ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಜನಾ ಗಾಯಕನ ಮೇಲೆ ಹಣದ ಮಳೆಯನ್ನೇ ಸುರಿಸಿದ ಭಕ್ತರು: ಕಂತೆ ಕಂತೆ ನೋಟಿನ ವಿಡಿಯೋ ವೈರಲ್‌

Viral Video: ಪ್ರಸಿದ್ಧ ಗಾಯಕ ಕವಿರಾಜ್ ಜಿಗ್ಣೇಶ್ ಅವರು ಭಕ್ತಿ ಗೀತೆಗಳನ್ನು ಹಾಡುತ್ತಿದ್ದಾಗ ಭಕ್ತರು ಅವರ ಮೇಲೆ ನೋಟು ಗಳ ಅಟ್ಟಿಯನ್ನೇ ಮೈ ಮೇಲೆ ಸುರಿದಿದ್ದಾರೆ. ಗಾಯಕರು ನೋಟುಗಳ ರಾಶಿಯ ಹತ್ತಿರವೇ ಹಾಡು ಹಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಭಾರೀ ವೈರಲ್ ಆಗುತ್ತಿದೆ‌. ದೃಶ್ಯ ನೋಡಿದ ಅನೇಕರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಭಜನಾ ಗಾಯಕನ ಮೇಲೆ ಹಣ ಸುರಿದ ಭಕ್ತರು: ವಿಡಿಯೊ ಇಲ್ಲಿದೆ!

ಭಜನಾ ಗಾಯಕನ ಮೇಲೆ ಹಣ ಸುರಿದ ಭಕ್ತರು -

Profile
Pushpa Kumari May 15, 2026 7:52 PM

ಜುನಾಗಢ್,ಮೇ 15: ಗುಜರಾತ್‌ನಲ್ಲಿ ನಡೆದ ಭಕ್ತಿ ಸಂಗೀತ ಕಾರ್ಯಕ್ರಮವೊಂದು ಭಾರೀ ಸುದ್ದಿಯಲ್ಲಿದೆ. ಪ್ರಸಿದ್ಧ ಗಾಯಕ ಕವಿರಾಜ್ ಜಿಗ್ಣೇಶ್ ಅವರು ಭಕ್ತಿ ಗೀತೆಗಳನ್ನು ಹಾಡುತ್ತಿದ್ದಾಗ ಭಕ್ತರು ಅವರ ಮೇಲೆ ನೋಡುಗಳ ಅಟ್ಟಿಯನ್ನೇ ಮೈ ಮೇಲೆ ಸುರಿದಿದ್ದಾರೆ. ಗಾಯಕರು ನೋಟುಗಳ ರಾಶಿಯ ಹತ್ತಿರವೇ ಹಾಡು ಹಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಭಾರೀ ವೈರಲ್ (Viral News) ಆಗುತ್ತಿದೆ‌. ದೃಶ್ಯ ನೋಡಿದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಗವದ್ ಜ್ಞಾನ ಯಾಗಕ್ಕೆ ಸಂಬಂಧಿಸಿದ ಧಾರ್ಮಿಕ ಆಚರಣೆಗಾಗಿ ನೂರಾರು ಜನರು ಒಟ್ಟುಗೂಡಿದ್ದ ಮಾಲಿಯಾ ಹಟಿನಾದಲ್ಲಿ ಈ ಘಟನೆ ನಡೆದಿದೆ. ಗಾಯಕರು ಹಾಡು ಹಾಡುತ್ತಿದ್ದ ವೇದಿಕೆ ಮೇಲೆಯೆ ಹಣದ ರಾಶಿ ಬಿದ್ದಿದ್ದು ಗಾಯಕರು ನೋಟುಗಳ ನಡುವೆ ಕುಳಿತು ಭಜನೆ ಹಾಡುತ್ತಿದ್ದಾರೆ.

ವಿಡಿಯೋ ನೋಡಿ:



ಪ್ರದರ್ಶನ ನಡೆಯುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟುವುದು, ನೃತ್ಯ ಮಾಡುವುದು ಮತ್ತು ಹಾಡುವುದನ್ನು ತೋರಿಸುತ್ತವೆ. ಆರಂಭದಲ್ಲಿ, ವೇದಿಕೆಯ ಬಳಿ ನಿಂತ ಜನರ 10, 20, 50 ಹಾಗೂ 500 ರೂಪಾಯಿ ನೋಟುಗಳನ್ನು ಎಸೆಯಲು ಪ್ರಾರಂಭ ಮಾಡಿದರು. ನಂತರ ಹಲವಾರು ಪ್ರೇಕ್ಷಕರು ಹಣ ತುಂಬಿದ ಚೀಲಗಳನ್ನು ಹೊತ್ತುಕೊಂಡು ವೇದಿಕೆಯ ಬಳಿಗೆ ಬರುತ್ತಿರ ವುದು ಕಂಡುಬಂದಿದೆ. ಸ್ವಯಂಸೇವಕರು ಪ್ರದರ್ಶಕರ ಸುತ್ತಲೂ ಸಂಗ್ರಹವಾಗುತ್ತಿದ್ದ ರಾಶಿಗಳನ್ನು ನಿರ್ವಹಿಸಲು ಹೆಣಗಾಡುತ್ತಿದ್ದರು..

Viral Video: ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಗಾಯಕ ಜಿಗ್ಣೇಶ್ ಅವರು ಅರ್ಧದಷ್ಟು ಹಣದ ರಾಶಿಯಲ್ಲೇ ಮುಳುಗಿದ್ದರು. ವೀಡಿಯೊ ವೈರಲ್ ಆದ ನಂತರ, ಸಂಗ್ರಹಿಸಿದ ಹಣವು ವೈಯಕ್ತಿಕ ಲಾಭಕ್ಕಾಗಿ ಅಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಕೊಡುಗೆಗಳನ್ನು ಧಾರ್ಮಿಕ ಚಟುವಟಿಕೆಗಳು, ದತ್ತಿ ಉಪಕ್ರಮಗಳು ಮತ್ತು ಮುಂದಿನ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸಮುದಾಯ ಕಲ್ಯಾಣ ಯೋಜನೆಗಳಿಗೆ ಬಳಸಲಾಗುವುದು ಎಂದಿದ್ದಾರೆ‌.

ಗುಜರಾತ್‌ನಲ್ಲಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಹಣ ಎಸೆಯುವುದನ್ನು 'ಘೋಲ್' ಎಂದು ಕರೆಯಲಾಗುತ್ತದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕಾರ್ಯಕ್ರಮವನ್ನು ಭಕ್ತಿ ಮತ್ತು ಔದಾರ್ಯ ಎಂದು ನೋಡಿದರೆ ಕೆಲವರು ಹಣ ಮಾಡುವ ತಂತ್ರ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.