ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮದುವೆ ಮಂಟಪದಲ್ಲೇ ಮುತ್ತಿನ ಮಳೆಗೆರೆದ ವಧು-ವರರು: ಅವಸರವೇ ಅಪಘಾತಕ್ಕೆ ಕಾರಣ ಎಂದ ನೆಟ್ಟಿಗರು

Viral Video: ಬಂಗಾಳಿ ನವಜೋಡಿಯೊಂದು ಮದುವೆ ಮಂಟಪದಲ್ಲೇ ಮುತ್ತಿಕ್ಕಿರುವ ವಿಡಿಯೊ ವೈರಲ್ ಆಗಿದ್ದು, ನೋಡುಗರಿಗೆ ಮುಜುಗರ ಉಂಟು ಮಾಡಿದೆ.‌ ನವಜೋಡಿ 32 ಸೆಕೆಂಡುಗಳ ಕಾಲ ಚುಂಬಿಸಿದೆ. ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.

ಮಂಟಪದಲ್ಲಿಯೇ ವಧು-ವರರ ಚುಂಬನ: ವಿಡಿಯೊ ವೈರಲ್

ಮದುವೆ ಮಂಟಪದಲ್ಲಿ ವಧು- ವರರ ಮುತ್ತಿನ ಸುರಿಮಳೆ -

Profile
Pushpa Kumari Mar 15, 2026 7:09 PM

ನವದೆಹಲಿ, ಮಾ. 15: ಇತ್ತೀಚೆಗೆ ಮದುವೆ ಗ್ರ್ಯಾಂಡ್ ಆಗಿ ಆಯೋಜಿಸುವುದು ಒಂದು ಟ್ರೆಂಡ್ ಆಗಿದೆ. ಕೇವಲ ಅದ್ದೂರಿತನ ಅಲ್ಲದೆ ದಂಪತಿಯ ಫೋಟೊ ಶೂಟ್, ವಧು- ವರರ ನೃತ್ಯ ಹೀಗೆ ನಾನಾ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಇದೀಗ ಬಂಗಾಳಿ ನವ ಜೋಡಿಯೊಂದು ಮದುವೆ ಮಂಟಪದಲ್ಲೇ ಮುತ್ತಿಕ್ಕಿರುವ ವಿಡಿಯೊವೊಂದು ವೈರಲ್ ಆಗಿದ್ದು (Viral Video) ನೋಡುಗರಿಗೆ ಮುಜುಗರ ಉಂಟು ಮಾಡಿದೆ.‌ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಕಿಡಿಕಾರಿದ್ದಾರೆ.

ಬಂಗಾಳಿಯ ನವಜೋಡಿಯೊಂದು 32 ಸೆಕೆಂಡುಗಳ ಕಾಲ ಚುಂಬಿಸುತ್ತಿರುವ ದೃಶ್ಯ ಕಂಡು ಬಂದಿದೆ. ಗುಲಾಬಿ ದಳಗಳ ನಡುವೆ ವಧು-ವರರು ಮಂಟಪದಲ್ಲಿ ನಡೆದುಕೊಂಡು ಬರುತ್ತಿರುವುದು ಕಾಣಬಹುದು. ವರನು ಬಿಳಿ ಸ್ಕಾರ್ಫ್‌ನೊಂದಿಗೆ ಕೆಂಪು ಕುರ್ತಾ ಧರಿಸಿದ್ದರೆ ವಧು ಕೆಂಪು ಸೀರೆ ಧರಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ವಿಡಿಯೊ ನೋಡಿ:



ಮದುವೆಯ ವಿಧಿ- ವಿಧಾನದ ಭಾಗವಾಗಿ ಪಕ್ಕದಲ್ಲೇ ಹೋಮ ಪೂಜೆ ನಡೆಯುತ್ತಿದ್ದರೂ ದಂಪತಿ ತುಟಿಗೆ ತುಟಿ ಒತ್ತಿದೆ. ದಂಪತಿಯ 32 ಸೆಕೆಂಡುಗಳ ಕಾಲ ಚುಂಬಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಹಲವರು ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದು ಇದು ಮದುವೆಯೋ ಅಥವಾ ರೊಮ್ಯಾನ್ಸ್ ಸೆಟ್ಟೇ? ಎಂದು ಕಿಡಿಕಾರಿದ್ದಾರೆ. ಪವಿತ್ರವಾದ ಅಗ್ನಿ ದೇವರ ಮುಂದೆ ನಿಂತು ಇಂತಹ ಅಸಭ್ಯ ವರ್ತನೆ ಸರಿಯಾಲ್ಲ ಎಂದು ಕೆಲವರು ಕಿಡಿಕಾರಿದ್ದಾರೆ.

ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ಈ ವಿಡಿಯೊ ಪೋಸ್ಟ್ ಮಾಡಿದ 24 ಗಂಟೆಗಳ ಕಡಿಮೆ ಅವಧಿಯಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಪಾಶ್ಚಿಮಾತ್ಯ ವಿವಾಹಗಳು ಹೀಗೆಯೇ ಇರುತ್ತವೆ. ಅವರು ಪ್ರೀತಿಯನ್ನು ತೋರಿಸಲು ಹೀಗೆ ಮಾಡುತ್ತಾರೆ ಎಂದು ಕೆಲವರು ವಧು- ವರರ ಪರವಾಗಿ ಮಾತನಾಡಿದ್ದಾರೆ. ಬಳಕೆದಾರರೊಬ್ಬರು ಏನು ತಪ್ಪು ಮಾಡಿದರು? ಅವರು ವಧು ವರರಲ್ಲವೇ? ಯಾವ ಶಾಸ್ತ್ರದಲ್ಲಿ ದಂಪತಿ ಅಗ್ನಿದೇವನ ಮುಂದೆ ಚುಂಬಿಸಬಾರದು ಎಂದು ಬರೆಯಲಾಗಿದೆ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇಂತಹ ಅಸಭ್ಯ ವರ್ತನೆ ಸರಿಯಲ್ಲ ಎಂದು ಬರೆದಿದ್ದಾರೆ.