ಕಲಬೆರಕೆ ಆಹಾರ: ತನ್ನದೇ ಅಂಗಡಿಯ ಸ್ವೀಟ್ ತಿನ್ನಲು ನಿರಾಕರಿಸಿದ ವ್ಯಾಪಾರಿಯ ವಿಡಿಯೊ ವೈರಲ್
Viral News: ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ವ್ಯಾಪಾರಿಯೊಬ್ಬ ಕಲಬೆರಕೆ ಇರುವ ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಲಕ ತನ್ನದೇ ಅಂಗಡಿಯ ಸ್ವೀಟ್ ತಿನ್ನಲಿ ನಿರಾಕರಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಉತ್ತರ ಪ್ರದೇಶದಲ್ಲಿ ತನ್ನದೇ ಅಂಗಡಿಯ ಸ್ವೀಟ್ ತಿನ್ನಲು ನಿರಾಕರಿಸಿದ ವ್ಯಾಪಾರಿ -
ಲಖನೌ, ಆ. 24: ಇತ್ತೀಚೆಗೆ ಆಹಾರದ ಗುಣಮಟ್ಟವನ್ನು ಪ್ರಶ್ನಿಸುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದೀಗ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಅಂತಹದ್ದೇ ಕಳವಳಕಾರಿ ಘಟನೆಯೊಂದು ನಡೆದಿದ್ದು, ವ್ಯಾಪಾರಿಯೊಬ್ಬ ಕಲಬೆರಕೆ ಇರುವ ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಲಕನಿಗೆ ಅವನದೇ ಅಂಗಡಿಯ ಸಿಹಿ ತಿಂಡಿ ಸೇವಿಸಲು ನಿರಾಕರಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು (Viral News) ಗ್ರಾಹಕರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಈ ಘಟನೆ ನಡೆದಿದೆ. ಆಹಾರ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಈ ಅಂಗಡಿಗೆ ತೆರಳಿ ತಪಾಸಣೆ ನಡೆಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ತಪಾಸಣೆ ನಡೆಸುತ್ತಿದ್ದ ವೇಳೆ ಓರ್ವ ಅಧಿಕಾರಿ ಸಿಹಿತಿಂಡಿಯನ್ನು ತೆಗೆದುಕೊಂಡು ಅಂಗಡಿ ಮಾಲಕನಿಗೆ ನೀಡಿದರು. ಆದರೆ ಅಂಗಡಿ ಮಾಲಕ ಸಿಾದನ್ನು ಸೇವಿಸಲು ನಿರಾಕರಿಸಿದ್ದಾನೆ.
ವಿಡಿಯೊ ನೋಡಿ:
During a food department raid at a sweet shop in Hamirpur, UP, the shop owner reportedly refused to eat a sweet from his own shop when a cop offered it to him. 👀 pic.twitter.com/9IRBIWvRin
— Ghar Ke Kalesh (@gharkekalesh) August 21, 2026
ಈ ತಪಾಸಣೆಯ ನಂತರ, ಅಧಿಕಾರಿಗಳು ಸಿಹಿತಿಂಡಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ. ಅಂಗಡಿಯಲ್ಲಿದ್ದ ಸಂಶಯಾಸ್ಪದ ಹಾಗೂ ಕಳಪೆ ಮಟ್ಟದ ಸಿಹಿ ಪದಾರ್ಥಗಳನ್ನು ತಕ್ಷಣವೇ ಎಸೆಯುವಂತೆ ಆದೇಶ ನೀಡಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!
ನೆಟ್ಟಿಗರೊಬ್ಬರು, ʼʼಕಲಬೆರಕೆಯ ಆಹಾರವನ್ನು ಮಾರಾಟ ಮಾಡುವ ಜನರಿಗೆ ಇದು ಸರಿಯಾದ ಶಿಕ್ಷೆ. ಮಾಲಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಇದೇ ಕಲಬೆರಕೆಯ ಆಹಾರವನ್ನು ತಿನ್ನಿಸಬೇಕುʼʼ ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬರು "ಅಂಗಡಿಯವನಿಗೆ ಮಧುಮೇಹ ಇದ್ದಿರಬೇಕು" ಎಂದು ವ್ಯಂಗ್ಯವಾಡಿದ್ದಾರೆ.