ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇವಲ 149 ರೂ ಕೊಟ್ಟರೆ ಸಾಕು, ನಿಮ್ಮ ಶಾಪಿಂಗ್ ಬ್ಯಾಗ್ ಹೊರಲು ಕ್ಯಾರಿಮ್ಯಾನ್ ರೆಡಿ! ಏನಿದು ದೆಹಲಿಯ ಹೊಸ ಸೇವೆ!

Viral News: ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಡ್ರೆಸ್ ಖರೀದಿಸಲು ಹೆಚ್ಚಿನವರು ಆಸಕ್ತಿ ವಹಿ ಸುತ್ತಾರೆ.. ಶಾಪಿಂಗ್ ಏನೋ ಖುಷಿ...ಆದ್ರೆ ಭಾರವಾದ ಬ್ಯಾಗ್ ಕೈಯಲ್ಲಿ ಹಿಡಿದು ಓಡಾಡುವುದು ಕಷ್ಟ..ಇದಕ್ಕಾಗಿ ದೆಹಲಿಯಲ್ಲಿ ಸುಲಭವಾದ ಪರಿಹಾರ ಕ್ರಮವೊಂದನ್ನು ಜಾರಿ ಮಾಡಲಾಗಿದೆ. ದೆಹಲಿಯ ಪ್ರಸಿದ್ಧ ಲಜಪತ್ ನಗರ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನೆರವಾಗಲು ‘ಕ್ಯಾರಿಮ್ಯಾನ್’ ಹೊಸ ಸೇವೆಯನ್ನು ಪರಿಚಯಿಸಲಾಗಿದೆ.

ದೆಹಲಿಯ ಶಾಪಿಂಗ್ ಮಾಲ್‌ನಲ್ಲಿ ಸಹಾಯ ಮಾಡಲು ಕ್ಯಾರಿಮ್ಯಾನ್

ಶಾಪಿಂಗ್ ಮಾಲ್ ನಲ್ಲಿ ಸಹಾಯ ಮಾಡಲು ಕ್ಯಾರಿಮ್ಯಾನ್ -

Profile
Pushpa Kumari May 25, 2026 1:55 PM

ನವದೆಹಲಿ,ಮೇ 25:ಇತ್ತೀಚಿನ ಆಧುನಿಕ ಯುಗದಲ್ಲಿ ಶಾಪಿಂಗ್ ಮಾಡುವುದು ಎಲ್ಲರಿಗೂ ಒಂದು ಕ್ರೇಜ್.‌..ಮಾರುಕಟ್ಟೆಗೆ ಬಂದ ಹೊಸ ಡಿಸೈನ್ ಡ್ರೆಸ್ ಖರೀದಿಸಲು ಹೆಚ್ಚಿನವರು ಆಸಕ್ತಿ ವಹಿಸುತ್ತಾರೆ.. ಶಾಪಿಂಗ್ ಏನೋ ಖುಷಿ...ಆದ್ರೆ ಭಾರವಾದ ಬ್ಯಾಗ್ ಕೈಯಲ್ಲಿ ಹಿಡಿದು ಓಡಾಡುವುದು ಕಷ್ಟ.. ಇದಕ್ಕಾಗಿ ದೆಹಲಿಯಲ್ಲಿ ಸುಲಭವಾದ ಪರಿಹಾರ ಕ್ರಮವೊಂದನ್ನು ಜಾರಿ ಮಾಡಲಾಗಿದೆ. ದೆಹಲಿಯ ಪ್ರಸಿದ್ಧ ಲಜಪತ್ ನಗರ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನೆರವಾಗಲು ‘ಕ್ಯಾರಿಮ್ಯಾನ್’ ಹೊಸ ಸೇವೆಯನ್ನು ಪರಿಚಯಿಸಲಾಗಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ

ದೆಹಲಿಯ ಲಜ್‌ಪತ್ ನಗರ ಮಾರುಕಟ್ಟೆಯು ಭೇಟಿ ನೀಡುವ ಗ್ರಾಹಕರಿಗೆ ಬ್ಯಾಗ್‌ಗಳನ್ನು ಒಯ್ಯಲು ಕ್ಯಾರಿಮ್ಯಾನ್ ಎಂಬ ಯೋಜನೆಯನ್ನು ಪರಿಚಯಿಸಿದೆ. ಗಂಟೆಗೆ ನೀವು ಕೇವಲ 149 ರೂಪಾಯಿ ಪಾವತಿ ಮಾಡಿದರೆ ಸಾಕು, ಸಹಾಯಕರು ನಿಮ್ಮೊಂದಿಗೆ ಬಂದು ಶಾಪಿಂಗ್ ಕೆಲಸಕ್ಕೆ ನೆರವಾಗುತ್ತಾರೆ. ಸದ್ಯ ಈ ವಿಭಿನ್ನ ಸೇವೆಗೆ ನೆಟ್ಟಿಗರು ಫಿದಾ ಆಗಿದ್ದಾರೆ..



ಜನದಟ್ಟಣೆಯ ಮಾರುಕಟ್ಟೆಯಲ್ಲಿ ಭಾರವಾದ ಬ್ಯಾಗ್ ಹಿಡಿದು ಹೋಗುವುದು ಕಷ್ಟಕರ. ಹೀಗಾಗಿ ಈ ಹೊಸ ಸ್ಟಾರ್ಟ್‌ಅಪ್ ಐಡಿಯಾ ಜಾರಿ ಮಾಡಲಾಗಿದೆ. ವೈರಲ್ ಆದ ಪೋಸ್ಟ್ ಪ್ರಕಾರ,ಈ ಸೇವೆಯು ಕೇವಲ ಬ್ಯಾಗ್‌ಗಳನ್ನು ಒಯ್ಯುವುದಕ್ಕಿಂತ ಅದಕ್ಕಿಂತ ಹೆಚ್ಚಿನ ಸೇವೆಯನ್ನು ನೀಡುತ್ತದೆ. ಖರೀದಿದಾರರು ತಮ್ಮ ಮಾರುಕಟ್ಟೆ ಭೇಟಿಯ ಸಮಯದಲ್ಲಿ ಗಂಟೆಗೆ 149 ರೂ.ಗಳಿಗೆ ಒಬ್ಬ ವ್ಯಕ್ತಿಯನ್ನು ನೇಮಿಸಿಕೊಳ್ಳಬಹುದು ಎಂದು ಬಳಕೆದಾರರು ವಿವರಿಸಿದ್ದಾರೆ.

Viral Video: ಏನಿದು ಪವಾಡ?! ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಸಹಾಯಕರು ಶಾಪಿಂಗ್ ಬ್ಯಾಗ್‌ಗಳನ್ನು ಒಯ್ಯಬಹುದು, ಆಹಾರ ಸರತಿ ಸಾಲಿನಲ್ಲಿ ನಿಲ್ಲಬಹುದು, ಗ್ರಾಹಕರನ್ನು ಮೆಟ್ರೋ ನಿಲ್ದಾಣಕ್ಕೆ ಕರೆದೊಯ್ಯಬಹುದು, ಆಸನಗಳನ್ನು ಹುಡುಕಲು ಅವರಿಗೆ ಸಹಾಯ ಮಾಡಬಹುದು,ಅದೇ ರೀತಿ ​ಗ್ರಾಹಕರು ಸುಸ್ತಾದಾಗ ಕೂರಲು ಜಾಗ ಹುಡುಕುವುದು, ಗ್ರಾಹಕರಿಗೆ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡುವುದು ಇತ್ಯಾದಿ.ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಳಕೆದಾರ ರೊಬ್ಬರು ಇದು ಮಾನವ ಸಂಪನ್ಮೂಲಗಳ ಕಳಪೆ ಬಳಕೆಯಂತೆ ಭಾಸವಾಗುತ್ತದೆ.ಮಾನವಶಕ್ತಿಯನ್ನು ತಪ್ಪು ದಿಕ್ಕಿನಲ್ಲಿ ತಳ್ಳುತ್ತಿದೆ ಎಂದು ಬರೆದಿದ್ದಾರೆ. ಕೆಲವರು ಈ ಸೇವೆ ಬಗ್ಗೆ ಮೆಚ್ಚುಗೆ ನೀಡಿದ್ದಾರೆ.