಿದ ಬೀಡಿ!
ಬೆಂಗಳೂರಿನ ನಿವಾಸಿಯೊಬ್ಬರು ಜೊಮ್ಯಾಟೊ ಮೂಲಕ ಅರ್ಡರ್ ಮಾಡಿದ ಪಾವ್ ಭಾಜಿಯಲ್ಲಿ ಸೇದಿದ ಬೀಡಿ ಪತ್ತೆಯಾಗಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ್ ನೈರ್ಮಲ್ಯ ಹಾಗೂ ಆಹಾರ ಸುರಕ್ಷತೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಟ್ರಾಫಿಕ್ ಕಿರಿಕಿರಿ, ಆಫೀಸ್ ಕೆಲಸದ ನಡುವೆ ಅಡುಗೆ ಮಾಡಲು ಸಮಯವಿಲ್ಲದೆ ಆನ್‌ಲೈನ್ ಆಪ್‌ಗಳ ಮೂಲಕ ಫುಡ್ ಆರ್ಡರ್ (Bengaluru News) ಮಾಡುವುದು ಸಿಲಿಕಾನ್ ಸಿಟಿ ಜನರಿಗೆ ದಿನನಿತ್ಯದ ಅನಿವಾರ್ಯವಾಗಿದೆ. ಆದರೆ ಆನ್‌ಲೈನಲ್ಲಿ ಸ್ವಾದಿಷ್ಟವಾಗಿ ಕಾಣುವ ಈ ಆಹಾರಗಳು ಎಷ್ಟು ಸುರಕ್ಷಿತ ಎಂಬ ಆತಂಕವನ್ನು ಇತ್ತೀಚಿನ ಘಟನೆಯೊಂದು ಮತ್ತೆ ಮುನ್ನೆಲೆಗೆ ತಂದಿದೆ. ನಗರದ ನಿವಾಸಿ ಪ್ರಿಯಮ್ ತಹಾಬಿಲ್ದಾರ ಎಂಬ ವ್ಯಕ್ತಿ ಪ್ರಸಿದ್ಧ ಫುಡ್ ಡೆಲಿವರಿ ಆಪ್ ಜೊಮ್ಯಾಟೊ ಮೂಲಕ ಪಾವ್ ಭಾಜಿ ಆರ್ಡರ್ ಮಾಡಿದ್ದಾರೆ. ಡೆಲಿವರಿಯಾದ ಆಹಾರದ ಪಾರ್ಸೆಲ್ ತರೆದು (Viral Video) ನೋಡಿದಾಗ ಅವರಿಗಿ ಶಾಕ್ ಕಾದಿತ್ತು. ಪಾವ್ ಭಾಜಿ ಒಳಗಡೆ ಅರ್ಧ ಸೇದಿ ಉಳಿದಿದ್ದ ಬೀಡಿಯ ತುಂಡು ಇಡಲಾಗಿತ್ತು. ಇದರಿಂದ ದಿಗ್ಭ್ರಮೆಗೊಂಡ ಗ್ರಾಹಕ ತಕ್ಷಣವೇ ಅದರ ಫೋಟೋ ಮತ್ತು ವೀಡಿಯೋ ತೆಗೆದು ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ordered pav bhaji on @zomato and got a beedi for free 🫶 it was half smoked though
— Priyam (@priii_io) August 27, 2026
not the kind of freebie I’d have liked to be fair pic.twitter.com/DYqhc13KbS
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಅಸಹ್ಯಕರ ಅನುಭವದ ಬಗ್ಗೆ ಪ್ರಿಯಮ್ ತಹಾಬಿಲ್ದಾರ್ ತಮ್ಮ ಪೋಸ್ಟಟ್‌ನಲ್ಲಿ ಬರೆದುಕೊಂಡಿದ್ದು, ‘ಜೊಮ್ಯಾಟೊ ಮುಲಕ ಪಾವ್ ಭಾಜಿ ಆರ್ಡರ್ ಮಾಡಿದ್ದೆ, ನನಗೆ ಉಚಿತವಾಗಿ ಬೀಡಿ ಸಿಕ್ಕಿದೆ. ಅದೂ ಸಂಪೂರ್ಣವಾಗಿ ಸೇದಿದ ಬಿಡಿ. ಜೊಮ್ಯಾಟೊದಿಂದ ಈ ಆಫರ್ ನಾನು ನೀರಿಕ್ಷಿಸಿರಲಿಲ್ಲಾ ನೀವೆ ನೋಡಿ ಜೊಮ್ಯಾಟೊ ಕೇರ್ ಹೇಳಿಕೆಯನ್ನು’ ಎಂದು ತಮ್ಮ ಪೋಸ್ಟ್ನಲ್ಲಿ ಅಮಾಧಾನ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರ ಈ ಪೋಸ್ಟ್‌ಗೆ ‘ಇದು ಪಾವ್ ಭಾಜಿ ಅಲ್ಲ, ಸ್ಮೋಕಿ ಫ್ಲೇವರ್ ಪಾವ್ ಭಾಜಿ’ ಎಂದು ವ್ಯಂಗ್ಯವಾಡಿದ್ದರೆ ಇನ್ನು ಕೆಲವರು ‘ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದೇ ಅಪಾಯಕಾರಿ ಆಗುತ್ತಿದೆ’ ಎಂದು ಹೇಳಿದ್ದಾರೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ತಕ್ಷಣವೇ ಸಂಬಂಧಪಟ್ಟ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅದರ ಲೈಸೆನ್ಸ್ ರದ್ದುಪಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಜೊಮ್ಯಾಟೋದಲ್ಲಿ ಡೆಲಿವರಿ ಸಿಗದಿದ್ದಾಗ ಹಸಿದಿದ್ದ ಮಹಿಳೆಗೆ ಆಹಾರ ಕಳುಹಿಸಿ ಮಾನವೀಯತೆ ತೋರಿದ ಹೋಟೆಲ್ ಮಾಲೀಕ!
ಜೊಮ್ಯಾಟೊನಿಂದ 100 ರೂ ಕೂಪನ್ ಆಫರ್!
ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜೊಮ್ಯಾಟೊ ಸಂಸ್ಥೆಯು ಪ್ರಿಯಮ್ ಅವರನ್ನು ಸಂಪರ್ಕಿಸಿದೆ. ಆಗಿರುವ ಲೋಪಕ್ಕೆ ಕ್ರಮ ಕೈಗೊಳ್ಳುವ ಬದಲು, ಮುಂದಿನ ಆರ್ಡರ್‌ಗೆ ಪ್ರಿಯಮ್ ಅವರಿಗೆ 100 ರೂ ಕೊಡುಗೆ ಕೂಪನ್ ನೀಡಿದೆ. ಇದು ಗ್ರಾಹಕರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಆಹಾರ ಡೆಲಿವರಿ ಆಪ್‌ಗಳಲ್ಲಿ ಪ್ರಾಣಿಗಳ ಅಂಗಾಗಗಳು, ಕೀಟಗಳು ಹಾಗೂ ಅನಗತ್ಯ ವಸ್ತುಗಳು ಸಿಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರಿನ ಈ ಘಟನೆ ಸಾರ್ವಜನಿಕರಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಮತ್ತಷ್ಟು ಆತಂಕ ಮೂಡಿಸಿದೆ.