ಸಿಕ್ಸ್ತ್ ಸೆನ್ಸ್‌ನಿಂದ ಪಾರಾದ ಶ್ವಾನ; ಲಿವಿಂಗ್ ರೂಂ ಚಾವಣಿ ಕುಸಿಯುವ ಕೆಲವೇ ಕ್ಷಣಗಳ ಮುನ್ನ ಹೊರಗೋಡಿದ ಬುದ್ದಿವಂತ ನಾಯಿ
Viral Video: ಸಾಕು ನಾಯಿಯೊಂದು ತನ್ನ ಅದ್ಬುತ ಸಿಕ್ಸ್ತ್ ಸೆನ್ಸ್ ಮೂಲಕ ತನ್ನ ಪ್ರಾಣ ಉಳಿಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಲಿವಿಂಗ್ ರೂಂನ ಚಾವಣಿಯೊಂದು ದಿಢೀರನೆ ಕುಸಿದು ಬೀಳುವ ಸೂಚನೆ ಸಿಕ್ಕ ತಕ್ಷಣ ಈ ಸಾಕು ನಾಯಿ ಅಲ್ಲಿಂದ ಓಡಿ ಹೋಗಿದೆ.
ಸಾಂದರ್ಭಿಕ ಚಿತ್ರ -
ವಾಷಿಂಗ್ಟನ್, ಜು. 1: ಪ್ರಾಣಿಗಳು ಬುದ್ಧಿಶಕ್ತಿಯಲ್ಲಿ ಮನುಷ್ಯರಿಗಿಂತ ಕಡಿಮೆ ಏನಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸಾಕು ನಾಯಿಯೊಂದು ಅದ್ಬುತ ಯೋಚನಾ ಶಕ್ತಿಯ ಮೂಲಕ ತನ್ನ ಪ್ರಾಣ ಉಳಿಸಿಕೊಂಡಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ಲಿವಿಂಗ್ ರೂಂನ ಚಾವಣಿಯೊಂದು ದಿಢೀರನೆ ಕುಸಿದು ಬೀಳುವ ಕೆಲವೇ ಕ್ಷಣಗಳ ಮೊದಲು ಅಲ್ಲಿದ್ದ ಸಾಕಿ ನಾಯಿ ಓಡಿ ಹೋಗಿದೆ. ಸಿಕ್ಸ್ತ್ ಸೆನ್ಸ್‌ನಿಂದ ಪಾರಾದ ಸಾಕು ನಾಯಿಯ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೊದ ಆರಂಭದಲ್ಲಿ ಶ್ವಾನ ಲಿವಿಂಗ್ ರೂಮಿನೊಳಗಿನ ಸೋಫಾದ ಮೇಲೆ ಶಾಂತವಾಗಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ಕೆಲವು ಸೆಕೆಂಡ್‌ಗಳ ನಂತರ ಸೂಕ್ಷ್ಮವಾದ ಶಬ್ದ ಕೇಳಿಸಲು ಪ್ರಾರಂಭವಾಗುತ್ತದೆ. ಕೂಡಲೇ ಲಿವಿಂಗ್ ರೂಂನ ಚಾವಣಿ ದಿಢೀರನೆ ಕುಸಿದು ಬೀಳುವ ಮೊದಲು ನಾಯಿ ಅಲ್ಲಿಂದ ಹೊರಗೆ ಓಡಿ ಪ್ರಾಣ ಉಳಿಸಿಕೊಂಡಿದೆ. ಈ ರೋಮಾಂಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಡಿಯೊ ನೋಡಿ:
A Ring camera captured a dog exiting his living room as the overhead ceiling creaked, just seconds before sheets of drywall collapsed inside his Texas home. pic.twitter.com/s1PJ78X7rL
— ABC News (@ABC) June 30, 2026
ಕ್ಯಾಥರಿನ್ ಬೌಟಿಸ್ಟಾ ಎಂಬವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಕ್ಯಾಥರಿನ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಸಾಕುನಾಯಿ ಮನೆಯ ಲಿವಿಂಗ್ ರೂಂನ ಸೋಫಾ ಮೇಲೆ ಆರಾಮವಾಗಿ ಮಲಗಿತ್ತು.
ಮೊದಲ ಬಾರಿ ಬೆಂಗಳೂರಿಗೆ ಬಂದ ಹಳ್ಳಿ ಯುವಕರನ್ನು ದೋಚಿದ ಆಟೋ ಚಾಲಕ
ನಾಯಿ ಸೋಫಾದಲ್ಲಿ ವಿಶ್ರಮಿಸುತ್ತಿರುವಾಗ ಚಾವಣಿಯಿಂದ ಸಣ್ಣದಾಗಿ ಬಿರುಕು ಬಿಡುವ ಶಬ್ದ ಕೇಳಿ ಬಂದಿದೆ. ಈ ಸೂಚನೆ ಅರಿತ ನಾಯಿ ತಕ್ಷಣವೇ ಅಲರ್ಟ್ ಆಗಿ ಸೋಫಾದಿಂದ ಎದ್ದು ಬಂದಿದೆ. ನಾಯಿ ಕೋಣೆಯಿಂದ ಹೊರಹೋದ ಮರುಕ್ಷಣವೇ ಚಾವಣಿ ಕುಸಿದು ರೂಮ್ ಮೇಲೆ ಬಿದ್ದಿದೆ.
ಸದ್ಯ ಈ ವಿಡಿಯೊ ಭಾರಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾಯಿಯ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಒರು "ಮನುಷ್ಯರಿಗಿಂತ ನಾಯಿಗಳಿಗೆ ಶ್ರವಣ ಶಕ್ತಿ 4 ಪಟ್ಟು ಹೆಚ್ಚಿರುತ್ತದೆ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼನಿಜಕ್ಕೂ ಬುದ್ದಿವಂತ ನಾಯಿʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.