ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

400 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಸೋಶಿಯಲ್ ಮೀಡಿಯಾ ತಾರೆ ಇದೀಗ ಗರ್ಭಿಣಿ!

ಖ್ಯಾತ ಅಡಲ್ಟ್ ಸೋಶಿಯಲ್ ಮೀಡಿಯಾ ತಾರೆ ಬೋನಿ ಬ್ಲೂ (ಟಿಯಾ ಎಮ್ಮಾ ಬಿಲಿಂಗರ್) ಇತ್ತೀಚೆಗೆ ತಾನು ಗರ್ಭಿಣಿಯಾಗಿರುವುದಾಗಿ ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಸುಮಾರು 400 ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದ ಬಳಿಕ ಗರ್ಭಧಾರಣೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ನಾನು ಗರ್ಭಿಣಿ..!; ಚರ್ಚೆಗೀಡು ಮಾಡಿದ  ಬೋನಿ ಬ್ಲೂ ಹೇಳಿಕೆ

ಬೋನಿ ಬ್ಲೂ -

Profile
Sushmitha Jain Feb 25, 2026 1:12 PM

ಖ್ಯಾತ ಅಡಾಲ್ಟ್ ಸೋಶಿಯಲ್ ಮೀಡಿಯಾ ತಾರೆ (Adult Social Media Star) ಮತ್ತು ಅಡಲ್ಟ್ ಕಂಟೆಂಟ್ ಕ್ರಿಯೇಟರ್ (adult content creator) ಆಗಿರುವ 26 ವರ್ಷದ ಬೋನಿ ಬ್ಲೂ (Bonnie Blue) ಎಂದೇ ಖ್ಯಾತರಾಗಿರುವ ಟಿಯಾ ಎಮ್ಮಾ ಬಿಲಿಂಗರ್ (Tia Emma Billinger), ಇತ್ತೀಚೆಗೆ ತಮ್ಮ ಅತ್ಯಂತ ವಿವಾದಾತ್ಮಕ ಹೇಳಿಕೆಯ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಸುಮಾರು 400 ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ (unprotected Sex) ಬೆಳೆಸಿದ ಕೇವಲ ಎರಡು ವಾರಗಳ ನಂತರ ತಾನು ಗರ್ಭಿಣಿಯಾಗಿದ್ದೇನೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಗರ್ಭಧಾರಣೆಯ ವಿಡಿಯೋ ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್

ಬೋನಿ ಇತ್ತೀಚೆಗೆ ಹಂಚಿಕೊಂಡ 'ಅವಳ ಜೀವನದಲ್ಲಿ ಒಂದು ದಿನ (day in her life) ವಿಡಿಯೋದಲ್ಲಿ, ತನಗೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಕಾಡುತ್ತಿದೆ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ಅವರು ಪ್ರೆಗ್ನೆನ್ಸಿ ಟೆಸ್ಟ್ (pregnancy test,) ಮಾಡಿಕೊಳ್ಳುತ್ತಿರುವುದು ಕಂಡುಬಂದಿದ್ದು, ಅದರ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರು ಆಸ್ಪತ್ರೆಗೆ ತೆರಳಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (ultrasound scaning) ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನೂ ಹಂಚಿಕೊಂಡಿದ್ದಾರೆ. ಸ್ಕ್ಯಾನಿಂಗ್ ವೇಳೆ ವೈದ್ಯರು "ಒಂದು ಮಗು ಇದೆ" ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಈ ಸುದ್ದಿಯಿಂದ ತಾನು ತುಂಬಾ ಸಂತೋಷವಾಗಿದ್ದೇನೆ ಎಂದು ಬೋನಿ ಹೇಳಿದ್ದಾರೆ.

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ನೈಸರ್ಗಿಕ ಗರ್ಭಧಾರಣೆ ಸಾಧ್ಯವಿಲ್ಲ ಎಂದಿದ್ದ ಬೋನಿ ಬ್ಲೂ

ಕುತೂಹಲಕಾರಿ ವಿಷಯವೆಂದರೆ, ಈ ಹಿಂದೆ ಬೋನಿ ತಮಗೆ ಗಂಭೀರವಾದ ಸಂತಾನೋತ್ಪತ್ತಿ ಸಮಸ್ಯೆಗಳಿವೆ ಎಂದು ಹೇಳಿಕೊಂಡಿದ್ದರು. ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಿಲ್ಲದ ಕಾರಣ ಐವಿಎಫ್ (IVF) ಚಿಕಿತ್ಸೆಯ ಮೊರೆ ಹೋಗಬೇಕಾಗಬಹುದು ಎಂದು ಅವರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. 2025 ರಲ್ಲಿಯೂ ಸಹ ಇವರ ಗರ್ಭಧಾರಣೆಯ ಬಗ್ಗೆ ವದಂತಿಗಳು ಹರಡಿದ್ದವು, ಆದರೆ ಆಗ ಅವರು ಅದನ್ನು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ತಳ್ಳಿಹಾಕಿದ್ದರು.

ವೈಯಕ್ತಿಕ ಮತ್ತು ವೃತ್ತಿ ಜೀವನ

ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ಶೈರ್ ಮೂಲದ ಬೋನಿ, ಮೊದಲು ನೇಮಕಾತಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ಅಡಾಲ್ಟ್ ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿ ಭಾರಿ ಜನಪ್ರಿಯತೆ ಗಳಿಸಿದರು. 2022 ರಲ್ಲಿ ಆಲಿವರ್ ಡೇವಿಡ್ಸನ್ ಅವರನ್ನು ವಿವಾಹವಾಗಿದ್ದ ಇವರು, ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ 2023 ರಲ್ಲಿ ಬೇರ್ಪಟ್ಟರು.

ಸದ್ಯಕ್ಕೆ ಈ ಗರ್ಭಧಾರಣೆಯ ಸುದ್ದಿ ನಿಜವೋ ಅಥವಾ ಕೇವಲ ಪ್ರಚಾರಕ್ಕಾಗಿ (Publicity Stunt) ಮಾಡಿದ ವಿಡಿಯೋವೋ ಎಂಬ ಗೊಂದಲ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.