ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rashmika-Vijay Wedding: ಏಕಕಾಲದಲ್ಲಿ ಮದುವೆ ಫೋಟೋ ಪೋಸ್ಟ್‌ ಮಾಡಿದ ʻವಿರೋಷ್‌ʼ; ಸಿಕ್ಕಾಪಟ್ಟೆ ವೈರಲ್‌, ವೀವ್ಸ್, ಲೈಕ್ಸ್ ಎಷ್ಟು?

Rashmika Vijay: ರಾಜಸ್ಥಾನದ ಉದಯಪುರದಲ್ಲಿ ಇರುವ ಖಾಸಗಿ ಹೋಟೆಲ್​​ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ನಡೆದಿದೆ. ಫೆಬ್ರವರಿ 26ರಂದು ನಡೆದ ಈ ವಿವಾಹ ಸಮಾರಂಭದ ಫೋಟೋ ಈಗಾಗಲೇ ಔಟ್‌ ಆಗಿದೆ. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಹೆಸರಿಟ್ಟಿದ್ದಾರೆ. ಫೆ. 26ರ ಸಂಜೆ 6.50ಕ್ಕೆ ಸರಿಯಾಗಿ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಏಕಕಾಲದಲ್ಲಿ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ʻವಿರೋಷ್‌ʼ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌; ವೀವ್ಸ್, ಲೈಕ್ಸ್ ಎಷ್ಟು?

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Feb 27, 2026 7:45 AM

ರಾಜಸ್ಥಾನದ ಉದಯಪುರದಲ್ಲಿ ಇರುವ ಖಾಸಗಿ ಹೋಟೆಲ್​​ನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarkonda) ಮದುವೆ ನಡೆದಿದೆ. ಫೆಬ್ರವರಿ 26ರಂದು ನಡೆದ ಈ ವಿವಾಹ ಸಮಾರಂಭದ ಫೋಟೋ ಈಗಾಗಲೇ ಔಟ್‌ ಆಗಿದೆ. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಹೆಸರಿಟ್ಟಿದ್ದಾರೆ. ಫೆ. 26ರ ಸಂಜೆ 6.50ಕ್ಕೆ ಸರಿಯಾಗಿ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಏಕಕಾಲದಲ್ಲಿ ತಮ್ಮ ಇನ್ಸ್‌ಟಾಗ್ರಾಮ್‌ (Instagram) ಖಾತೆಯಲ್ಲಿ ಮದುವೆಯ (Marriage Photo Views) ಫೋಟೋವನ್ನು ಹಂಚಿಕೊಂಡಿದ್ದಾರೆ.

ಮಿಲಿಯನ್ಸ್‌ ಲೈಕ್ಸ್‌

ಫೋಟೋ ಹಂಚಿಕೊಂಡ ಕೆಲವೇ ನಿಮಿಷದಲ್ಲಿ ಸಖತ್‌ ವೈರಲ್‌ ಆಗಿತ್ತು. 20 ನಿಮಿಷಗಳ ಒಳಗಾಗಿ ಇಬ್ಬರ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದ ಈ ಮದುವೆಯ ಚಿತ್ರಗಳು ಸಿಕ್ಕಾಪಟ್ಟೆ ವೈರಲ್‌ ಆಗಿ ಒಂದು ಮಿಲಿಯನ್‌ ಲೈಕ್ಸ್‌ ಗಿಟ್ಟಿಸಿಬಿಟ್ಟಿದ್ದವು.

ಇದನ್ನೂ ಓದಿ: ನಿಜವಾದ ಪ್ರೀತಿ ತೋರಿಸಿಕೊಟ್ಟ ವ್ಯಕ್ತಿ ವಿಜಯ್‌; ಮದುವೆಯ ಫೋಟೊ ಹಂಚಿಕೊಂಡು ರಶ್ಮಿಕಾ ಭಾವುಕ

ರಶ್ಮಿಕಾ ತಮ್ಮ ಪೇಜ್‌ನಲ್ಲಿ ಒಟ್ಟು 8 ಚಿತ್ರಗಳನ್ನು ಹಂಚಿಕೊಂಡಿದ್ದರೆ, ವಿಜಯ್‌ ದೇವರಕೊಂಡ ಒಟ್ಟು 11 ಫೋಟೋಗಳನ್ನು ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಮದುವೆ ಫೋಟೋ ಪೋಸ್ಟ್‌ಮಾಡಿದ 19 ನಿಮಿಷಕ್ಕೆ 1 ಮಿಲಿಯನ್‌ ಲೈಕ್ಸ್‌ ಪಡೆದಿದ್ದರು. ಇನ್ನು ವಿಜಯ್‌ ದೇವರಕೊಂಡ ಒಂದು ನಿಮಿಷ ತಡವಾಗಿ ಅಂದರೆ 20 ನಿಮಿಷಕ್ಕೆ 1 ಮಿಲಿಯನ್ಸ್‌ ಲೈಕ್ಸ್‌ ಪಡೆದುಕೊಂಡಿದ್ದಾರೆ. ರಶ್ಮಿಕಾ ಪೋಸ್ಟ್‌ಗೆ ಈಗ 14.8M ಲೈಕ್ಸ್‌ ಬಂದಿವೆ.

ಕಿತ್ತಳೆ ಬಣ್ಣದ ಸೀರೆಯಲ್ಲಿ ಮಿಂಚಿದ ನಟಿ

ರಶ್ಮಿಕಾ ಕಿತ್ತಳೆ ಬಣ್ಣದ ಸೀರೆಯಲ್ಲಿ, ಮೈತುಂಬ ಆಭರಣ ತೊಟ್ಟು ಅಪ್ಸರೆಯಂತೆ ಕಂಡರೆ, ವಿಜಯ್‌ ದೇವರಕೊಂಡ ಬಿಳಿ ಪಂಚೆ ಮತ್ತು ಕೆಂಪು ಶಾಲು ತೊಟ್ಟು ರಾಜನಂತೆ ಮಿಂಚಿದರು. ʼʼಬೆಸ್ಟ್‌ ಫ್ರೆಂಡ್‌ ಈಗ ನನ್ನ ಪತ್ನಿʼʼ ಎಂದು ವಿಜಯ್‌ ದೇವರಕೊಂಡ ಹೇಳಿದ್ದಾರೆ. ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ರಶ್ಮಿಕಾ ಭಾವುಕರಾಗಿದ್ದು, ಕಣ್ತುಂಬಿಕೊಂಡರು.

ʼʼಅವಳು ನನ್ನ ಜತೆ ಇದ್ದಿದ್ದರೆ ನನ್ನ ದಿನ ಚೆನ್ನಾಗಿರುತ್ತಿತ್ತು ಅಂತ ಅನಿಸುವಷ್ಟು ಅವಳನ್ನು ಮಿಸ್ ಮಾಡಿಕೊಂಡೆ. ಅವಳು ನನ್ನ ಎದುರು ಕುಳಿತಿದ್ದರೆ ನಾನು ಸೇವಿಸುವ ಆಹಾರ ಇನ್ನಷ್ಟು ಆರೋಗ್ಯಕರವಾಗಿರುತ್ತಿದ್ದವುʼʼ ಎಂದು ವಿಜಯ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಕಣ್ತುಂಬಿಕೊಂಡ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿರೋಶ್ ವಿವಾಹದ ಫೋಟೊಗಳು

ʼʼಅವಳು ನನ್ನ ಜತೆ ಇದ್ದರೆ ವ್ಯಾಯಾಮ ಕೂಡ ಹೆಚ್ಚು ಮೋಜಿನಿಂದ ಕೂಡಿರುತ್ತಿದ್ದವು. ನಾನು ಎಲ್ಲೇ ಇದ್ದರೂ ಮನೆಯ ವಾತಾವರಣವನ್ನು ಅನುಭವಿಸಲು ಅವಳು ಬೇಕಾಗಿದ್ದಳು. ಹೀಗಾಗಿ ಅವಳನ್ನು ಮದುವೆಯಾದೆʼʼ ಎಂದಿದ್ದಾರೆ.