ಭಾರತದ ರಸ್ತೆಯಲ್ಲಿ ಹಾರ್ನ್ ಮಾಡುವುದು ಕಿರಿಕಿರಿಯಲ್ಲ! ಸುರಕ್ಷತೆಯ ಕಾಳಜಿ! ಟೀಕಾಕಾರರಿಗೆ ಉತ್ತರ ನೀಡಿದ ವಿದೇಶಿ ಮಹಿಳೆ
Viral Video: ಭಾರತದ ರಸ್ತೆಗಳಲ್ಲಿ ವಾಹನಗಳು ಹಾರ್ನ್ ಮಾಡುವ ಪದ್ದತಿ ಹಿಂದಿನಿಂದಲೂ ಇದೆ. ಇದನ್ನು ವೀಕ್ಷಿಸಿದ ಕೆಲವು ವಿದೇಶಿಗರು ಭಾರತ ಒಂದು ಹಿಂದುಳಿದ ದೇಶ ಎಂದು ಅಣಕಿಸುತ್ತಿತ್ತು. ಇದೀಗ ಭಾರತದ ಹಾರ್ನ್ ಸಂಸ್ಕೃತಿಯನ್ನು "ಗೇಲಿ ಮಾಡುವ" ಜನರ ಗುಂಪೊಂದಕ್ಕೆ ಪ್ರತಿಕ್ರಿಯಿಸಿದ ಡಚ್ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ವೀಡಿಯೊ ಮೂಲಕ ತಕ್ಕ ಉತ್ತರವನ್ನೇ ನೀಡಿದ್ದಾರೆ.
ಭಾರತದ ‘ಹಾರ್ನ್’ ಸಂಸ್ಕೃತಿಗೆ ಬೆಂಬಲಿಸಿದ ಡಚ್ ಮಹಿಳೆ -
ನವದೆಹಲಿ,ಅ.5: ಭಾರತದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಾಪಾಡಲು ಸಾರಿಗೆ ಇಲಾಖೆಯೂ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಯಾವುದೇ ಅವಘಡ ಉಂಟು ಮಾಡ ಬಾರದೆಂದು ಭಾರತದ ರಸ್ತೆಗಳಲ್ಲಿ ವಾಹನಗಳು ಹಾರ್ನ್ ಮಾಡುವ ಪದ್ದತಿ ಹಿಂದಿನಿಂದಲೂ ಇದೆ. ಇದನ್ನು ವೀಕ್ಷಿಸಿದ ಕೆಲವು ವಿದೇಶಿಗರು ಭಾರತ ಒಂದು ಹಿಂದುಳಿದ ದೇಶ ಎಂದು ಅಣಕಿಸುತ್ತಿತ್ತು. ಇದೀಗ ಭಾರತದ ಹಾರ್ನ್ ಸಂಸ್ಕೃತಿಯನ್ನು "ಗೇಲಿ ಮಾಡುವ" ಜನರ ಗುಂಪೊಂದಕ್ಕೆ ಪ್ರತಿಕ್ರಯಿ ಸಿದ ಡಚ್ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ವೀಡಿಯೊ (Viral News) ಮೂಲಕ ತಕ್ಕ ಉತ್ತರವನ್ನೇ ನೀಡಿದ್ದಾರೆ.
ಡಚ್ ಮೂಲದ ಇವಾನಾ ಎಂಬ ಮಹಿಳೆ ಹಲವಾರು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಹಾರ್ನ್ ಮಾಡುವುದು ಕಿರಿಕಿರಿ ಎಂದು ಕೆಲವರು ಹೇಳಿದ್ದರು. ಆದರೆ ಭಾರತ ಮತ್ತು ಆಗ್ನೇಯ ಏಷ್ಯಾದ ಬಹು ಭಾಗದಲ್ಲಿ "ಹಾರ್ನ್ ಮಾಡುವುದು "ಕೇವಲ ಶಬ್ದವಲ್ಲ, ಅದು ರಸ್ತೆಯ ಭಾಷೆ" ಎಂದು ಅವರು ವಿವರಿಸಿದರು.
ವಿಡಿಯೋ ನೋಡಿ:
ಭಾರತದಂತಹ ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ಪ್ರಯಾಣಿಕರಿಗೆ ಜಾಗೃತಿ ಮೂಡುಸಲು ಅಥವಾ ಓವರ್‌ಟೇಕ್ ಮಾಡುವಾಗ ಎಚ್ಚರಿಸಲು ಹಾರ್ನ್ ಅನ್ನೋದು ಅತ್ಯಂತ ಅಗತ್ಯವಾದ ಮತ್ತು ಶಿಸ್ತಿನ ಸಂವಹನ ಮಾರ್ಗವಾಗಿದೆ. ರಸ್ತೆಯನ್ನು ಬಳಸುವ ಇತರರಿಗೆ ತಮ್ಮ ಉಪಸ್ಥಿತಿಯನ್ನು ತಿಳಿಸುವುದು ಮತ್ತು ಮುನ್ನೆಚ್ಚರಿಕೆ ನೀಡುವುದು ಸೌಜನ್ಯದ ಕ್ರಮ ಎಂದರು.
ನಾವು ಎಲ್ಲಾ ಸಾಂಸ್ಕೃತಿಕ ಆಚರಣೆಗಳನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿಯೇ ಅಳೆಯಬೇಕೇ ಅಥವಾ ಜಗತ್ತಿನಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಆಚರಣೆಗಳಿಗೆ ಬುದ್ದವಾಗಿರಬೇಕೆ? ಎಂದು ಇವಾನಾ ಪ್ರಶ್ನಿಸಿದ್ದಾರೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಜನರು ಆ ವಿದೇಶಿ ಮಹಿಳೆಯನ್ನು ಶ್ಲಾಘಿಸಿದ್ದಾರೆ,
ಬಳಕೆದಾರರು ಎಲ್ಲವನ್ನೂ ಪಾಶ್ಚಿಮಾತ್ಯ ದೇಶಗಳೊಂದಿಗೆ ಹೋಲಿಸದಂತೆ ಜನರಿಗೆ ಕರೆ ನೀಡಿದ್ದಕ್ಕಾಗಿ ಮೆಚ್ಚುಗೆ ನೀಡಿದ್ದಾರೆ. ಬಳಕೆದಾರೊಬ್ಬರು ಹಾರ್ನ್ ಮಾಡುವುದರಿಂದಲೇ ಪ್ರತಿದಿನ ಲಕ್ಷಾಂತರ ಅಪಘಾತಗಳು ತಪ್ಪುತ್ತಿವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.