ರಸ್ತೆ ಸೌಲಭ್ಯವಿಲ್ಲದೆ ತುಂಬಿ ಹರಿಯುವ ನದಿಯಲ್ಲೇ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು; ವಿಡಿಯೋ ನೋಡಿ
Viral Video: ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕೇರಾಮೇರಿ ಮಂಡಲದ ಕೊಲಂ ಗೂಡಾ ಎಂಬ ಬುಡಕಟ್ಟು ಗ್ರಾಮದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ಘಟನೆಯೊಂದು ನಡೆದಿದೆ. ಸರಿಯಾದ ರಸ್ತೆ ಸೌಲಭ್ಯ ಇಲ್ಲದೆ ಆಂಬುಲೆನ್ಸ್ ಬರಲು ಸಾಧ್ಯವಾಗದಿದ್ದಾಗ, ಗ್ರಾಮಸ್ಥರು ಬಿದಿರು ಮತ್ತು ಬಟ್ಟೆಯಿಂದ ತಯಾರಿಸಿದ ಸಾಂಪ್ರದಾಯಿಕ 'ಡೋಲಿ' ಬಳಸಿ ಹರಿಯುತ್ತಿದ್ದ ಹಳ್ಳದಲ್ಲಿ ನಡೆದುಕೊಂಡೇ ಆಕೆಯನ್ನು ಸಾಗಿಸಿದ್ದಾರೆ. ಈ ಘಟನೆ ಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗರ್ಭಿಣಿ ಮಹಿಳೆಯನ್ನು ನದಿಯ ಮದ್ಯೆಯೇ ಹೊತ್ತೊಯ್ದ ಸ್ಥಳೀಯರು -
ತೆಲಂಗಾಣ,ಆ.16: ಇಂದು ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯದ ಕೊರತೆ ಹೆಚ್ಚುತ್ತಿದೆ. ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಸಾರಿಗೆ ಸೌಲಭ್ಯದಿಂದ ವಂಚಿತರಾದ ಅನೇಕ ಜನರಿದ್ದಾರೆ. ಇದೀಗ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯ ಕೇರಾಮೇರಿ ಮಂಡಲದ ಕೊಲಂ ಗೂಡಾ ಎಂಬ ಬುಡಕಟ್ಟು ಗ್ರಾಮದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗಲು ಹರ ಸಾಹಸ ಪಟ್ಟ ಘಟನೆಯೊಂದು ನಡೆದಿದೆ. ಸರಿಯಾದ ರಸ್ತೆ ಸೌಲಭ್ಯ ಇಲ್ಲದೆ ಆಂಬುಲೆನ್ಸ್ ಬರಲು ಸಾಧ್ಯವಾಗದಿದ್ದಾಗ, ಗ್ರಾಮಸ್ಥರು ಬಿದಿರು ಮತ್ತು ಬಟ್ಟೆಯಿಂದ ತಯಾರಿಸಿದ ಸಾಂಪ್ರದಾಯಿಕ 'ಡೋಲಿ' ಬಳಸಿ ಹರಿಯುತ್ತಿದ್ದ ಹಳ್ಳದಲ್ಲಿ ನಡೆದುಕೊಂಡೇ ಆಕೆಯನ್ನು ಸಾಗಿಸಿದ್ದಾರೆ. ಈ ಘಟನೆ ಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.
ಕೊಡಪ ರಾಮೇಶ್ವರಿ ಎಂದು ಗುರುತಿಸಲ್ಪಟ್ಟ ಗರ್ಭಿಣಿ ಮಹಿಳೆಗೆ ತುರ್ತು ವೈದ್ಯಕೀಯದ ಅಗತ್ಯವಿತ್ತು. ಹೀಗಾಗಿ ಆಕೆಯ ಕುಟುಂಬ ಮತ್ತು ಇತರ ನಿವಾಸಿಗಳು ಸ್ಥಳೀಯವಾಗಿ ಡೋಲಿ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಸ್ಟ್ರೆಚರ್ ತಯಾರಿಸಿ ಉಕ್ಕಿ ಹರಿಯುವ ಹೊಳೆಯಲ್ಲಿ ಕರೆದೊಯ್ದಿದ್ದಾರೆ.
ವಿಡಿಯೋ ನೋಡಿ:
Telangana: Pregnant Woman Carried Across Raging Stream
— Gummalla Lakshmana (@GUMMALLALAKSHM3) August 13, 2026
In Komuram Bheem Asifabad district seven-month pregnant woman with severe stomach pain was carried on a stretcher across the flooded Peddavagu 2 men to reach a hospital. Villagers urge the government build bridges urgently pic.twitter.com/BHJdn3BxND
ಭಾರಿ ಮಳೆಯಿಂದಾಗಿ ಇಲ್ಲಿನ ರಸ್ತೆಯ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ಏಳು ತಿಂಗಳ ಗರ್ಭಿಣಿ ಮಹಿಳೆಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯ ಎದುರಾಯಿತು. ರಸ್ತೆಯತ್ತ ಅಂಬುಲೆನ್ಸ್ ಬರಲು ಸಾಧ್ಯ ಆಗದೆ ಇದ್ದಾಗ ಗ್ರಾಮಸ್ಥರು ಬಿದಿರು ಮತ್ತು ಬಟ್ಟೆಯಿಂದ ತಯಾರು ಮಾಡಿದ ಡೋಲಿ ಬಳಸಿದ್ದಾರೆ. ತೀವ್ರವಾಗಿ ನದಿಯಲ್ಲಿ ನೀರು ಹರಿಯುತ್ತಿದ್ದರೂ ಹಳ್ಳದಲ್ಲಿ ನಡೆದುಕೊಂಡು ಹೋಗಿಯೆ ಅವರನ್ನು ಸಾಗಿಸಿದ್ದಾರೆ.
Viral Video: ಹುಚ್ಚು ಪ್ರೀತಿ! ರೈಲು ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ
ವೇಗವಾಗಿ ಸ್ಟ್ರೆಚರ್ ಅನ್ನು ಸಾಗಿಸಲು ಹಲವಾರು ಗ್ರಾಮಸ್ಥರು ಒಟ್ಟಾಗಿ ಕೆಲಸ ಮಾಡಿದರು. ಬಳಿಕ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಚಲನೆ ಸ್ಥಗಿತಗೊಂಡಿರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗಾಗಿ ಆಸಿಫಾಬಾದ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲು ತಿಳಿಸಿದ್ದಾರೆ. ಸದ್ಯ ಈ ಘಟನೆಯು ಮಳೆಗಾಲದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ತೊಂದರೆ ಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ಸೂಕ್ತ ರಸ್ತೆ ಸಂಪರ್ಕವಿಲ್ಲದೆ ಆಸ್ಪತ್ರೆ ತಲುಪುವುದು ವಿಳಂಬವಾಗಿ, ಗರ್ಭಿಣಿಯರು ಹಾಗೂ ರೋಗಿಗಳ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಕಳಪೆ ರಸ್ತೆ, ನೀರಿನ ಕೊರತೆ ಹೀಗೆ ಮೂಲಭೂತ ಸೌಲಭ್ಯಗಳಿಂದ ಇಲ್ಲಿನ ಜನ ಸಂಪೂರ್ಣ ವಂಚಿತರಾಗಿದ್ದಾರೆ.