"ನಮ್ಮ ನಡುವೆ ಧರ್ಮದ ಹಂಗಿಲ್ಲ": ಪಾಕಿಸ್ತಾನಿ ಸ್ನೇಹಿತನನ್ನು ಪರಿಚಯಿಸಿ ಟ್ರೋಲ್ ಆದ ಭಾರತೀಯ ವಿದ್ಯಾರ್ಥಿನಿ ಹೇಳಿದ್ದೇನು?
Viral Video: ಕಝಾಕಿಸ್ತಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ತನ್ನ ರೀಲ್ಸ್‌ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಯುವತಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾಳೆ. ಕೆಲವರು ಇದನ್ನು ಲವ್ ಜಿಹಾದ್. ಇಷ್ಟಾದರೂ ಹಿಂದೂಗಳಿಗೆ ಬುದ್ದಿ ಬರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನಿ ಸ್ನೇಹಿತನನ್ನು ಪರಿಚಯಿಸಿ ಟ್ರೋಲ್ ಆದ ಭಾರತೀಯ ವಿದ್ಯಾರ್ಥಿನಿ -
ನವದೆಹಲಿ, ಜು. 1: ಸ್ನೇಹಕ್ಕೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ ಅನ್ನೋದನ್ನು ಇಲ್ಲೊಬ್ಬ ಯುವತಿ ತೋರಿಸಿ ಕೊಟ್ಟಿದ್ದಾಳೆ. ಕಝಾಕಿಸ್ತಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿ ತನ್ನ ರೀಲ್ಸ್‌ನಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬನನ್ನು ಪರಿಚಯ ಮಾಡಿಕೊಟ್ಟಿದ್ದಳು. ಆದರೆ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ (Viral News) ಆಕೆ ಭಾರಿ ಟ್ರೋಲ್‌ಗೆ ಒಳಗಾಗಿದ್ದಾಳೆ. ಕೆಲವರು ಇದನ್ನು ಲವ್ ಜಿಹಾದ್. ಇಷ್ಟಾದರೂ ಹಿಂದೂಗಳಿಗೆ ಬುದ್ದಿ ಬರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತೀಯ ವಿದ್ಯಾರ್ಥಿನಿ ತನ್ನ ಪಾಕಿಸ್ತಾನಿ ಸಹಪಾಠಿಯನ್ನು ರೀಲ್ಸ್‌ನಲ್ಲಿ ಪರಿಚಯಿಸಿದ್ದಳು. ಈ ವಿಡಿಯೊ ಟ್ರೋಲ್ ಆಗುತ್ತಿದ್ದಂತೆ, ದ್ವೇಷದ ಕಮೆಂಟ್‌ಗಳಿಗೆ ಆಕೆ ನೀಡಿರುವ ಪ್ರತಿಕ್ರಿಯೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ವಿದ್ಯಾರ್ಥಿನಿ ಶವ್ನಿ ಉಕೇಶ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಮ್ಜಾ ಎಂಬ ಪಾಕಿಸ್ತಾನಿ ಸ್ನೇಹಿತನ ಜತೆಗಿನ ರೀಲ್ಸ್ ಒಂದನ್ನು ಹಂಚಿಕೊಂಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೊ ನೋಡಿ:
ಅದಕ್ಕೆ HAMZA 2.0 ಎಂದು ಶೀರ್ಷಿಕೆ ಕೊಟ್ಟು ಟ್ರೆಂಡಿಂಗ್ ಹಾಡನ್ನು ಬಳಸಿದ್ದರು. ಆದರೆ ಈ ವಿಡಿಯೊಕ್ಕೆ ಕೋಮುವಾದಿ ಕಮೆಂಟ್‌ಗಳ ಸುರಿಮಳೆಯೆ ಬಂದಿದೆ. ಕೆಲವರು ಇಬ್ಬರ ಸ್ನೇಹಕ್ಕೆ ‘ಲವ್ ಜಿಹಾದ್’ ಎಂದರೆ ಇನ್ನು ಕೆಲವರು ವೈಯಕ್ತಿಕವಾಗಿ ನಿಂದಿಸಿ ನಿಮಗೆ ಬುದ್ದಿ ಕಡಿಮೆ ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ.
ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ
ಒಬ್ಬರು, "ಭಾರತೀಯ ಹುಡುಗಿಯನ್ನು ಮತಾಂತರಿಸುತ್ತಿರುವ ಪಾಕಿಸ್ತಾನಿ ಹುಡುಗರನ್ನು ನೋಡಿದ್ದೇವೆ. ಸುರಕ್ಷಿತವಾಗಿರಿ ಹುಡುಗಿ" ಎಂದು ಎಚ್ಚರಿಕೆ ನೀಡಿದ್ದಾರೆ. ಮತ್ತೊಬ್ಬರು, ʼʼಎಚ್ಚರಿಕೆಯಿಂದಿರಿ ಈ ಸ್ನೇಹ ಒಳ್ಳೆಯದಲ್ಲʼʼ ಎಂದಿದ್ದಾರೆ. ಕಮೆಂಟ್‌ಗಳು ಮಿತಿ ಮೀರುತ್ತಿದ್ದಂತೆ ಶಾವ್ನಿ ನೇರವಾಗಿಯೇ ತಿರುಗೇಟು ನೀಡಿದ್ದಾರೆ.
"ನಿಮ್ಮ ಇಂತಹ ಆಲೋಚನೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಸಹೋದರ. ನಾವು ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು. ನಾವು ಒಂದೇ ಗುಂಪಿನಲ್ಲಿದ್ದೇವೆ, ಆದ್ದರಿಂದ ನಾವೆಲ್ಲರೂ ಸ್ನೇಹಿತರು. ದಯವಿಟ್ಟು ನಕಾರಾತ್ಮಕತೆಯನ್ನು ದೂರವಿಡಿ. ನಮಗೆ ಜಾತಿ, ಧರ್ಮ ಬೇಕಾಗಿಲ್ಲ. ವಿದೇಶದಲ್ಲಿ ಅಧ್ಯಯನ ಮಾಡುವಾಗ ನಮಗೆ ಯಾವುದೇ ಗಡಿಗಳಿಲ್ಲ, ನಮಗೆ ಯಾವುದೇ ವ್ಯತ್ಯಾಸಗಳಿಲ್ಲ, ನಾವೆಲ್ಲರೂ ಒಟ್ಟಿಗೆ ವಾಸಿಸುತ್ತೇವೆ ಮತ್ತು ಶಾಂತಿಯುತವಾಗಿ ಒಟ್ಟಿಗೆ ಅಧ್ಯಯನ ಮಾಡುತ್ತೇವೆ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.