Viral Video: ರಷ್ಯಾಕ್ಕೆ ಬರುವವರೇ ಎಚ್ಚರ; ಉಕ್ರೇನ್ ವಶದಲ್ಲಿರುವ ಭಾರತೀಯ ಬಿಚ್ಚಿಟ್ಟ ಕರಾಳತೆ ಏನು?
Russian military: ಉಕ್ರೇನ್ ಸೇನೆಗೆ ಸಿಕ್ಕಿಬಿದ್ದ ಭಾರತೀಯ ಯುವಕ ಸಾಹಿಲ್ ಮೊಹಮ್ಮದ್ ಹುಸೇನ್ ಎಂಬ ಯುವಕನ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ರಷ್ಯಾ ಸೇನೆಯಲ್ಲಿ ಸೇರುವಂತೆ ಒತ್ತಾಯಿಸುವ ವಂಚನೆಯ ಬಗ್ಗೆ ಜಾಗರೂಕರಾಗಿರುವಂತೆ ಭಾರತೀಯರನ್ನು ಅವರು ಎಚ್ಚರಿಸಿದ್ದಾರೆ.
ಉಕ್ರೇನ್ ಸೈನ್ಯಕ್ಕೆ ಸಿಕ್ಕಿಬಿದ್ದ ಭಾರತೀಯ ಯುವಕ -
ನವದೆಹಲಿ: ವಿದ್ಯಾರ್ಥಿ ವೀಸಾದಲ್ಲಿ ಅಧ್ಯಯನಕ್ಕಾಗಿ ರಷ್ಯಾಕ್ಕೆ (Russia) ತೆರಳಿದ್ದ ಗುಜರಾತ್‌ನ ಯುವಕನೊಬ್ಬ ವಿಡಿಯೊ ಸಂದೇಶದಲ್ಲಿ ಜನರು ಯಾವುದೇ ಸಂದರ್ಭದಲ್ಲೂ ರಷ್ಯಾದ ಮಿಲಿಟರಿಗೆ (military) ಸೇರಬೇಡಿ ಎಂದು ವಿನಂತಿಸಿದ್ದಾನೆ. ಸುಳ್ಳು ಮಾದಕವಸ್ತು ಪ್ರಕರಣದ ಆರೋಪ ಹೊರಿಸಿ ಬ್ಲ್ಯಾಕ್‌ಮೇಲ್ ಮಾಡಿದ ನಂತರ ರಷ್ಯಾದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವಂತೆ ಅವರನ್ನು ಒತ್ತಾಯಿಸಲಾಯಿತು ಎಂದು ಅವರು ಹೇಳಿದರು.
ಉಕ್ರೇನ್‌ನಲ್ಲಿ ತೆಗೆದ ವಿಡಿಯೊದಲ್ಲಿ ಸಾಹಿಲ್ ಮೊಹಮ್ಮದ್ ಹುಸೇನ್ ಎಂಬ ವಿದ್ಯಾರ್ಥಿ ಈ ಮನವಿಯನ್ನು ಮಾಡಿದ್ದಾರೆ. ಉಕ್ರೇನ್ ಪಡೆಗಳು ಅವರನ್ನು ಹಿಡಿದ ಬಳಿಕ, ಪ್ರಸ್ತುತ ಉಕ್ರೇನ್‌ನಲ್ಲೇ ಅವರನ್ನು ಇರಿಸಲಾಗಿದ್ದು, ಆ ಸಂದರ್ಭದಲ್ಲಿ ಈ ವಿಡಿಯೊವನ್ನು ಮಾಡಲಾಗಿದೆ.
ಯುದ್ಧ ನಿಲ್ಲಿಸದಿದ್ದರೆ ಮೂರನೇ ಮಹಾಯುದ್ಧ ಫಿಕ್ಸ್; ರಷ್ಯಾ- ಉಕ್ರೇನ್‌ಗೆ ನೇರ ಎಚ್ಚರಿಕೆ ಕೊಟ್ಟ ಟ್ರಂಪ್
ಉಕ್ರೇನ್ ಅಧಿಕಾರಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ, ಗುಜರಾತ್‌ನ ಮೊರ್ಬಿ ಮೂಲದ ಸಾಹಿಲ್ ಮೊಹಮ್ಮದ್ ಹುಸೇನ್ ಅವರು ತಮ್ಮನ್ನು ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಿಸಲು ಭಾರತೀಯ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅವರು ರಷ್ಯಾದಲ್ಲಿ ಅಧ್ಯಯನ ಮಾಡುವುದರ ಜೊತೆಗೆ ಕೂರಿಯರ್ ಕಂಪನಿಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದೆನೆಂದು ತಿಳಿಸಿದ್ದಾರೆ.
ವಿಡಿಯೋ
WATCH | Gujarat student forced to join Russian army, sends SOS video from Ukraine.
— The Tatva (@thetatvaindia) December 22, 2025
The student has been identified as Sahil Mohammad Hussain. pic.twitter.com/QcDsjWONaz
ರಷ್ಯಾದ ಪೊಲೀಸರೇ ತಮ್ಮ ಮೇಲೆ ಸುಳ್ಳು ಮಾದಕವಸ್ತು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದರು. ಜೊತೆಗೆ, ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸಿದರೆ ಆ ಪ್ರಕರಣವನ್ನು ಕೈಬಿಡುವುದಾಗಿ ಪೊಲೀಸರು ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ನಾನು ಸುರಕ್ಷಿತವಾಗಿ ಮನೆಗೆ ಮರಳಲು ಸರ್ಕಾರವು ಪುಟಿನ್ ಅವರೊಂದಿಗೆ ಮಾತನಾಡಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.
ಮತ್ತೊಂದು ವಿಡಿಯೊದಲ್ಲಿ, ಸುಳ್ಳು ಮಾದಕವಸ್ತು ಪ್ರಕರಣದಿಂದ ಮುಕ್ತಿಯಾಗಲು ರಷ್ಯಾದ ಆ ಆಫರ್ ಅನ್ನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ. 15 ದಿನಗಳ ತರಬೇತಿಯ ನಂತರ, ರಷ್ಯನ್ನರು ತನ್ನನ್ನು ಯುದ್ಧದ ಸ್ಥಳಕ್ಕೆ ಕಳುಹಿಸಿದರು ಎಂದು ಅವರು ಹೇಳಿದರು.
ಯುದ್ಧದ ಮುಂಚೂಣಿ ಪ್ರದೇಶಕ್ಕೆ ತಲುಪಿದ ತಕ್ಷಣ ತಾನು ಮಾಡಿದ ಮೊದಲ ಕೆಲಸ ಉಕ್ರೇನ್ ಸೇನೆಗೆ ಶರಣಾಗುವುದೇ ಆಗಿತ್ತು ಎಂದು ಹುಸೇನ್ ಹೇಳಿದ್ದಾರೆ. ಉಕ್ರೇನ್ ಪಡೆಗಳು ಈ ವಿಡಿಯೊವನ್ನು ಗುಜರಾತ್‌ನಲ್ಲಿರುವ ಅವರ ತಾಯಿಗೆ ಕಳುಹಿಸಿ, ರಷ್ಯಾ ಸೇನೆಯಲ್ಲಿ ಸೇವೆ ಮಾಡಲು ಭಾರತೀಯರನ್ನು ಹೇಗೆ ಮೋಸಗೊಳಿಸಲಾಗುತ್ತಿದೆ ಎಂಬ ಬಗ್ಗೆ ಜನಜಾಗೃತಿ ಮೂಡಿಸುವಂತೆ ಅವರಿಗೆ ಮನವಿ ಮಾಡಿವೆ.
ಇದೀಗ ಅವರ ತಾಯಿ ತನ್ನ ಮಗನ ಸುರಕ್ಷಿತ ವಾಪಸಾತಿಗಾಗಿ ದೆಹಲಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದೆ.
ನಾನು 2024ರಲ್ಲಿ ವಿದ್ಯಾಭ್ಯಾಸಕ್ಕಾಗಿ ರಷ್ಯಾಕ್ಕೆ ಬಂದೆ. ಆದರೆ ಹಣಕಾಸು ಹಾಗೂ ವೀಸಾ ಸಮಸ್ಯೆಗಳ ಕಾರಣದಿಂದ ಕೆಲವು ರಷ್ಯನ್ನರನ್ನು ಸಂಪರ್ಕಿಸಿದೆ. ನಂತರ ಅವರು ಮಾದಕವಸ್ತುಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದವರು ಎಂದು ಗೊತ್ತಾಯಿತು. ನಾನು ಯಾವುದೇ ತಪ್ಪು ಕೆಲಸ ಮಾಡಿಲ್ಲ. ಕನಿಷ್ಠ 700 ಜನರನ್ನು ರಷ್ಯಾದಲ್ಲಿ ಮಾದಕವಸ್ತು ಪ್ರಕರಣಗಳಡಿ ಜೈಲಿಗೆ ಹಾಕಲಾಗಿದೆ. ಆದರೆ ರಷ್ಯಾ ಸೇನೆಗೆ ಸೇರ್ಪಡೆಯಾದರೆ ಆರೋಪಗಳನ್ನು ಕೈಬಿಡುವುದಾಗಿ ಜೈಲು ಅಧಿಕಾರಿಗಳು ಅವರಿಗೆ ಆಯ್ಕೆಯನ್ನು ನೀಡಿದರು ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.
ನನಗೆ ಹತಾಶ ಭಾವನೆ ಮೂಡುತ್ತಿದೆ. ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ ರಷ್ಯಾಕ್ಕೆ ಬರುವ ಯುವಜನರಿಗೆ ಈ ಸಂದೇಶ ರವಾನಿಸುತ್ತಿದ್ದೇನೆ. ತುಂಬಾ ಜಾಗರೂಕರಾಗಿರಿ. ಸುಳ್ಳು ಮಾದಕವಸ್ತು ಪ್ರಕರಣದಲ್ಲಿ ನಿಮ್ಮನ್ನು ಸಿಲುಕಿಸಬಹುದು. ನಾನು ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲು ಬಯಸುತ್ತೇನೆ. ದಯವಿಟ್ಟು ಸಹಾಯ ಮಾಡಿ ಎಂದು ಅವರು ಹೇಳಿದರು.
Modi-Putin: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದ; ವಿಷನ್ 2030 ಒಪ್ಪಂದಕ್ಕೆ ಸಹಿ
ಡಿಸೆಂಬರ್ 5 ರಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಂಡಿರುವ ತನ್ನ ನಾಗರಿಕರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು. ಆದರೆ ಹೆಚ್ಚಿನ ನೇಮಕಾತಿಯನ್ನು ತಡೆಯಲು ಎಚ್ಚರಿಕೆ ವಹಿಸುವಂತೆ ಒತ್ತಾಯಿಸಿದರು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಭೇಟಿಯ ಕುರಿತು ವಿಶೇಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಶ್ರಿ, ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದರು. ರಷ್ಯಾದ ಸೈನ್ಯದಿಂದ ಭಾರತೀಯ ನಾಗರಿಕರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ನಮ್ಮ ಸಂಘಟಿತ ಪ್ರಯತ್ನಗಳು ನಿಯಮಿತವಾಗಿ ಮುಂದುವರಿಯುತ್ತವೆ ಎಂದು ಒತ್ತಿ ಹೇಳಿದರು.
ರಷ್ಯಾದ ಮಿಲಿಟರಿಗೆ ಭಾರತೀಯ ನಾಗರಿಕರು ಸೇರದಂತೆ ಅವರು ಎಚ್ಚರಿಸಿದರು. ಅಲ್ಲಿ ಸಿಲುಕಿಕೊಂಡಿರುವ ಜನರು ತಮ್ಮನ್ನು ರಕ್ಷಿಸಿ ಹೊರಗೆ ಕರೆತರುವಂತೆ ಮನವಿ ಮಾಡುತ್ತಿರುವ ಹಲವಾರು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ನಾವು ನಮ್ಮ ನಾಗರಿಕರನ್ನು ಕರೆತರುವ ಪ್ರಯತ್ನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.
ರಷ್ಯಾದಲ್ಲಿ ಸಿಲುಕಿರುವ ಭಾರತೀಯರ ಕುಟುಂಬಗಳು ತಮ್ಮ ಸದಸ್ಯರನ್ನು ಮರಳಿ ಕರೆತರಲು ಸರ್ಕಾರದ ಹಸ್ತಕ್ಷೇಪವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.