Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ
Viral Video: ಕಾರಿನಲ್ಲಿ ಬಂದ ದಂಪತಿ ತ್ಯಾಜ್ಯವನ್ನು ನದಿಗೆ ಎಸೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವು ಮತ್ತೊಮ್ಮೆ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಪರಿಸರ ಕಾಳಜಿಯ ಹೊಣೆ ತಮ್ಮದಲ್ಲ ಎಂಬಂತೆ ದಂಪತಿ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿದ್ದ ತ್ಯಾಜ್ಯವನ್ನು ನದಿಗೆ ಎಸೆದಿದ್ದಾರೆ.
ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ -
ಕೊಡಗು, ಆ. 24: ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಾಗರಿಕ ಪ್ರಜ್ಞೆಯ ಕೊರತೆ ಕಾಡುತ್ತಿದೆ. ಕಾಮನ್ ಸೆನ್ಸ್ ಕೂಡ ಇಲ್ಲ ಎಂಬಂತೆ ಜನರು ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಾರಿನಲ್ಲಿ ಬಂದ ದಂಪತಿ ತ್ಯಾಜ್ಯವನ್ನು ನದಿಗೆ ಎಸೆದ ಘಟನೆ ನಡೆದಿದೆ. ಈ ದೃಶ್ಯವು (Viral News) ಮತ್ತೊಮ್ಮೆ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಪರಿಸರ ಕಾಳಜಿಯ ಹೊಣೆ ತಮ್ಮದಲ್ಲ ಎಂಬಂತೆ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿದ್ದ ತ್ಯಾಜ್ಯವನ್ನು ದಂಪತಿ ಎಸೆದಿದ್ದಾರೆ. ಕೊಡಗು ಜಿಲ್ಲೆಯ ಮೂರ್ನಾಡ್ ಪಟ್ಟಣದ ಕೊಂಡಂಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪವಿತ್ರ ಕಾವೇರಿ ನದಿಗೆ ತ್ಯಾಜ್ಯ ಎಸೆದಿದ್ದಾರೆ. ದಕ್ಷಿಣ ಭಾರತದ ಅತ್ಯಂತ ಪೂಜ್ಯ ನದಿಗಳಲ್ಲಿ ಒಂದೆಂದು ಪರಿಗಣಿಸಲಾದ ನದಿಗೆ ಕಸವನ್ನು ಎಸೆದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೊ ನೋಡಿ:
#ಕೊಂಡಗೇರಿಯ_ಕಾವೇರಿ_ನದಿಗೆ_ರಾಜಾರೋಷವಾಗಿ_ಕಸ_ಸುರಿಯುತ್ತಿರುವ_ವಿದ್ಯಾವಂತ_ಅನಾಗರಿಕರು. pic.twitter.com/9STj3sN6TK
— Coorg The Kashmir of Karnataka (@Coorgthekashmir) August 21, 2026
ಇದನ್ನು ಗಮನಿಸಿದ ಸ್ಥಳೀಯರು ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಇಂದು ಶಿಕ್ಷಣ ಹೊಂದಿದವರೇ ಇಂತಹ ಕೃತ್ಯ ಎಸಗುವುದು ಬೇಸರದ ಸಂಗತಿ. ಸಾರ್ವಜನಿಕ ಸ್ಥಳ ಮತ್ತು ನದಿಗಳನ್ನು ಕಲುಷಿತಗೊಳಿಸುವ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಭಾರಿ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾವೇರಿ ನದಿಗೆ ಕಸ ಎಸೆದ ವ್ಯಕ್ತಿ:
ಜೀವನದಿ ಕಾವೇರಿಗೆ ಕಸ ಸುರಿದ ವ್ಯಕ್ತಿ. pic.twitter.com/hvSN7YJes7
— Coorg The Kashmir of Karnataka (@Coorgthekashmir) August 22, 2026
ಈ ಬಗ್ಗೆ ಪ್ರತಿಕ್ರಿಯಿಸಿ ನೆಟ್ಟಿಗರೊಬ್ಬರು, ದಂಪತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ದಯವಿಟ್ಟು ಅಗತ್ಯ ಕ್ರಮ ಕೈಗೊಳ್ಳಿʼʼ ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬರು "ಇಂತಹವರಿಂದ ಭಾರತವು ಇತರ ದೇಶಗಳಂತೆ ಸ್ವಚ್ಛವಾಗಿ ಇರಿಸುವುದನ್ನು ನಾವು ಹೇಗೆ ನಿರೀಕ್ಷಿಸಬಹುದು? ಇದು ತಮ್ಮ ಭವಿಷ್ಯದ ಪೀಳಿಗೆಗೆ ದೊಡ್ಡ ಮಾರಕ" ಎಂದಿದ್ದಾರೆ. ಇನ್ನೊಬ್ಬರು, "ಭಾರತವು ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕುʼʼ ಎಂದು ಕಟುವಾಗಿ ಹೇಳಿದ್ದಾರೆ.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!
ಈ ಘಟನೆಯ ವಿಡಿಯೊ ವೈರಲ್ ಆದ ಬಳಿಕ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ನದಿಗೆ ಕಸ ಎಸೆದ ವ್ಯಕ್ತಿಯನ್ನು ಗುರುತಿಸಿ ಠಾಣೆಗೆ ಕರೆಸಿದ್ದಾರೆ ಎಂದು ವರದಿಯಾಗಿದೆ.