Viral News: ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಪ್ರಾಣಿಗಳು ಉಪವಾಸ ಮಾಡುವುದನ್ನು ಕೇಳಿದ್ದೀರಾ? ಈಗ ಚೀನಾದ ಹಿಲೊಂಗ್ ಜಿಯಾಂಗ್ ಪ್ರಾಂತ್ಯದ ಸೈಬೀರಿಯನ್ ಟೈಗರ್ ಪಾರ್ಕ್ ನಲ್ಲಿ ಸುಮಾರು 200 ಸೈಬೀರಿಯನ್ ಹುಲಿಗಳಿಗೆ ಮಧ್ಯಂತರ ಉಪವಾಸ ನಿಯಮವನ್ನು ಜಾರಿಗೆ ತರಲಾಗಿದೆ..ಈ ಉಪವಾಸವು ಫೆಬ್ರವರಿ 1 ರಿಂದ ಮಾರ್ಚ್ 31 ರವರೆಗೆ ನಡೆಯಲಿದೆ.
ಹುಲಿಗಳಿಗೂ ಇಂಟರ್ಮಿಟೆಂಟ್ ಫಾಸ್ಟಿಂಗ್ -
ಚೀನಾ,ಫೆ.25: ಇತ್ತೀಚೆಗೆ ತೂಕ ಇಳಿಸಿಕೊಳ್ಳಲು ಹೆಚ್ಚಿನ ಜನರು ಹರಸಾಹಸ ಮಾಡುತ್ತಾರೆ. ಕೆಲವರಂತೂ ಊಟ,ತಿಂಡಿ ಬಿಟ್ಟು ಜಿಮ್, ವರ್ಕೌಟ್ ಅಂತ ಅದರಲ್ಲೇ ಸಮಯ ಕಳೆಯುತ್ತಾರೆ. ಆದರೆ ಮನುಷ್ಯರೇನೋ ಸರಿ.. ಪ್ರಾಣಿಗಳು ಉಪವಾಸ ಮಾಡುವುದನ್ನು ಕೇಳಿದ್ದೀರಾ? ಈಗ ಚೀನಾದ ಹಿಲೊಂಗ್ ಜಿಯಾಂಗ್ ಪ್ರಾಂತ್ಯದ (Viral News) ಸೈಬೀರಿಯನ್ ಟೈಗರ್ ಪಾರ್ಕ್ ನಲ್ಲಿ ಸುಮಾರು 200 ಸೈಬೀರಿಯನ್ ಹುಲಿಗಳಿಗೆ ಮಧ್ಯಂತರ ಉಪವಾಸ ನಿಯಮವನ್ನು (Intermittent Fasting In China) ಜಾರಿಗೆ ತರಲಾಗಿದೆ.
ಚೀನಾದ ಹೊಸ ವರ್ಷದ ರಜಾದಿನಗಳಲ್ಲಿ ಈ ಪಾರ್ಕ್ ಗೆ ಭೇಟಿ ನೀಡಿರುವವರ ಸಂಖ್ಯೆ ಹೆಚ್ಚಾಗಿತ್ತು. ಫೆಬ್ರವರಿ 17 ರಂದು ಉದ್ಯಾನವನಕ್ಕೆ 7,708 ಪ್ರವಾಸಿಗರು ಭೇಟಿ ನೀಡಿದ್ದು ಮರುದಿನ, ಫೆಬ್ರವರಿ 18 ರಂದು, ಈ ಸಂಖ್ಯೆ 10,000 ದಾಟಿತ್ತು. ಇದು ಉದ್ಯಾನವನದೊಳಗೆ ಹುಲಿಗಳಿಗೆ ಆಹಾರ ನೀಡುವ ಚಟುವಟಿಕೆಯನ್ನು ಹೆಚ್ಚಿಸಲು ಕಾರಣವಾಯಿತು. ಈ ಸಮಯದಲ್ಲಿ ಪ್ರವಾಸಿಗರು ಹುಲಿಗಳಿಗೆ ಅತಿಯಾಗಿ ಮಾಂಸದ ಪದಾರ್ಥಗಳನ್ನು ನೀಡಿದ್ದರಿಂದ ಹುಲಿಗಳ ಆರೋಗ್ಯದ ದೃಷ್ಟಿಯಿಂದ ಪಾರ್ಕ್ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಈ ಉಪವಾಸವು ಫೆಬ್ರವರಿ 1 ರಿಂದ ಮಾರ್ಚ್ 31 ರವರೆಗೆ ನಡೆಯಲಿದೆ.
Viral Video: ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ
ಪಾರ್ಕ್‌ನಲ್ಲಿರುವ 11 ಮುಕ್ತ ವಲಯಗಳಲ್ಲಿ ಪ್ರತಿದಿನ ಒಂದೊಂದು ವಲಯದ ಹುಲಿಗಳಿಗೆ ಉಪ ವಾಸದ ನಿಯಮಗಳು ಇರುತ್ತದೆ. ಈ ದಿನದಂದು ಆವರಣದಲ್ಲಿ ಮಾಂಸದ ಪಟ್ಟಿಯ ಆಹಾರವನ್ನು ನಿಷೇಧಿಸಲಾಗಿದೆ ಎಂದು ಸೂಚನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪ್ರಾಣಿಗಳ ಆರೋಗ್ಯವ ನ್ನು ರಕ್ಷಿಸಲು ಉದ್ಯಾನವನದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರವಾಸಿಗರಲ್ಲಿ ಕೇಳಲಾಗಿದೆ. ಈ ನಿಯಮವು ಹುಲಿಗಳ ತೂಕವನ್ನು ನಿಯಂತ್ರಿಸಲು ಮತ್ತು ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಅಲ್ಲಿನ ಪಾರ್ಕ್ ಈ ಬಗ್ಗೆ ಮಾಹಿತಿ ನೀಡಿದೆ.