ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರ ಅಪಾಯಕಾರಿ ಸಾಹಸ: ಓರ್ವನ ಹೆಗಲೇರಿ ಕೂತ ಮತ್ತೋರ್ವ
Viral News: ರಸ್ತೆಯಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡುವುದು, ರೈಲ್ವೆ ಬ್ರಿಡ್ಜ್ ಬಳಿ ವಿಡಿಯೊ ಚಿತ್ರೀಕರಣ ಮಾಡುವುದು ಹೀಗೆ ದಿನಕ್ಕೊಂದು ಘಟನೆ ವರದಿಯಾಗುತ್ತಲೇ ಇರುತ್ತದೆ. ಇದೀಗ ಗುಜರಾತ್‌ನ ಅಹಮದಾಬಾದ್‌ನ ಎಲ್ಲಿಸ್ ಬ್ರಿಡ್ಜ್ ಪೊಲೀಸ್ ಠಾಣೆ ಸಮೀಪ ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರು ಅಪಾಯಕಾರಿಯಾಗಿ ಪ್ರಯಾಣಿಸಿದ್ದಾರೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೇ ಬೈಕ್‌ನಲ್ಲಿ ನಾಲ್ವರ ಅಪಾಯಕಾರಿ ಸ್ಟಂಟ್ -
ಗಾಂಧಿನಗರ, ಸೆ. 22: ಇಂದು ರೀಲ್ಸ್‌ಗಾಗಿ ಹುಚ್ಚು ಸಾಹಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರಸ್ತೆಯಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡುವುದು, ರೈಲ್ವೆ ಬ್ರಿಡ್ಜ್ ಬಳಿ ವಿಡಿಯೊ ಚಿತ್ರೀಕರಣ ಮಾಡುವುದು ಹೀಗೆ ದಿನಕ್ಕೊಂದು ಘಟನೆ ವರದಿಯಾಗುತ್ತಲೇ ಇದೆ. ಇದೀಗ ಗುಜರಾತ್‌ನ ಅಹಮದಾಬಾದ್‌ನ ಎಲ್ಲಿಸ್ ಬ್ರಿಡ್ಜ್ ಪೊಲೀಸ್ ಠಾಣೆ ಸಮೀಪ ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರು ಅಪಾಯಕಾರಿಯಾಗಿ ಪ್ರಯಾಣಿಸಿದ್ದಾರೆ. ಈ ಘಟನೆಯೂ (Viral News) ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
10 ಸೆಕೆಂಡ್‌ನ ವಿಡಿಯೊದಲ್ಲಿ ಮೂವರು ಯುವಕರು ಬೈಕ್ ಮೇಲೆ ಕುಳಿತಿರುವುದನ್ನು ನೋಡಬಹುದು. ಈ ಪೈಕಿ ಓರ್ವನ ಭುಜದ ಮೇಲೆ ಇನ್ನೋರ್ವ ಕುಳಿತಿದ್ದಾನೆ. ಇವರು ಯಾವುದೇ ಹೆಲ್ಮೆಟ್ ಅಥವಾ ಇತರ ಸುರಕ್ಷತಾ ಸಾಧನಗಳಿಲ್ಲದೆ ಪ್ರಯಾಣ ಬೆಳೆಸಿದ್ದು, ಇತರ ರಸ್ತೆ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ.
ವಿಡಿಯೊ ನೋಡಿ:
एक बाइक पर 4 युवकों का खतरनाक स्टंट
— zingabad (@zingabad) September 21, 2026
अहमदाबाद में एलिसब्रिज पुलिस स्टेशन के पास चार युवकों के एक ही मोटरसाइकिल पर खतरनाक तरीके से सफर करने का वीडियो सामने आया है. वीडियो में तीन युवक बाइक पर बैठे नजर आ रहे हैं, जबकि चौथा एक युवक के कंधे पर बैठा दिखाई दे रहा है.@AhmedabadPolice… pic.twitter.com/GliLuTS0p8
ಈ ರೀತಿಯ ಬೇಜವಾಬ್ದಾರಿಯ ವರ್ತನೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ವಿಡಿಯೊದಲ್ಲಿ ಬೈಕ್‌ನಲ್ಲಿ ಮೂವರು ಯುವಕರು ಹೆಲ್ಮೆಟ್ ಇಲ್ಲದೆ ಕುಳಿತಿದ್ದರೆ ನಾಲ್ಕನೇ ಯುವಕ ಹಿಂಬದಿ ಸವಾರನ ಹೆಗಲ ಮೇಲೆ ಕುಳಿತು ಪ್ರಯಾಣಿಸುತ್ತಿರುವುದು ಕಂಡುಬಂದಿದೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ
ಈ ಘಟನೆ ಕರ್ತವ್ಯದಲ್ಲಿದ್ದ ಪೊಲೀಸರ ಗಮನಕ್ಕೆ ಬಂದ ತಕ್ಷಣ, ಹಿರಿಯ ಅಧಿಕಾರಿಯ ಮೇರೆಗೆ ಎಲ್ಲಿಸ್‌ಬ್ರಿಡ್ಜ್ ಪೊಲೀಸ್ ಠಾಣೆಯ ಸಿಬ್ಬಂದಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಮೂವರು ಆರೋಪಿಗಳನ್ನು ಅಹಮದಾಬಾದ್‌ನ ಘೀ-ಕಾಂತ ಪ್ರದೇಶದ ನಿವಾಸಿಗಳಾಗಿದ್ದು ಅಶೋಕ್‌ಭಾಯ್ ರಮೇಶ್‌ಭಾಯ್ ಠಾಕೂರ್ (36), ಅಲ್ಕೇಶ್ ಭಾಯ್ ಆಲಿಯಾಸ್ ಹರೀಶ್ ಭಾಯ್ ಕನೋಜಿಯಾ (37) ಮತ್ತು ಮಿತೇಶ್ ಕೇತನ್‌ಭಾಯ್ ಝಲಾ (21) ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.