Viral Video: ಕಾರ್ ಬಾನೆಟ್‌ನಲ್ಲಿ ಅಕ್ವೇರಿಯಂ- ಒಳಗಿದ್ದ ಮೀನುಗಳ ಸ್ಥಿತಿಯನ್ನೊಮ್ಮೆ ನೋಡಿ; ಶಾಕಿಂಗ್ ವಿಡಿಯೊ ಇಲ್ಲಿದೆ
Car bonnet turned into aquarium: ಚೀನಾದಲ್ಲಿ ವ್ಯಕ್ತಿಯೊಬ್ಬ ತಮ್ಮ ಕಾರುಗಳನ್ನು ಮಿನಿ ಅಕ್ವೇರಿಯಂನಂತೆ ಮಾರ್ಪಾಡು ಮಾಡಿದ್ದಾರೆ. ಕಾರು ಪ್ರಿಯನಾಗಿರುವ ಈ ವ್ಯಕ್ತಿ ತಮ್ಮ ಕಾರುಗಳ ಮುಂಭಾಗ ಮಿನಿ ಅಕ್ವೇರಿಯಂಗಳಾಗಿ ಪರಿವರ್ತಿಸುತ್ತಿದ್ದಾರೆ. ಬಾನೆಟ್ ಮೇಲೆ ಪ್ಲಾಸ್ಟಿಕ್ ಪದರವನ್ನು ಇರಿಸಿ, ಅದನ್ನು ಸುರಕ್ಷಿತವಾಗಿ ಮುಚ್ಚಲಾಗಿದೆ. ಅದರೊಳಗೆ ಜೀವಂತ ಮೀನುಗಳನ್ನಿಡಲಾಗಿದೆ.


ಬೀಜಿಂಗ್: ಬಹಳಷ್ಟು ಯುವಕರಿಗೆ ಕಾರು ಕ್ರೇಜ್ ಇರುತ್ತದೆ. ಅದರಲ್ಲೂ ಕಾರನ್ನು ವಿಭಿನ್ನವಾಗಿ ಕಾರು ಮಾರ್ಪಾಡು ಮಾಡುತ್ತಿರುತ್ತಾರೆ. ಕಾರು ಮಾರ್ಪಾಡುಗಳು ಬಹಳ ಹಿಂದಿನಿಂದಲೂ ಜನಪ್ರಿಯ ಪ್ರವೃತ್ತಿಯಾಗಿದ್ದು, ಜನರು ತಮ್ಮ ವಾಹನಗಳನ್ನು ವಿಭಿನ್ನವಾಗಿ ಕಾಣುವಂತೆ ಮಾಡಲು ಹಲವು ಮಾರ್ಗಗಳನ್ನು ನಿರಂತರವಾಗಿ ಅನ್ವೇಷಿಸುತ್ತಿದ್ದಾರೆ. ಆದರೆ, ಚೀನಾದಲ್ಲಿ ವ್ಯಕ್ತಿಯೊಬ್ಬ ತಮ್ಮ ಕಾರುಗಳನ್ನು ಮಿನಿ ಅಕ್ವೇರಿಯಂನಂತೆ ಮಾರ್ಪಾಡು ಮಾಡಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ಕಾರು ಪ್ರಿಯನಾಗಿರುವ ಈ ವ್ಯಕ್ತಿ ತಮ್ಮ ಕಾರುಗಳ ಮುಂಭಾಗ ಮಿನಿ ಅಕ್ವೇರಿಯಂಗಳಾಗಿ ಪರಿವರ್ತಿಸುತ್ತಿದ್ದಾರೆ. ಬಾನೆಟ್ ಮೇಲೆ ಪ್ಲಾಸ್ಟಿಕ್ ಪದರವನ್ನು ಇರಿಸಿ, ಅದನ್ನು ಸುರಕ್ಷಿತವಾಗಿ ಮುಚ್ಚಲಾಗಿದೆ. ಅದರೊಳಗೆ ಜೀವಂತ ಮೀನುಗಳನ್ನಿಡಲಾಗಿದೆ. ಇದು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ. ಕೆಲವರು ಇದನ್ನು ಎಐ ವಿಡಿಯೊ ಎಂದು ಕರೆದಿದ್ದಾರೆ.
ಈ ಪ್ರವೃತ್ತಿ ಹೇಗೆ ಆರಂಭವಾಯಿತು?
ಲಿಯು ಎಂಬಾತ ಈ ರೀತಿ ವಿಭಿನ್ನವಾಗಿ ಕಾರು ಮಾರ್ಪಾಡು ಮಾಡಿದ್ದಾನೆ. ಒಂದು ದಿನ ಮೀನುಗಾರಿಕೆಗೆ ಹೋಗಿ ಬಕೆಟ್ ತರಲು ಮರೆತ ನಂತರ ಈ ಆಲೋಚನೆ ತನಗೆ ಸ್ವಯಂಪ್ರೇರಿತವಾಗಿ ಬಂದಿತು ಎಂದು ವಿವರಿಸಿದ್ದಾನೆ. ತನ್ನ ಕಾರಿನ ಹುಡ್ ಅಡಿಯಲ್ಲಿರುವ ಖಾಲಿ ಜಾಗಕ್ಕೆ ನೀರು ಮತ್ತು ಮೀನನ್ನು ಸುರಿಯಲು ನಿರ್ಧರಿಸಿದ್ದಾನೆ. ಇದು ತನ್ನ ಕಾರಿನ ಮಾರ್ಪಾಡಿಗೆ ಕಾರಣವಾಯಿತು.
ವಿಡಿಯೊ ಇಲ್ಲಿದೆ:
In China they turned a cars hood into a fish tank pic.twitter.com/BtczjNI3mV
— LASHY BILLS (@LASHYBILLS) July 11, 2025
ಅಂದಹಾಗೆ, ಮೀನುಗಳನ್ನು ಕಾರಿನ ಮುಂಭಾಗದೊಳಗೆ ಹಾಕಿದ ಬಳಿಕ ತಾನು ಎಂದಿಗೂ ಕಾರನ್ನು ಓಡಿಸಿಲ್ಲ ಎಂದು ಒತ್ತಿ ಹೇಳಿದ್ದಾನೆ. ಇತರರು ಈ ಸಾಹಸವನ್ನು ಅನುಕರಿಸದಂತೆ ಎಚ್ಚರಿಸಿದ್ದು, ಅದು ಸುರಕ್ಷಿತವಲ್ಲ ಎಂದು ಹೇಳಿಕೊಂಡಿದ್ದಾನೆ. ನೋಡಲು ಇದು ಸುಂದರವಾಗಿ ಕಂಡರೂ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಕ್ರೂರ ಎಂದು ಕರೆದಿದ್ದಾರೆ. ಜೀವಂತ ಮೀನುಗಳನ್ನು ಕಾರಿನಲ್ಲಿ ಈ ರೀತಿ ಅಲಂಕಾರಕ್ಕಿಡುವುದು ಅಮಾನವೀಯ ಎಂದು ಕರೆದಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ, ಬಳಕೆದಾರರೊಬ್ಬರು, ಬಿಸಿಲಿನ ದಿನಗಳಲ್ಲಿ ಮೀನುಗಳು ಬೆಂದು ಹೋಗಬಹುದು. ಅವುಗಳಿದೆ ಉಸಿರುಗಟ್ಟಿದಂತಾಗಿರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಮುಚ್ಚಲ್ಪಟ್ಟ ನೀರಿನಲ್ಲಿ ಮೀನುಗಳು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಬಳಕೆದಾರ ತಿಳಿಸಿದ್ದಾರೆ. ಕೆಲವರು ಇದನ್ನು ಪ್ರಾಣಿ ಹಿಂಸೆ ಎಂದು ಕರೆದರೆ, ಇನ್ನೂ ಕೆಲವರು ವ್ಯಕ್ತಿಯನ್ನು ಹೃದಯಹೀನ ಎಂದು ಜರೆದಿದ್ದಾರೆ. ಇದೊಂದು ಹುಚ್ಚುತನ, ಚೀನಾದಲ್ಲಿ ಮಾತ್ರ ಇಂತಹವುಗಳು ನಡೆಯುತ್ತದೆ. ಮೀನುಗಳಿಗೆ ಯಾವುದೇ ತೊಂದರೆಯಾಗದಿರಲಿ ಎಂದು ಆಶಿಸುತ್ತೇನೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮಹಿಳೆಯಂತೆ ಸೀರೆಯುಟ್ಟು ಪೊಲೀಸ್ ಅಧಿಕಾರಿ ಎದುರು ಅಶ್ಲೀಲ ನೃತ್ಯ- ಏನಿದು ವೈರಲ್ ವಿಡಿಯೊ?
ಸದ್ಯ, ಲಿಯು ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿರುವ ಕಾರ್ ಡಿಟೈಲಿಂಗ್ ಕೇಂದ್ರವೊಂದು ಈ ಕಲ್ಪನೆಯನ್ನು ನಕಲಿಸಲು ನಿರ್ಧರಿಸಿತು. ಲಿಯು ಮಾಡಿದಂತೆಯೇ ಅವರು ಕಾರಿನ ಹುಡ್‌ನ ಮೇಲೆ ಮುಚ್ಚಿದ ಪ್ಲಾಸ್ಟಿಕ್ ಕವರ್ ಅಡಿಯಲ್ಲಿ ಜೀವಂತ ಮೀನುಗಳನ್ನು ಇರಿಸಿದರು. ಅವರು ಇದನ್ನು ಮೋಜಿಗಾಗಿ ಅಥವಾ ಗಮನ ಸೆಳೆಯಲು ಮಾಡಿರಬಹುದು. ಆದರೆ ಈ ವಿಡಿಯೊ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಕಿಡಿಕಾರಿದ್ದಾರೆ.
ವಿಡಿಯೊ ವೀಕ್ಷಿಸಿ:
ಹಲವರು ಈ ಕೃತ್ಯವನ್ನು ಕ್ರೂರ ಎಂದು ಕರೆಯುತ್ತಿದ್ದು, ಕಾರು ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ. ಇಂತಹ ಸಾಹಸಗಳಿಗೆ ಜೀವಂತ ಪ್ರಾಣಿಗಳನ್ನು ಬಳಸುವುದು ತಪ್ಪು ಮತ್ತು ಅದನ್ನು ಅನುಮತಿಸಬಾರದು ಎಂದು ಹಲವರು ಹೇಳಿದ್ದಾರೆ.