ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಂತ್ಯಕ್ರಿಯೆಯ ವೇಳೆ ಹೆಲಿಕಾಪ್ಟರ್‌ನಿಂದ ಹಣದ ಸುರಿಮಳೆ; ಏನಿದು ವಿಚಿತ್ರ ಘಟನೆ?

ಡ್ಯಾರೆಲ್ ಥಾಮಸ್ ಎಂಬ ವ್ಯಕ್ತಿಯ ಕೊನೆಯ ಆಸೆಯನ್ನು ಈಡೇರಿಸಲು ಅವನ ಕುಟುಂಬವು ಅವನ ಅಂತ್ಯಕ್ರಿಯೆಯ ವೇಳೆ ಹೆಲಿಕಾಪ್ಟರ್‌ನಲ್ಲಿ ಹಣ ಹಾಗೂ ಗುಲಾಬಿ ದಳದ ಸುರಿಮಳೆ ಸುರಿಸಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video)ಆಗಿವೆ.

ಹೆಲಿಕಾಪ್ಟರ್‌ನಿಂದ ಹಣದ ಸುರಿಮಳೆ; ವೈರಲಾಗ್ತಿರೋ ವಿಡಿಯೊ ನೋಡಿ

Profile pavithra Jul 2, 2025 3:52 PM

ಕೆಲವರು ಹಣ, ಐಶ್ಚರ್ಯವಿದ್ದರೆ ಅದನ್ನು ತನ್ನ ಮಕ್ಕಳು, ಮರಿಮೊಮ್ಮಕ್ಕಳಿಗಾಗಿ ಇಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಾವಿನ ಬಳಿಕವೂ ದಾನ ಮಾಡುವುದನ್ನು ಬಿಡಲಿಲ್ಲ! ಏನಿದು ಘಟನೆ...? ಇವಾಗಲೂ ದಾನಧರ್ಮವೆಂಬುದು ಇದೆಯಾ ಎಂದು ಆಶ್ಚರ್ಯಪಡುತ್ತಿದ್ದೀರಾ...? ಹೌದು ಡೆಟ್ರಾಯಿಟ್‌ನ ಡ್ಯಾರೆಲ್ ಥಾಮಸ್ ಎಂಬ ದಾನಶೀಲ ತನ್ನ ಮರಣದ ನಂತರವೂ, ತಾನು ಪ್ರೀತಿಸಿದ ಸಮುದಾಯಕ್ಕೆ ಏನಾದರೂ ದಾನ ನೀಡಲು ಬಯಸಿದ್ದನು. ಹಾಗಾಗಿ ಅವನ ಕುಟುಂಬವು ಅದಕ್ಕಾಗಿ ಒಂದು ಅತ್ಯುತ್ತಮ ಮಾರ್ಗವನ್ನು ಕಂಡುಕೊಂಡಿತ್ತು. ಥಾಮಸ್ ಅಂತ್ಯಕ್ರಿಯೆಯ ವೇಳೆ ಆತನ ಕುಟುಂಬವು ಹೆಲಿಕಾಪ್ಟರ್ ಒಂದನ್ನು ವ್ಯವಸ್ಥೆ ಮಾಡಿ ಅದರ ಮೂಲಕ ಹಣದ ಮಳೆ ಸುರಿಸಿತು. ಆ ಮೂಲಕ ಥಾಮಸ್‌ನ ಅಂತಿಮ ಆಸೆಯನ್ನು ಪೂರೈಸಿತು. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿವೆ.

ಜೂನ್ 15 ರಂದು ಥಾಮಸ್(58)ನಿಧನನಾದನು.ಅವನು ಜೀವಂತವಾಗಿರುವಾಗ ಸಾಕಷ್ಟು ದಾನಧರ್ಮಗಳನ್ನು ಮಾಡಿದ್ದನಂತೆ. ಆತನ ಇಬ್ಬರು ಪುತ್ರರು ಅಪ್ಪನ ಆಸೆ ಪೂರೈಸಲು ಹೆಲಿಕಾಪ್ಟರ್‌ ಒಂದನ್ನು ವ್ಯವಸ್ಥೆ ಮಾಡಿ ಅದರ ಮೂಲಕ ನೆರೆದಿದ್ದ ಜನರ ಮೇಲೆ ಹಣದ ಸುರಿಮಳೆ ಹರಿಸಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಸುದ್ದಿಯನ್ನೂ ಓದಿ:Viral Video: ಮಗನ ಜತೆ ಸಖತ್‌ ಆಗಿ ಹೆಜ್ಜೆ ಹಾಕಿದ ತಾಯಿ; ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದೇಕೆ?

ಆದರೆ ಅಂತ್ಯಕ್ರಿಯೆಯ ವೇಳೆ ಹೆಲಿಕಾಪ್ಟರ್‌ನಿಂದ ಗುಲಾಬಿ ದಳಗಳನ್ನು ಸುರಿಸುವ ಬಗ್ಗೆ ಪೊಲೀಸರಿಗೆ ಮುಂಚಿತವಾಗಿ ತಿಳಿಸಲಾಗಿತ್ತು. ಆದರೆ ಹಣವನ್ನು ಬೀಳಿಸುವುದರ ಬಗ್ಗೆ ಅವರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಪ್ರಸ್ತುತ ಈ ಘಟನೆಯ ತನಿಖೆ ನಡೆಸುತ್ತಿದೆ. ಆದರೆ, ಡೆಟ್ರಾಯಿಟ್ ಪೊಲೀಸರು ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ದೃಢಪಡಿಸಿದ್ದಾರೆ.