ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೂಗ ದಂಪತಿಯ ಕಿಚನ್ ಹೌಸ್‌ಗೆ ಧ್ವನಿಯಾದ ಮಗ: ಇಲ್ಲಿದೆ ಹೃದಯಸ್ಪರ್ಶಿ ವಿಡಿಯೊ

Viral Video: ದೌರ್ಲಬ್ಯವನ್ನು ಮೀರಿ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಪಂಜಾಬ್ ದಂಪತಿಯ ವಿಡಿಯೊವೊಂದು ಎಲ್ಲರ ಮನ ಗೆದ್ದಿದ್ದು, ಈ ದೃಶ್ಯ ಅರೆ ಕ್ಷಣದಲ್ಲಿ ಮನಸ್ಸಿಗೆ ತೃಪ್ತಿ ನೀಡುತ್ತದೆ. ಮೊಹಾಲಿಯಲ್ಲಿ ಕಿಚನ್ ಹೌಸ್ ನಡೆಸುತ್ತಿರುವ ಕಿವುಡ ಮತ್ತು ಮೂಕ ದಂಪತಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದು ಇವರ ಈ ಕೆಲಸಕ್ಕೆ ಅವರ ಪುಟ್ಟ ಮಗ ಧ್ವನಿಯಾಗಿ ನಿಂತಿದ್ದಾನೆ. ಮಗುವಿನ ತಂದೆ- ತಾಯಿ ತಯಾರಿಸಿದ ಭಕ್ಷ್ಯಗಳನ್ನು ವಿವರಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಮೂಗ ದಂಪತಿಯ ಶ್ರಮಕ್ಕೆ ನೆಟ್ಟಿಗರು ಫುಲ್ ಫಿದಾ: ವೈರಲ್ ಆಗ್ತಿದೆ ವಿಡಿಯೊ

ಮೂಗ ದಂಪತಿಯ ಕಿಚನ್ ಹೌಸ್‌ಗೆ ಧ್ವನಿಯಾದ ಮಗ -

Profile
Pushpa Kumari Jan 13, 2026 7:29 PM

ಚಂಡೀಗಢ, ಜ. 13: ಸಾಧಿಸಬೇಕೆನ್ನುವ ಭಾವನೆ ಎಲ್ಲರಲ್ಲೂ ಇರುತ್ತದೆ. ಆದರೆ ಪ್ರಯತ್ನ ಪಟ್ಟರೆ ಎಲ್ಲ ಕೆಲಸವೂ ಸಾಧ್ಯ ಅನ್ನುವುದಕ್ಕೆ ಬಹುಶಃ ಈ ಘಟನೆಯೇ ಸಾಕ್ಷಿ. ಪಂಜಾಬ್ ದಂಪತಿ ವಿಡಿಯೊವೊಂದು ಎಲ್ಲರ ಮನಗೆದ್ದಿದ್ದು ಈ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮ ಮನಸ್ಸಿಗೆ ತೃಪ್ತಿ ನೀಡುತ್ತದೆ. ಮೊಹಾಲಿಯಲ್ಲಿ ಕಿಚನ್ ಹೌಸ್ ನಡೆಸುತ್ತಿರುವ ಕಿವುಡ ಮತ್ತು ಮೂಕ ದಂಪತಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದು, ಇವರ ಈ ಕೆಲಸಕ್ಕೆ ಅವರ ಪುಟ್ಟ ಮಗ ಧ್ವನಿಯಾಗಿ ನೆರವಾಗುತ್ತಿದ್ದಾನೆ. ದಂಪತಿ ತಾವು ತಯಾರಿಸಿದ ಭಕ್ಷ್ಯಗಳನ್ನು ವಿವರಿಸಲು ಮಗುವಿಗೆ ಹೇಳುತ್ತಿದ್ದರೆ ಅವನು ಹೆಮ್ಮೆಯಿಂದ ಪ್ರತಿಯೊಂದು ಖಾದ್ಯವನ್ನು ವಿವರಿಸುತ್ತಿರುವ ದೃಶ್ಯ ವೈರಲ್ (Viral Video) ಆಗಿದೆ.

ಸಾಧಿಸುವ ಛಲ‌ ಇದ್ದರೆ ತಮ್ಮ ಗುರಿಯನ್ನು ತಲುಪಬಹುದು. ಆದರೆ ಎಲ್ಲದಕ್ಕೂ ಸಾಧಿಸುವ ಹುಮ್ಮಸ್ಸು, ಪ್ರಾಮಾಣಿಕತೆ, ಪರಿಶ್ರಮ ಅಗತ್ಯ ಎನ್ನುವುದಕ್ಕೆ ಈ ಕಿವುಡ ಮತ್ತು ಮೂಗ ದಂಪತಿಯೇ ಸಾಕ್ಷಿ. ಮೊಹಾಲಿಯಲ್ಲಿ ಬದುಕನ್ನು ಕಟ್ಟಿಕೊಂಡಿರುವ ದಂಪತಿ ಒಂದು ಸಣ್ಣ ಕಿಚನ್ ಹೌಸ್ ಅಂದರೆ ಮನೆಯಿಂದಲೇ ಆಹಾರ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ವಿಡಿಯೊ ನೋಡಿ:



ಈ ದಂಪತಿಗೆ ಶ್ರವಣ ಮತ್ತು ವಾಕ್ ದೋಷವಿದ್ದರೂ ಅವರ ಪುಟ್ಟ ಮಗ ಅವರಿಗೆ ಧ್ವನಿಯಾಗಿ ನಿಂತಿರುವುದು ಎಲ್ಲರ ಹೃದಯ ಗೆದ್ದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಆ ಪುಟ್ಟ ಬಾಲಕ ತನ್ನ ತಂದೆ-ತಾಯಿಯನ್ನು ಪ್ರೀತಿಯಿಂದ ಪರಿಚಯಿಸುತ್ತಿರುವ ದೃಶ್ಯ ಕಂಡುಬಂದಿದೆ.‌ ತಾಯಿ ಸನ್ನೆಗಳ ಮೂಲಕ ಆ ದಿನ ತಯಾರಿಸಿದ ಆಹಾರದ ಬಗ್ಗೆ ವಿವರಣೆ ನೀಡುತ್ತಿದ್ದರೆ ಮಗ ಅದನ್ನು ಕ್ಯಾಮರಾ ಮುಂದೆ ತನ್ನ ಮಾತುಗಳ ಮೂಲಕ ವಿವರಿಸುತ್ತಾನೆ.

ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದ 3 ವರ್ಷದ ಮಗು

ವಿಡಿಯೊವು ತನ್ನ ಹೆತ್ತವರ ಮುಂದೆ ನಿಂತಿರುವ ಚಿಕ್ಕ ಬಾಲಕನನ್ನು ತೋರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ದಂಪತಿ ಗೌರವದಿಂದ ಕೈಗಳನ್ನು ಮಡಚಿ, ನಾಚಿಕೆಯಿಂದ ನಗುತ್ತಿರುವಾಗ ಅವನು ಅವರನ್ನು ಕ್ಯಾಮರಾಕ್ಕೆ ಪರಿಚಯಿಸುತ್ತಾನೆ. ಪೋಷಕರು ಏನೂ ಮಾತನಾಡದೇ ಇದ್ದರೂ‌ ಅವರ ಮುಖಗಳಲ್ಲಿ ಸಂತೋಷವು ಎದ್ದು ಕಾಣುತ್ತದೆ.

ಅಮ್ಮ ಕೈ ಸನ್ನೆ ಮಾಡುತ್ತಿದ್ದಂತೆ ಮಗ ಇದು ಆಲೂ ಪಲ್ಯ...ಇದು ಕಡಲೆ ಸಾರು ಎಂದು ಪ್ರತಿಯೊಂದು ಪದಾರ್ಥದ ಹೆಸರನ್ನು ಹೆಮ್ಮೆಯಿಂದ ಹೇಳುತ್ತಾನೆ. ಪೋಷಕರು ಮಾತನಾಡಲು ಸಾಧ್ಯವಾಗದೆ ಇದ್ದರೂ ಅವರ ಮುಖದಲ್ಲಿರುವ ನಗು ನಮ್ಮ ಹೃದಯವನ್ನು ತೇವಗೊಳಿಸುತ್ತದೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದ್ದು ನೆಟ್ಟಿಗರೊಬ್ಬರು ''ನಾನು ಮೊಹಾಲಿಗೆ ಭೇಟಿ ನೀಡಿದರೆ ಅಲ್ಲಿಯೇ ಊಟ ಮಾಡುತ್ತೇನೆʼʼ ಎಂದು ಹೇಳಿದ್ದಾರೆ. ಮತ್ತೊಬ್ಬರು, ʼʼಮೊಹಾಲಿ ಸುತ್ತಮುತ್ತಲಿನ ಜನರು ದಯವಿಟ್ಟು ಇವರ ಬಳಿ ಆಹಾರ ಖರೀದಿಸಿʼʼ ಎಂದು ಮನವಿ ಮಾಡಿದ್ದಾರೆ.