ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆಯೇ ಮಲಗಿದ ಮಹಿಳೆ: "ಇದು ನಿಜವಾದ ಲಿಂಗ ಸಮಾನತೆ" ಎಂದ ನೆಟ್ಟಿಗರು

Viral Video: ಕುಡಿತದ ಮತ್ತಿನಲ್ಲಿ 32 ವರ್ಷದ ಮಹಿಳೆ ಹಗಲು ಹೊತ್ತಿನಲ್ಲಿಯೇ ಜನಸಂದಣಿಯ ರಸ್ತೆಯಲ್ಲಿ ಮಲಗಿ ಹೈಡ್ರಾಮಾ ಮಾಡಿದ್ದಾಳೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಯುವತಿಯ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಮಹಿಳೆಯರಿಂದ ಇಡೀ ಸ್ತ್ರೀ ಕುಲಕ್ಕೆ ಅವಮಾನ ಎಂದು ಹಲವರು ಕಿಡಿಕಾರಿದ್ದಾರೆ.

ಕುಡಿತದ ಮತ್ತಿನಲ್ಲಿ ರಸ್ತೆ ಮಧ್ಯೆಯೇ ಮಲಗಿದ ಮಹಿಳೆ

ಉತ್ತರ ಪ್ರದೇಶದ ನೋಯ್ಡಾದಲ್ಲಿ ರಸ್ತೆ ಮಧ್ಯೆಯೇ ಮಲಗಿದ ಯುವತಿ -

Profile
Pushpa Kumari Jun 22, 2026 7:12 PM

ಲಖನೌ, ಜೂ. 22: ಮದ್ಯದ ಅಮಲಿನಲ್ಲಿ ಮಹಿಳೆಯೊಬ್ಬಳು ಅವಾಂತರ ಸೃಷ್ಟಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಕುಡಿತದ ಮತ್ತಿನಲ್ಲಿ 32 ವರ್ಷದ ಮಹಿಳೆ ಹಗಲು ಹೊತ್ತಿನಲ್ಲಿಯೇ ಜನಸಂದಣಿ ಸೇರಿರುವ ರಸ್ತೆಯಲ್ಲಿ ಮಲಗಿ ಹೈಡ್ರಾಮಾ ಮಾಡಿದ್ದಾಳೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral News) ಆಗಿದ್ದು, ಯುವತಿಯ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಮಹಿಳೆಯರಿಂದ ಇಡೀ ಸ್ತ್ರೀ ಕುಲಕ್ಕೆ ಅವಮಾನ ಎಂದು ಹಲವರು ಕಿಡಿಕಾರಿದ್ದಾರೆ.

ವಾಹನಗಳ ತೀವ್ರ ದಟ್ಟಣೆ ಇದ್ದರೂ ಹಗಲಿನಲ್ಲೇ ರಸ್ತೆಗೆ ಅಡ್ಡಲಾಗಿ ಮಲಗಿದ್ದಾಳೆ. ಮದ್ಯದ ಅಮಲಿನಲ್ಲಿ ತೇಲುತ್ತಾ ಕೈಯಲ್ಲಿ ಸಿಗರೇಟ್ ಹಿಡಿದು ವಾಹನ ಸವಾರರಿಗೆ ತೊಂದರೆ ನೀಡಿದ್ದಾಳೆ. ಮಹಿಳೆ ಆ ಸ್ಥಳದಿಂದ ತೆರಳಲು ನಿರಾಕರಿಸಿದ್ದರಿಂದ ವಾಹನಗಳ ದೊಡ್ಡ ಸಾಲೇ ಕಂಡು ಬಂತು. ಇದರಿಂದಾಗಿ ಆ ಪ್ರದೇಶದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಆಕೆ ಒಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿದ್ದು ಹತ್ತಿರದಲ್ಲಿ ಎರಡು ಬಾಟಲಿ ಮದ್ಯವನ್ನು ಸಹ ಇಡಲಾಗಿತ್ತು.

ವಿಡಿಯೊ ನೋಡಿ:



​ಈ ದೃಶ್ಯವು ಗ್ರೇಟರ್ ನೋಯ್ಡಾ ವೆಸ್ಟ್‌ನ ಬಿಸ್ರಾಖ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈಕೆ ಇಲ್ಲಿನ ಅಪಾರ್ಟ್‌ಮೆಂಟ್ ಸೊಸೈಟಿಯೊಂದರ ನಿವಾಸಿ. ಜನರು ಮಹಿಳೆಯನ್ನು ರಸ್ತೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವೊಲಿಸುತ್ತಿರುವುದು ಕಂಡುಬಂದಿದ್ದು ಪದೇ ಪದೆ ವಿನಂತಿಸಿದ ನಂತರವೂ ಅವಳು ತೆರಳಲು ನಿರಾಕರಿಸಿದ್ದಾಳೆ‌.

ಲಂಡನ್‌ನ ಕಟ್ಟಡದ ಮೇಲಿಂದ ಬಿದ್ದ ಮಗುವನ್ನು 'ಕ್ಯಾಚ್' ಹಿಡಿದು ಜೀವ ಉಳಿಸಿದ ಭಾರತೀಯ

ಆಕೆ ವಿಪರೀತ ಮದ್ಯ ಸೇವಿಸಿ ರಸ್ತೆಯ ಮಧ್ಯೆ ಮಲಗಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. ವಾಹನ ಸವಾರರು ಸತತವಾಗಿ ಹಾರ್ನ್ ಮಾಡುತ್ತಿದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ರಸ್ತೆಯಲ್ಲಿಯೇ ಬಿದ್ದಿದ್ದಾಳೆ. ಕೊನೆಗೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ವೈರಲ್ ಆಗಿದ್ದು ಟೀಕೆ ವ್ಯಕ್ತವಾಗಿದೆ.

ನೆಟ್ಟಿಗರೊಬ್ಬರು "ಇದು ನಿಜವಾದ ಲಿಂಗ ಸಮಾನತೆ. ಮಹಿಳೆಯರು ರಸ್ತೆ ಬದಿ ಮನ ರಂಜನೆಯನ್ನು ಮಾಡುವುದರಲ್ಲಿ ಏಕೆ ಹಿಂದೆ ಉಳಿಯಬೇಕು?” ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ʼʼಪುರುಷರು ಹಿಂದೆ ಇರುವ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರುವುದನ್ನು ನೋಡಲು ಇಷ್ಟಪಡುತ್ತೇನೆʼʼ ಎಂದಿದ್ದಾರೆ. ಇನ್ನೊಬ್ಬರು "ಇದೇ ಸ್ಥಳದಲ್ಲಿ ಪುರುಷ ಇರುತ್ತಿದ್ದರೆ ಸರಿಯಾದ ಒದೆ ಬೀಳುತ್ತಿತ್ತು.‌‌ ಆದರೆ ಪಕ್ಷಪಾತದ ಕಾನೂನು ಗಳಿಂದ ಮಹಿಳೆಯರಿಗರ ಏನೂ ಆಗುವುದಿಲ್ಲ" ಎಂದು ಹೇಳಿದ್ದಾರೆ.