ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್‌ಗಾಗಿ ದೇವಾಲಯದೊಳಗೆ ಕಿತ್ತಾಡಿಕೊಂಡ ಭಕ್ತರು; ಈ ವಿಡಿಯೊ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ಉತ್ತರಾಖಂಡದ ಬದರಿನಾಥ ದೇವಾಲಯದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲು ಫೋಟೋಗಳನ್ನು ತೆಗೆದುಕೊಳ್ಳುವ ವಿಚಾರಕ್ಕೆ ಮೆಟ್ಟಿಲುಗಳ ಮೇಲೆ ಭಕ್ತರು ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರೀಲ್ಸ್‌ಗಾಗಿ ದೇವಾಲಯದೊಳಗೆ ಕಿತ್ತಾಡಿಕೊಂಡ ಭಕ್ತರು! ವಿಡಿಯೊ ಇಲ್ಲಿದೆ

Profile pavithra Jul 4, 2025 3:42 PM

ಡೆಹ್ರಾಡೂನ್: ಇತ್ತೀಚೆಗೆ ಉತ್ತರಾಖಂಡದ ಬದರಿನಾಥ ದೇವಾಲಯದ ಮೆಟ್ಟಿಲುಗಳ ಮೇಲೆ ಭಕ್ತರು ಜಗಳವಾಡಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲು ಫೋಟೋಗಳನ್ನು(Photo) ತೆಗೆದುಕೊಳ್ಳುವ ವಿಚಾರಕ್ಕೆ ಈ ಜಗಳ ನಡೆದಿದೆ. ಈ ಗಲಾಟೆ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video)ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಫೋಟೋಗಳನ್ನು ತೆಗೆದುಕೊಳ್ಳಲು ಭಕ್ತರು ಸ್ಥಳದಲ್ಲೇ ಹೊಡೆದಾಡಿದ ದೃಶ್ಯ ಸೆರೆಯಾಗಿದೆ. ದೇವಾಲಯದ ಆವರಣದಲ್ಲಿ ಇಬ್ಬರು ಪುರುಷರು ಪರಸ್ಪರ ಜಗಳವಾಡುತ್ತಾ ಪರಸ್ಪರ ತಳ್ಳುತ್ತಿರುವುದು ಕಂಡುಬಂದಿದೆ. ದೇವಾಲಯದ ಮೆಟ್ಟಿಲುಗಳ ಮೇಲೆ ಒಬ್ಬ ವ್ಯಕ್ತಿ ಫೋಟೋ ತೆಗೆಯಲು ಪ್ರಯತ್ನಿಸಿದಾಗ ಇನ್ನೊಂದು ಗುಂಪು ಅವನನ್ನು ತಡೆಯಲು ಪ್ರಯತ್ನಿಸಿದೆ. ಈ ಕಾರಣಕ್ಕೆ ಅವರ ನಡುವೆ ಹೊಡೆದಾಟ ನಡೆದಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ 35,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಹಾಗೂ ಸೋಶಿಯಲ್ ಮೀಡಿಯಾ ನೆಟ್ಟಿಗರು ಅವರ ವಿರುದ್ಧ ಕಿಡಿಕಾರಿದ್ದಾರೆ. "ದೇವರ ಗುಡಿಯಲ್ಲಿಯೂ ಸಹ ಶಾಂತಿ ಇಲ್ಲ. ಇವರು ಯಾವ ರೀತಿಯ ಜನರು?" ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, "ಅವರು ಇಲ್ಲಿಗೆ ದರ್ಶನಕ್ಕಾಗಿ ಬಂದಿದ್ದಾರೋ ಅಥವಾ ಫೋಟೋಶೂಟ್‌ಗಾಗಿ ಬಂದಿದ್ದಾರೋ?" ಎಂದು ಕಾಮೆಂಟ್ ಮಾಡಿದ್ದಾರೆ. "ಇನ್‌ಸ್ಟಾಗ್ರಾಮ್ ಫೋಟೋಗಳು ದೇವರಿಗಿಂತ ಮುಖ್ಯವಾದಾಗ ಹೀಗಾಗುತ್ತದೆ" ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. "ಇವರು ಭಕ್ತರಲ್ಲ, ಸೋಶಿಯಲ್ ಮೀಡಿಯಾದ ಯೋಧರು" ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಸಾಹಸಕ್ಕೆ ವಯಸ್ಸಿನ ಹಂಗಿಲ್ಲ! 80ನೇ ವಯಸ್ಸಿನಲ್ಲಿ ಸ್ಕೈಡೈವ್ ಮಾಡಿ ದಾಖಲೆ ನಿರ್ಮಿಸಿದ ಮಹಿಳೆ

ಮಹಿಳೆಯೊಬ್ಬಳು ರಸ್ತೆ ಮಧ್ಯದಲ್ಲಿ ಡ್ಯಾನ್ಸ್ ಮಾಡುತ್ತಾ ರೀಲ್ಸ್ ಮಾಡಿದ್ದರಿಂದ ಅದು ಟ್ರಾಫಿಕ್ ಜಾಮ್‍ಗೆ ಕಾರಣವಾದ ಘಟನೆ ಚಂಡೀಗಢದಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಿಂದ ಆಕೆ ಹಾಗೂ ಆಕೆಯ ಅತ್ತಿಗೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತು ಪತ್ನಿಯ ಈ ಕೃತ್ಯದಿಂದ ಪೊಲೀಸ್ ಅಧಿಕಾರಿಯಾಗಿದ್ದ ಆಕೆಯ ಪತಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಈಕೆ ಹತ್ತಿರದ ಹನುಮಾನ್ ದೇವಸ್ಥಾನದಲ್ಲಿ ದರ್ಶನ ಪಡೆಯಲು ಬಂದಾಗ ತನ್ನ ಅತ್ತಿಗೆ ಜೊತೆ ಸೇರಿಕೊಂಡು ಜನನಿಬಿಡ ರಸ್ತೆಯಲ್ಲಿ ರೀಲ್ ಮಾಡಿದ್ದಾಳೆ. ನಡುರಸ್ತೆಯಲ್ಲಿ ಅವಳು ಡ್ಯಾನ್ಸ್ ಮಾಡಿದ್ದರಿಂದ ಅವಳ ಡ್ಯಾನ್ಸ್ ಮುಗಿಯುವವರೆಗೂ ವಾಹನಗಳು ರಸ್ತೆಯಲ್ಲಿ ನಿಂತು ಕಾಯುವ ಹಾಗಾಗಿದೆ. ಇದು ಟ್ರಾಫಿಕ್ ಜಾಮ್‍ಗೆ ಕಾರಣವಾಗಿದೆ.