ಈ ರೋಡ್‌ನಲ್ಲಿ ಸಂಚರಿಸಿದ್ರೆ ಸಾಕು ತಾನಾಗೇ ಮ್ಯೂಸಿಕ್ ನುಡಿಸುತ್ತೆ! ಏನಿದರ ವಿಶೇಷತೆ?
Viral Video: ಮುಂಬೈನ ಪ್ರತಿಷ್ಠಿತ 'ಕೋಸ್ಟಲ್ ರೋಡ್' ಕೇವಲ ಪ್ರಯಾಣಕ್ಕೆ ಮಾತ್ರ ಯೋಗ್ಯವಾಗಿರದೆ ಮನರಂಜನೆ ಗಾಗಿಯೂ ಸುದ್ದಿಯಲ್ಲಿದೆ. ಇಲ್ಲಿನ ಈ ರಸ್ತೆಯ ಒಂದು ನಿರ್ದಿಷ್ಟ ಭಾಗದಲ್ಲಿ ನೀವು ಕಾರು ಚಲಾಯಿಸಿದರೆ, ರಸ್ತೆಯೇ ನಿಮಗಾಗಿ ಸಂಗೀತವನ್ನು ನುಡಿಸುತ್ತದೆ. ಚಲಿಸುವ ಕಾರಿನ ಒಳಗಿನಿಂದ ರಸ್ತೆ ಹೇಗೆ ಧ್ವನಿಸುತ್ತದೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಮುಂಬೈನಲ್ಲಿ ಗಮನ ಸೆಳೆದ ಮ್ಯೂಸಿಕಲ್ ರೋಡ್ -
ಮುಂಬೈ,ಫೆ.12: ಕೋಸ್ಟಲ್ ರೋಡ್' ಮುಂಬೈ ಕೇವಲ ಪ್ರಯಾಣಕ್ಕೆ ಮಾತ್ರ ಯೋಗ್ಯವಾಗಿರದೆ ಮನರಂಜನೆಗಾಗಿಯೂ ಸುದ್ದಿಯಲ್ಲಿದೆ. ಇಲ್ಲಿನ ಈ ರಸ್ತೆಯ ಒಂದು ನಿರ್ದಿಷ್ಟ ಭಾಗದಲ್ಲಿ ನೀವು ಕಾರು ಚಲಾಯಿಸಿದರೆ, ರಸ್ತೆಯೇ ನಿಮಗಾಗಿ ಸಂಗೀತವನ್ನು ನುಡಿಸುತ್ತದೆ. ಚಲಿಸುವ ಕಾರಿನ ಒಳಗಿ ನಿಂದ ರಸ್ತೆ ಹೇಗೆ ಧ್ವನಿಸುತ್ತದೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಳ್ಳಲಾಗಿದೆ.
ಫೆಬ್ರವರಿ 11, 2026 ರಂದು ಈ ವಿಶೇಷ ತಂತ್ರಜ್ಞಾನದ ರಸ್ತೆಯನ್ನು ಉದ್ಘಾಟಿಸಲಾಗಿದೆ. ಈ ಹೊಸ ವೈಶಿಷ್ಟ್ಯದ ಬಗ್ಗೆ ಅನೇಕ ಜನರನ್ನು ಆಶ್ಚರ್ಯ ಮತ್ತು ಕುತೂಹಲಕ್ಕೆ ಒಳಗಾಗಿಸುತ್ತದೆ. ಇದು ಯಾವುದೇ ಸ್ಪೀಕರ್ ಅಥವಾ ಮ್ಯೂಸಿಕ್ ಸಿಸ್ಟಮ್ ನ ಮೂಲಕ ಬರುವ ಶಬ್ದವಾಗಿರದೆ ರಸ್ತೆಯ ಮೇಲ್ಮೈನಲ್ಲಿ 'ರಂಬಲ್ ಸ್ಟ್ರಿಪ್ಸ್' (Rumble Strips) ಎಂಬ ವಿಶೇಷ ವಿನ್ಯಾಸದ ಚಡಿಗಳ ಮೂಲಕ ಕೇಳಿ ಬರುತ್ತದೆ.
ವಿಡಿಯೋ ನೋಡಿ:
𝐌𝐮𝐬𝐢𝐜𝐚𝐥 𝐫𝐨𝐚𝐝 𝐮𝐩𝐝𝐚𝐭𝐞 𝐟𝐫𝐨𝐦 𝐌𝐮𝐦𝐛𝐚𝐢, 𝐌𝐚𝐡𝐚𝐫𝐚𝐬𝐡𝐭𝐫𝐚.
— Infra News India (INI) (@TheINIofficial) February 11, 2026
Here's how the new musical section on the Mumbai Coastal Road sounds!#DevendraFadnavis @mieknathshinde @SunetraA_Pawar #Mumbai #CoastalRoad #MusicalRoad #Maharashtra #India #Infra… https://t.co/5CQss5VR2r pic.twitter.com/bpmHO6sXRP
ವಾಹನಗಳು ಇದರ ಮೂಲಕ ನಿರ್ಗಮಿಸಿ ರಸ್ತೆಯಲ್ಲಿ ಮುಂದುವರಿಯುವಾಗ, ಸ್ಪಷ್ಟವಾದ ರಾಗ ನುಡಿಸಲು ಪ್ರಾರಂಭಿಸುತ್ತದೆ. ಇಲ್ಲಿ ಕಾರಿನ ಸ್ಟೀರಿಯೊದಿಂದ ಶಬ್ದ ಬರುವುದಿಲ್ಲ. ಬದಲಾಗಿ, ರಸ್ತೆ ಮೇಲ್ಮೈಯಲ್ಲಿ ಹಾಕಲಾದ ವಿಶೇಷ ಚಡಿಗಳ ಮೇಲೆ ಟೈರ್‌ಗಳು ಉರುಳುವುದರಿಂದ ಇದು ಉಂಟಾಗುತ್ತದೆ. ವರ್ಲಿಯಿಂದ ನರಿಮನ್ ಪಾಯಿಂಟ್ ಕಡೆಗೆ ತೆರಳುವ ಮಾರ್ಗದಲ್ಲಿ ಸುರಂಗದಿಂದ ಹೊರಬಂದ ನಂತರ ಈ 500 ಮೀಟರ್ ಉದ್ದದ ಮ್ಯೂಸಿಕಲ್ ಸ್ಟ್ರೆಚ್ ಅನುಭವ ಆಗುತ್ತದೆ
ವಾಹನವು ಗಂಟೆಗೆ 70 ರಿಂದ 80 ಕಿ.ಮೀ. ಸ್ಥಿರ ವೇಗದಲ್ಲಿರಬೇಕು. ಈ ವೇಗದಲ್ಲಿ ಹೋದಾಗ ಮಾತ್ರ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ಪ್ರಸಿದ್ಧ 'ಜೈ ಹೋ' ಹಾಡಿನ ಸಂಗೀತ ಸ್ಪಷ್ಟವಾಗಿ ಪ್ರಯಾಣಿ ಕರಿಗೆ ಕೇಳಿಸುತ್ತದೆ. ಸದ್ಯ ಈ ಹೊಸ ಪ್ರಯೋಗವು ಇಂಟರ್ನೆಟ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಬಳಕೆದಾರರೊಬ್ಬರು ಮುಂಬೈನಲ್ಲಿ ಆಧುನಿಕ ತಂತ್ರಜ್ಞಾನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಮೊದಲು ಎಲ್ಲಾ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಗೊಳಿಸಬಹುದೇ ಎಂದು ವ್ಯಂಗ್ಯವಾಡಿದ್ದಾರೆ.